‘ತುಚ್ಛವಾಗಿ ಬರೆಯುವ ರವಿ ಹಂಜಿಗೆ ವಿಶ್ವೇಶ್ವರ ಭಟ್ಟರ ಬೆಂಬಲ’


ಸಾಣೇಹಳ್ಳಿ

ರವಿ ಹಂಜ್ ಎನ್ನುವ ಸ್ವಯಂ ಘೋಷಿತ ಸಂಶೋಧಕರು ಮೊದಲಿನಿಂದಲೂ ಲಿಂಗಾಯತರು, ಬಸವಣ್ಣ ಹಾಗೂ ನಮ್ಮನ್ನು ಕುರಿತಂತೆ ವಿಶ್ವೇಶ್ವರ ಭಟ್ಟ ಅವರ ಪತ್ರಿಕೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ತುಚ್ಛವಾಗಿ ಬರೆಯುತ್ತಿದ್ದು, ಅದಕ್ಕೆ ಭಟ್ಟರು ಬೆಂಬಲ ಕೊಡುತ್ತ ಬಂದಿದ್ದಾರೆ.

ಈಗ ‘ಬಸವ ಮಂಟಪ’ ಎನ್ನುವ 564 ಪುಟದ ಪುಸ್ತಕವನ್ನು ಸಹ ತಮ್ಮ ವಿಶ್ವವಾಣಿ ಪ್ರಕಾಶನದಿಂದ ಪ್ರಕಟಿಸಿ ನವೆಂಬರ್ 15ರಂದು ಬಿಡುಗಡೆ ಮಾಡಿದ್ದಾರೆ. ಇದೇ ಕೃತಿಯಲ್ಲಿ ಮೊದಲ ಮತ್ತು ಎರಡನೆಯ ಎಡಿಸನ್ ಬಿಡುಗಡೆ ಅಕ್ಟೋಬರ್ 2026 ಎಂದು ನಮೂದಿಸಿದ್ದಾರೆ.

ಕೃತಿಯುದ್ದಕ್ಕೂ ಬಸವಣ್ಣನವರ ತೇಜೋವಧೆ ಮಾಡುವ ವಿಚಾರಗಳಿವೆ. ವಚನಗಳನ್ನು ತಮ್ಮ ಭಾವನೆಗನುಗುಣವಾಗಿ ಅರ್ಥೈಸಿ ಅವುಗಳ ಗೌರವಕ್ಕೆ ಚ್ಯುತಿ ತಂದಿದ್ದಾರೆ.

ಬಸವಣ್ಣ ಪೌರಾಣಿಕ ವ್ಯಕ್ತಿ, ಬಿಜ್ಜಳನ ಕೊಲೆ ಮಾಡಿಸಿದ್ದಾರೆ, ಭಂಡಾರದ ಲೂಟಿ ಮಾಡಿದ್ದಾರೆ. ಕಳಬೇಡ ಎನ್ನುವ ಅವರು ಲೂಟಿಕೋರರು, ಕೊಲೆಗಡುಕರು, ಸುಳ್ಳುಗಾರರು ಎಂದೆಲ್ಲ ಬರೆದದ್ದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ವಾದವನ್ನು ಮಂಡಿಸಿ ಬಸವ ಪರಂಪರೆಗೆ, ಲಿಂಗಾಯತ ಧರ್ಮಕ್ಕೆ, ಲಿಂಗಾಯತರಿಗೆ, ಬಸವತತ್ತ್ವ ಪ್ರೇಮಿಗಳಿಗೆ, ಜೊತೆಗೆ ನಮ್ಮ ಮಠದ ವಿಚಾರಕ್ಕೂ ಹುಳಿ ಹಿಂಡುವ ಕಾರ್ಯ ಮಾಡಿದ್ದಾರೆ.

ಬಸವಣ್ಣ ಮಾತ್ರವಲ್ಲದೆ ಇತರ ಶರಣರ ವಚನಗಳಲ್ಲೂ ದ್ವಂದ್ವ ಇದೆ. ಅವರ ವಿಚಾರ, ಆಚಾರಗಳಿಗೆ ಸಂಬಂಧವಿಲ್ಲ ಎಂದೆಲ್ಲ ಆಪಾದಿಸಿದ್ದಾರೆ. ಅವರ ಕೃತಿಯುದ್ದಕ್ಕೂ ವಿಷಕಾರುವ ಅಂಶಗಳೇ ತುಂಬಿವೆ. ಇಂತಹ ಕೃತಿಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು.

ರವಿ ಹಂಜ್ ಹಾಗೂ ಅವರ ಹಿಂದಿರುವ ಮುಖವಾಡದವರಿಗೂ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅವರ ವಿಕೃತ ಮನಸ್ಸಿನ ವಿಕಾರಗಳನ್ನು ಮಾತು ಮತ್ತು ಕೃತಿಯಲ್ಲಿ ವಾಂತಿ ಮಾಡಿಕೊಂಡಿದ್ದಾರೆ.

ವಿಶ್ವಗುರು, ಭಕ್ತಿಭಂಡಾರಿ, ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ, ಕಾಯಕ-ದಾಸೋಹ-ಲಿಂಗನಿಷ್ಠೆಯ ಪ್ರತಿಪಾದಕ ಬಸವಣ್ಣನವರ ಬೆಳಕನ್ನು ಆರಿಸುವ ಹುನ್ನಾರ ಮಾಡುವ ಇಂಥವರಿಗೆ ಯಾವ ಶಿಕ್ಷೆ ವಿಧಿಸಿದರೂ ಕಡಿಮೆಯೆ.

ಆದರೂ ನನ್ನ ಮಾತುಗಳನ್ನು ಅಪಾರ್ಥ ಮಾಡಿಕೊಂಡದ್ದಕ್ಕಾಗಿ ಕ್ಷಮೆ ಕೇಳುವೆ ಎನ್ನುವ ತಂತ್ರ ಮಾಡಿದ್ದಾರೆ. ಅವರ ಕೃತಿಯನ್ನು ತಕ್ಷಣ ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ, ಗೃಹಸಚಿವರಿಗೆ ಹಾಗೂ ರಕ್ಷಣಾ ಇಲಾಖೆಗೆ ಈ ಮೂಲಕ ಕೇಳಿಕೊಳ್ಳುತ್ತೇವೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಅವರನ್ನು ಬಂಧಿಸಿ ಶಿಸ್ತಿನ ಕ್ರಮ ಜರುಗಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *