ಪ್ರತ್ಯೇಕ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಕಳುಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂಬ ನಿರ್ಣಯವನ್ನು ವಿವಿಧ ಬಸವ ಪರ ಸಂಘಟನೆಗಳು ರವಿವಾರ ತೆಗೆದುಕೊಂಡವು.
ಈ ಕುರಿತು ಪತ್ರ ಚಳುವಳಿಯನ್ನು ಶುರು ಮಾಡಿ ೫೦೦ ಅಂಚೆ ಪತ್ರಗಳನ್ನು ಬರೆದು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು.
ಬಸವ ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಗಲಾಂಬಿಕಾ ಮಹಿಳಾ ಗಣ ನೇತೃತ್ವದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.









