ರವಿ ಹಂಜ್: ಡಾ. ಬಸವಲಿಂಗ ಪಟ್ಟದ್ದೇವರ ಖಂಡನೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ :

ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಕರ್ನಾಟಕ ಸರಕಾರವೇ ಅಧಿಕೃತವಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ ವಿಶ್ವಗುರು ಬಸವಣ್ಣನವರ ಚಿಂತನೆಗಳ ಅಧ್ಯಯನ, ಸಂಶೋಧನೆ ರಾಜ್ಯ ರಾಷ್ಟ್ರ, ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದೆ.

ಇಂದು ಜಗತ್ತೆ ಬಸವಣ್ಣನವರ ತತ್ವಗಳನ್ನು ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ ಒಬ್ಬ ಅನಿವಾಸಿ ಭಾರತೀಯ ಎಂದು ಹೇಳಿಕೊಳ್ಳುವ ರವಿ ಹಂಜ್ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಮಾತನಾಡಿರುವುದನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ತೀವ್ರವಾಗಿ ಖಂಡಿಸಿದ್ದಾರೆ.

ರವಿ ಹಂಜ್ ಕಳೆದ ಒಂದೆರಡು ವರ್ಷಗಳಿಂದ ಪತ್ರಿಕೆಯೊಂದರಲ್ಲಿ ಬಸವತತ್ವ, ಲಿಂಗಾಯತ ಧರ್ಮ, ಬಸವತತ್ವ ಪ್ರಸಾರ ಮಾಡುವ ಸಂಘಟಕರ, ಮಠಾಧೀಶರ ವಿರುದ್ಧ ಲೇಖನಗಳನ್ನು ಪ್ರಕಟಿಸುವುದೇ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಈ ಲೇಖನಗಳ ಒಳಗೊಂಡ ಬಸವಮಂಟಪ ಕೃತಿಯು ಪ್ರಕಟಿಸಿದ್ದಾರೆ.

೧೨ನೇ ಶತಮಾನದಿಂದ ಅಧುನಿಕ ಕಾಲದ ಸಂಶೋಧಕರು, ಚಿಂತಕರು ಬಸವಣ್ಣನವರ ಸಮಗ್ರ ವ್ಯಕ್ತಿತ್ವದ ಕುರಿತು ನಿರಂತರ ಅಧ್ಯಯನ ಮಾಡಿ ಸಾವಿರಾರು ಸಂಶೋಧನಾತ್ಮಕ ಕೃತಿಗಳು ಪ್ರಕಟಿಸಿದ್ದಾರೆ. ಆ ಸಂಶೋಧನಾತ್ಮಕ ಕೃತಿಗಳು ಅಧ್ಯಯನ ಮಾಡದೇ ಕೆಲವು ಕಾಲ್ಪನಿಕ ಪುರಾಣ-ಕಾವ್ಯಗಳ ಸಂದರ್ಭ ತೆಗೆದುಕೊಂಡು ಬಸವಣ್ಣನವರ ವ್ಯಕ್ತಿತ್ವದ ತೇಜೋವಧೆ ಮಾಡುವ ಹುನ್ನಾರ ರವಿ ಹಂಜ್ ಮಾಡುತ್ತಿರುವ ಅತ್ಯಂತ ಖಂಡನೀಯ ಹಾಗೂ ಸಮಸ್ತ ಕನ್ನಡಿಗರಿಗೆ ಅವಮಾನಿಸುವ ಸಂಗತಿಯಾಗಿದೆ.

ಹಂಜ್ ಅವರ ಈ ನಡೆ ಸಂವಿಧಾನ ಮತ್ತು ಸರಕಾರದ ವಿರುದ್ಧವೂ ಆಗಿದೆ. ಅದಕ್ಕಾಗಿ ರವಿ ಹಂಜ್ ಪ್ರಕಟಿಸಿದ ಬಸವಮಂಟಪ ಕೃತಿ ಕರ್ನಾಟಕ ಸರಕಾರ ನಿಷೇಧಿಸಬೇಕು ಹಾಗೂ ರವಿ ಹಂಜ್ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಕರ್ನಾಟಕ ಸರಕಾರಕ್ಕೆ ಒತ್ತಾಯಿಸುತ್ತದೆ ಎಂದು ಪೂಜ್ಯರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *