ಮೈಸೂರಿನಲ್ಲಿ ಹಂಜ್, ಭಟ್ಟ ವಿರುದ್ಧ ಸರ್ವ ಬಸವಪರ ಸಂಘಟನೆಗಳ ಸಭೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಮೈಸೂರು

ನಗರದ ಬಸವ ಕೇಂದ್ರದಲ್ಲಿ ಸರ್ವ ಬಸವಪರ ಸಂಘಟನೆಗಳ ಸಭೆ ಬುಧವಾರ ನಡೆಯಿತು.

ಬಸವತತ್ವ ವಿರೋಧಿ ರವಿ ಹಂಜ್ ವಿಶ್ವೇಶ್ವರ ಭಟ್ಟ ಸಂಪಾದಕರಾಗಿರುವ ವಿಶ್ವವಾಣಿಯಲ್ಲಿ ವಿಶ್ವಗುರು, ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದನ್ನು ಸಭೆಯಲ್ಲಿ ಖಂಡಿಸಲಾಯಿತು.

ಲಿಂಗಾಯತ ರಾಜಕಾರಣಿಗಳು, ಮಠಾಧೀಶರುಗಳು, ಸಂಘಟನೆಗಳು ಇಲ್ಲಿಯವರೆಗೆ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟನ ಮೇಲೆ ಕ್ರಮ ಕೈಗೊಳ್ಳಲು ಸರಕಾರದ ಮೇಲೆ ಒತ್ತಡ ತರದಿರುವುದರ ಬಗ್ಗೆ ಸಭೆಯಲ್ಲಿ ಹಲವರು ಆಕ್ರೋಶಗೊಂಡರು.

ಹಂಜ್ ಮತ್ತು ಭಟ್ಟನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಲು ತೀರ್ಮಾನಿಸಲಾಯಿತು.

ಮುಂದಿನ ಕ್ರಮವನ್ನು ಜರುಗಿಸುವ ಬಗ್ಗೆ ಜಿಲ್ಲೆಯ ಸಂಘಟನೆಗಳ ಮುಖ್ಯಸ್ಥರ ಹಾಗೂ ಮಠಾಧೀಶರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಚಿಂತಕ ಹಲ್ಲರೆ ಶಿವಬುದ್ದಿ ಅವರು ಮಾತನಾಡಿ, ರವಿ ಹಂಜ್ ಮತ್ತು ವಿಶ್ವವಾಣಿಯ ವಿಶ್ವೇಶ್ವರಭಟ್ಟ ಇಬ್ಬರೂ ಕೂಡ ಬಸವಣ್ಣನವರ ವಿಚಾರವಾಗಿ ತುಂಬಾ ಅವಿವೇಕತನದಿಂದ ನಡೆದುಕೊಳ್ಳುತ್ತಿರುವ ಬಗ್ಗೆ ಅವರ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಅನುಭವ ಮಂಟಪವೆಂಬ ಅಂಕಣದಿಂದ ತಿಳಿಯುತ್ತಿದೆ.

ಇವರು ಉದ್ದೇಶಪೂರ್ವಕವಾಗಿಯೇ ಬಸವಣ್ಣನವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿರುವುದರಿಂದ ಹಾಗೂ ಮುಂದೆ ಇದೇ ರೀತಿ ಘಟನೆಗಳು ಬೇರೊಬ್ಬರಿಂದಲೂ ನಡೆಯುವ ಸಾಧ್ಯತೆ ಇರುವ ಕಾರಣ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಸಭೆಯನ್ನು ಉದ್ದೇಶಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹದೇವಪ್ಪ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ನಗರ ಘಟಕದ ಅಧ್ಯಕ್ಷ ಪ್ರಕಾಶ, ದೂರ ಗ್ರಾಮದ ಉಮೇಶ, ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮದ ಸುರೇಶ, ವಿಶ್ವಬಸವ ಸೇನೆಯ ಅಧ್ಯಕ್ಷರಾದ ಬಸವಯೋಗಿಶ ಗುರುಗಳು, ಬಸವ ಸೇನೆಯ ಕಲ್ಪುರ ಮಹೇಶ, ರೈತ ಸಂಘದ ಮಾದಪ್ಪ, ವೀರ ಗಣಾಚಾರಿ ಸಂಘದ ಸದಾನಂದಮೂರ್ತಿ ಮತ್ತು ಕುಮಾರ, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಹಾಗೂ ಬಸವಾಭಿಮಾನಿಗಳು ಉಪಸ್ಥಿತರಿದ್ದರು.

Share This Article
1 Comment
  • ಉತ್ತಮ ಅಭಿಪ್ರಾಯ. ಇದೇ ರೀತಿ ರಾಜ್ಯದ ಎಲ್ಲಾ ಕಡೆ ಆಗಬೇಕಿದೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು