ಸಿಂಧನೂರಿನಲ್ಲಿ ನವರಾತ್ರಿ ಪ್ರಯುಕ್ತ  9 ಬಸವಾದಿ ಶಿವಶರಣೆಯರ  ಸ್ಮರಣೆ

ಸಿಂಧನೂರು :

 ಕಾರ್ಯಕ್ರಮವನ್ನು ಸಿಂಧನೂರಿನ ಬಸವಪರ ಸಂಘಟನೆಗಳ ಸಹಯೋಗದಲ್ಲಿ 11-10-2026 ರಿಂದ 19-10-2026 ಒಂಬತ್ತು ದಿನಗಳವರೆಗೆ ಪ್ರತಿದಿನ ಸಂಜೆ ಸಿಂಧನೂರಿನ ವಿವಿಧ ಶರಣೆಯರ ಅವರ ಮನೆಯ ಸದಸ್ಯರ ಆತಿಥ್ಯದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಒಂಬತ್ತು ಜನ ಬಸವಾದಿ ಶರಣೆಯರ ಪರಿಚಯ ಮಾಡಿಕೊಡುತ್ತ, ಅವರ ವಚನಗಳ ವಿಶ್ಲೇಷಣೆಯನ್ನು ಶರಣೆಯರು ಮಾಡಿದರು. ನಂತರ 15 ನಿಮಿಷ ಪ್ರತಿದಿನ ಸಂವಾದ ಕಾರ್ಯಕ್ರಮ ನಡೆಯಿತು.

11-10-2026 ರಂದು ಪಿ. ಲಕ್ಷ್ಮೀ ಮತ್ತು ಪಿ.ರುದ್ರಪ್ಪ,  ಅದ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ(ರಿ) ರಾಯಚೂರು ಜಿಲ್ಲಾ ಘಟಕ ಇವರ ಮನೆಯಲ್ಲಿ ನಡೆಯಿತು. ನೀಲಮ್ಮ ತಾಯಿ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಸಾವಿತ್ತಮ್ಮ ಬಸವಲಿಂಗಪ್ಪ ಬಾದರ್ಲಿಯವರು ಶರಣೆ ಅಕ್ಕಮಹಾದೇವಿಯವರನ್ನು ಪರಿಚಯಿಸಿ ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ವಚನ ಪ್ರಾರ್ಥನೆಯಿಂದ ಪ್ರಾರಂಭವಾಗಿ ಒಂದೂವರೆ ತಾಸು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಸುಮಾರು 100 ಜನ ಶರಣ ಶರಣೆಯರು ಪಾಲ್ಗೊಂಡಿದ್ದರು. ವಿನುತಾ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು.

12-10-2026 ರಂದು ಸಾವಿತ್ರಮ್ಮ ಬಸವಲಿಂಗಪ್ಪ ಬಾದರ್ಲಿ ಅವರ ಮನೆಯಲ್ಲಿ ನಡೆಯಿತು. ಗಂಗಮ್ಮ ವೀರಭದ್ರಪ್ಪ ಕುರುಕುಂದ ಅವರು ಅಧ್ಯಕ್ಷತೆ ವಹಿಸಿದ್ದರು. ಗೀತಾ ಬಿ.ಎಮ್. ಕೃಷ್ಣ  ಅವರು ಶರಣೆ ಹಡಪದ ಲಿಂಗಮ್ಮ ತಾಯಿಯವರನ್ನು  ಪರಿಚಯಿಸಿ ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ವಚನ ಪ್ರಾರ್ಥನೆಯಿಂದ ಪ್ರಾರಂಭವಾಗಿ ಒಂದೂವರೆ ತಾಸು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಸುಮಾರು 100 ಜನ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರೂಪಣೆಯನ್ನು ಶಿಲ್ಪಾ ನಡೆಸಿಕೊಟ್ಟರು.

13-10-2026 ರಂದು ಹಂಪಮ್ಮ ವೀರಭದ್ರಗೌಡ ಅಮರಾಪುರ ಅವರ ಮನೆಯಲ್ಲಿ ನಡೆಯಿತು.  ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಬಸವಮ್ಮ ತಾಳಿಕೋಟೆ ಮಾತನಾಡಿದರು.  ನಿರೂಪಣೆ ಶಿಲ್ಪಾ ಮಾಡಿದರು. ಅನುಭಾವಿಗಳಾಗಿ ಆಗಮಿಸಿದ ಎಲ್ಲಮ್ಮ ಗೋವಿಂದರಾಜ ಬಾರಕೇರ ಮತ್ತು ಸಾವಿತ್ರಮ್ಮ ಬಾದರ್ಲಿ ಅವರು ಸತ್ಯಕ್ಕ ತಾಯಿಯವರನ್ನು  ಪರಿಚಯಿಸಿ, ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ವಚನ ಪ್ರಾರ್ಥನೆಯಿಂದ ಪ್ರಾರಂಭವಾಗಿ ಒಂದೂವರೆ ತಾಸು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. 80ಕ್ಕೂ ಹೆಚ್ಚು ಜನ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

14-10-2026 ರಂದು ಅನುರಾಧ ವೀರೇಶ ತಿಡಿಗೋಳ ಅವರ ಮನೆಯಲ್ಲಿ ಶರಣೆಯರ ಸ್ಮರಣೆ  ನಡೆಯಿತು. ನೀಲಮ್ಮ ಹೊಗರನಾಳ ಇವರು ಅಧ್ಯಕ್ಷತೆ ವಹಿಸಿದ್ದರು. ಅನುಭಾವಿಗಳಾಗಿ ಸುಮಂಗಲಾ ಚಿಂಚರಕಿ ಅವರು, ಶರಣೆ ಸತ್ಯಕ್ಕ ತಾಯಿಯವರನ್ನು ಪರಿಚಯಿಸಿ, ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ವಚನ ಪ್ರಾರ್ಥನೆಯಿಂದ ಪ್ರಾರಂಭವಾಗಿ ಒಂದೂವರೆ ತಾಸು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಸುಮಾರು 50 ಜನ ಶರಣ ಶರಣೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

15-10-2026 ರಂದು ಗೀತಾ ಬಿ.ಎಮ್ ಕೃಷ್ಣ. ಅವರ ಮನೆಯಲ್ಲಿ ಶರಣೆಯರ ಸ್ಮರಣೆ  ನಡೆಯಿತು. ನಿರೂಪಣೆಯನ್ನು ಗೀತಾ  ನಡೆಸಿಕೊಟ್ಟರು. ಪ್ರಾಸ್ತವಿಕವಾಗಿ ಎಲ್ಲಮ್ಮ ಗೋವಿಂದರಾಜ ಬಾರಕೇರ ಮಾತನಾಡಿದರು. ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಅನುಭಾವಿಗಳಾಗಿ ಲತಾ ಚಂದ್ರೇಗೌಡ ಅವರು ಶರಣೆ ಅಕ್ಕನಾಗಲಾಂಬಿಕಾ ತಾಯಿಯವರನ್ನು  ಪರಿಚಯಿಸಿ ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ವಚನ ಪ್ರಾರ್ಥನೆಯಿಂದ ಪ್ರಾರಂಭವಾಗಿ ಒಂದೂವರೆ ತಾಸು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

16-10-2026 ರಂದು ಪೂರ್ಣಿಮಾ ನಿಜಗುಣ ಹಡಪದ ಇವರ ಮನೆಯಲ್ಲಿ ಶರಣೆ ಅಕ್ಕನಾಗಲಾಂಬಿಕಾ ತಾಯಿಯವ ಸ್ಮರಣೆ ನಡೆಯಿತು. ಪ್ರಾಸ್ತವಿಕವಾಗಿ ಎಲ್ಲಮ್ಮ ಗೋವಿಂದರಾಜ ಬಾರಕೇರ ಮಾತಾಡಿದರು. ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಅನುಭಾವಿಗಳಾಗಿ ಸುಮಂಗಲಾ ಚಿಂಚರಕಿ ಅವರು ಶರಣೆ ಅಕ್ಕನಾಗಲಾಂಬಿಕಾ ತಾಯಿಯವರನ್ನು  ಪರಿಚಯಿಸಿ ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ನಿರೂಪಣೆಯನ್ನು ನಾಗರತ್ನ ನಡೆಸಿಕೊಟ್ಟರು

17-10-2026 ರಂದು ರಾಜೇಶ್ವರಿ ಪಂಪಾಪತಿ ಕಾಟಗಲ್ ಅವರ ಮನೆಯಲ್ಲಿ ಶರಣೆ ನಾಗಲಾಂಬಿಕಾ ತಾಯಿಯವರ ಸ್ಮರಣೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಬಸವಮ್ಮ ತಾಳಿಕೋಟೆ ಮತ್ತು ಎಲ್ಲಮ್ಮ ಗೋವಿಂದರಾಜ ಬಾರಕೇರ ಮಾತನಾಡಿದರು. ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಅನುಭಾವಿಗಳಾಗಿ ಶಂಕ್ರಮ್ಮ ಮಲ್ಲಿಕಾರ್ಜುನ ಹೊಗರನಾಳ ಅವರು ಶರಣೆ ನಾಗಲಾಂಬಿಕಾ ತಾಯಿಯವರನ್ನು ಪರಿಚಯಿಸಿ ಅವರ ಬದುಕನ್ನು ಭಾವ ಪೂರ್ಣವಾಗಿ ನೆನಪಿಸಿಕೊಂಡರು. ನಿರೂಪಣೆಯನ್ನು ನೇತ್ರಾ ಬಾದರ್ಲಿ ನಡೆಸಿಕೊಟ್ಟರು.

18-10-2026 ರಂದು ಮಹಾದೇವಪ್ಪ ಚಿಂಚರಕಿ ಅವರ ಮನೆಯಲ್ಲಿ ಶರಣೆ ನೀಲಾಂಬಿಕಾ ತಾಯಿಯ ಸಂಸ್ಮರಣೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಎಲ್ಲಮ್ಮ ಗೋವಿಂದರಾಜ ಬಾರಕೇರ ಮಾತನಾಡಿದರು. ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು.  ಅನುಭಾವಿಗಳಾಗಿ ಮಹಾದೇವಪ್ಪ ಚಿಂಚರಕಿ ಅವರು, ಶರಣೆ ನೀಲಾಂಬಿಕಾ ತಾಯಿಯವರನ್ನು ಪರಿಚಯಿಸಿ ಬಸವಣ್ಣನವರೊಡನೆ ಅವರು ಹೊಂದಿದ್ದ ಆಧ್ಯಾತ್ಮಿಕ ಸಂಬಂಧವನ್ನು ಸ್ಮರಣೆಗೈದು ಅವರ ಅನುಭಾವದ ವಚನಗಳನ್ನು ನೆನಪಿಸಿಕೊಂಡರು.

19-10-2026 ರಂದು  ಹೇಮಾವತಿ ಬಸವನಗೌಡ ಜಿನ್ನಿಂಗ ಅವರ ಮನೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು. ನೀಲಮ್ಮ ಹೊಗರನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಅನುಭಾವಿಗಳಾಗಿ ಜಯಶ್ರೀ ಶರಣಬಸವ ಮೇಟಿ ಅವರು ಶರಣೆ ಅಮುಗೆ ರಾಯಮ್ಮ ತಾಯಿಯವರನ್ನು  ಪರಿಚಯಿಸಿ ಅವರ ಅನುಭಾವದ ವಚನಗಳನ್ನು ವಿಶ್ಲೇಷಿಸಿದರು. ಅಧ್ಯಕ್ಷತೆಯ ನುಡಿಯನ್ನು ಲತಾ ಚಂದ್ರೇಗೌಡ ಹರೆಟನೂರು ಹಂಚಿಕೊಂಡರು. ಪಿ. ಲಕ್ಷ್ಮಿ ಅವರು ನಿರೂಪಣೆ ಮಾಡಿದರು.

ಈ ಎಲ್ಲ ಒಂಬತ್ತು ದಿನದ ಕಾರ್ಯಕ್ರಮಗಳು  ಸಿಂಧನೂರಿನ ಮಹಿಳೆಯರಲ್ಲಿ ಸಂಚಲನ ಮೂಡಿಸಿತು. ಕೊನೆಯ ದಿನ ಎಲ್ಲರೂ ಸೇರಿ ಮುಂದೆ ಪ್ರತಿ ಭಾನುವಾರದಂದು ಒಂದೆಡೆ ಸೇರಿ ಪ್ರಾರ್ಥನೆಯೊಂದಿಗೆ ಶರಣ ಸ್ಮರಣೆ ಮಾಡಲು ನಿರ್ಧರಿಸಿದರು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ಶರಣೆಯರಿಗೆ, ಶ್ರಮಿಸಿದವರಿಗೆಲ್ಲ ಬಸವಪರ ಸಂಘಟನೆಗಳ ಸದಸ್ಯರು ಧನ್ಯವಾದ, ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *