ವಿಶ್ವಧರ್ಮ ಪ್ರವಚನ ಸಮಾರೋಪ
ಹುಬ್ಬಳ್ಳಿ:
ಸಚ್ಚಿದಾನಂದ ಪ್ರಭು ಚಟ್ನಳ್ಳಿ ಅವರು ನಡೆಸಿಕೊಡುತ್ತಿರುವ ವಿಶ್ವಧರ್ಮ ಪ್ರವಚನ ಸಮಾರೋಪ ಸಮಾರಂಭ ಗದಗ ರಸ್ತೆಯ ಮುರುಗೇಶಪ್ಪ ಯಕಲಾಸಪೂರ ಅವರು ನಿರ್ಮಿಸಿದ ಅನುಭಾವ ಮಂಟಪದಲ್ಲಿ 13ರಂದು ಮುಂಜಾನೆ 10.30ಕ್ಕೆ ನಡೆಯಲಿದೆ.
ಜೊತೆಗೆ ಸಾಮೂಹಿಕ ಉಚಿತ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ.
ಇಷ್ಟಲಿಂಗ ದೀಕ್ಷೆ ಪಡೆಯಲಿಚ್ಛಿಸುವವರು 9964057145 ಗೆ ಸಂಪರ್ಕಮಾಡಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಇದೇ ಸಂದರ್ಭದಲಿ ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ 96ನೇ ಜಯಂತಿಯನ್ನೂ ಸಹ ಆಚರಿಸಲಾಗುತ್ತಿದೆ.
ಉಳವಿ ಶಿವಪುರದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಮತು ಶರಣ ಸಚ್ಚಿದಾನಂದ ಅವರು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ನೈಋತ್ಯ ರೈಲ್ವೆಯ ಐ.ಆರ್.ಎಸ್.ಇ ಉಪಮುಖ್ಯ ಅಭಿಯಂತರರಾದ ಶಿವಕುಮಾರ ಹೆಚ್. ಅವರು ಧ್ವಜಾರೋಹಣ ನಡೆಸಿಕೊಡುವರು. ನಿವೃತ್ತ ಕೆ.ಎ.ಎಸ್ ಅಧಿಕಾರಿಗಳಾದ ಮಹಾಂತೇಶ ಗೊಂಗಡಶೆಟ್ಟಿ ಮತ್ತು ಜಗನ್ನಾಥಪ್ಪ ಪನಸಾಲೆ ಕಾರ್ಯಕ್ರಮದಲ್ಲಿ ಅನುಭಾವ ನೀಡಲಿದ್ದಾರೆ.
ಮುರಗೇಶಪ್ಪ ಮತ್ತು ಪ್ರೇಮಾ ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಾಸೋಹ ಸೇವೆ ಸಲ್ಲಿಸಲಿದ್ದಾರೆ.
ವಿಶ್ವಧರ್ಮ ಪ್ರವಚನವನ್ನು 13-09-2026ರವರೆಗೆ ಮತ್ತು ಪ್ರತಿ ಸೋಮವಾರ https://meet.google.com/tak-jvfc-tpp ಗೂಗಲ್ ಮೀಟ್ ದಲ್ಲಿ ನೇರವಾಗಿ ಭಾಗವಹಿಸಬಹುದು ಮತ್ತು ಅನುಭಾವದಡಿಗೆ ಎನ್ನುವ ಯುಟ್ಯೂಬ್ ಚಾನಲ್ ದಲ್ಲಿಯೂ ವೀಕ್ಷಿಸಬಹುದಾಗಿದೆ.
ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಭಾಗವಹಿಸಬೇಕು. ಇಷ್ಟಲಿಂಗ ದೀಕ್ಷೆ ಪಡೆಯದವರು ಬಂದು ದೀಕ್ಷೆ ಪಡೆಯಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Thanks for generous service brother
Ok
anubhavasangam1960@gmail.com