ಜಮಖಂಡಿ:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಸಂಘಟನೆಯು ಸಂವಿಧಾನಬದ್ಧ ಕೆಲಸ ಮಾಡಬೇಕು ಹಾಗೂ ಕಾನೂನುಬದ್ಧವಾಗಿ ಕಡ್ಡಾಯ ನೋಂದಣಿ ಮಾಡಬೇಕು ಎಂದು ಆಗ್ರಹಿಸಿ ದಲಿತ ಹಾಗೂ ಬಸವ ಸಂಘಟನೆಗಳ ಆಶ್ರಯದಲ್ಲಿ ಈಚೆಗೆ ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ರಮೇಶ ಬಳೋಲಗಿಡದ ಮಾತನಾಡುತ್ತ, ಭಾರತ ದೇಶವು ಸಂವಿಧಾನದಿಂದ ಹಾಗೂ ಕಾನೂನುಬದ್ಧವಾಗಿ ನಡೆಯುತ್ತದೆ. ಈ ದೇಶದ ಎಲ್ಲಾ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಲೇಬೇಕು, ಅದು ಕಾನೂನಿನ ನಿಯಮ.

ಹೀಗಿರುವಾಗ ದೇಶಾದ್ಯಂತ ಇರುವ ಆರೆಸ್ಸೆಸ್ ಸಂಘಟನೆ ನೂರು ವರ್ಷ ಪೂರೈಸಿರುವ ಸಂಘಟನೆಯಾದರೂ ನೋಂದಣಿಯಾಗಿಲ್ಲ. ಇದು ಕಾನೂನು ಬಾಹಿರಲ್ಲವೇ ಎಂದರು. ಜೊತೆಗೆ ಈ ಸಂಘಟನೆಯಲ್ಲಿ ಚಿಕ್ಕಮಕ್ಕಳು ಸಹ ಕಾರ್ಯನಿರ್ವಹಿಸುತ್ತಾರೆ ಇದು ಬಾಲಾಪರಾಧವಲ್ಲವೇ ಎಂದು ಪ್ರಶ್ನಿಸಿದರು.
ಈ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ಖಡಾಖಂಡಿತವಾಗಿ ಒಪ್ಪದ ಆರ್.ಎಸ್.ಎಸ್. ಸಂಘಟನೆ ಇದು ದೇಶವಿರೋಧಿ ಸಂಘಟನೆಯಾಗಿದೆ. ದೇಶಪ್ರೇಮವೆಂದರೆ ಈ ದೇಶದ ಕಾನೂನನ್ನು ಪಾಲಿಸುವುದು ಮತ್ತು ಗೌರವಿಸುವುದಾಗಿದೆ. ಆರ್.ಎಸ್. ಎಸ್. ಇದು ಬಿಜೆಪಿ ಬೆಂಬಲಿತ ಒಂದು ಸಂಘಟನೆಯಾಗಿದೆ ಹೀಗಾಗಿ ಇದರ ಲೆಕ್ಕಪತ್ರವೇನು ಎಂದು ಕೇಳಬೇಕಾಗಿದೆ.
ಸರಕಾರಕ್ಕೆ ಪ್ರತಿವರ್ಷ ಎಲ್ಲಾ ಸಂಘಗಳು ಲೆಕ್ಕಪತ್ರ ಕೊಡಲೇಬೇಕು ಅದು ನಿಯಮ. ಹೀಗಾಗಿ ಆರ್.ಎಸ್ ಎಸ್. ಸಂಘಟನೆ ಸಂವಿಧಾನ ಬದ್ಧವಾಗಿ ನಡೆದುಕೊಂಡು ಕಡ್ಡಾಯವಾಗಿ ನೊಂದಣಿ ಆಗಲೇಬೇಕು, ಲೆಕ್ಕ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಉಳಿದ ಪ್ರತಿಭಟನಾಕಾರರು ಆರ್.ಎಸ್.ಎಸ್. ದೇಶದ ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಂತೆ ಕಡ್ಡಾಯವಾಗಿ ನೋಂದಣಿಯಾಗಬೇಕು ಎಂದು ಒತ್ತಾಯಿಸಿ ಘೋಷಣೆ ಹಾಕಿದರು.

ಪ್ರತಿಭಟನೆಯಲ್ಲಿ ಬಸವ ಕೇಂದ್ರದ ರವಿ ಯಡಹಳ್ಳಿ, ಮುಖಂಡರಾದ ಪುಟ್ಟು ಪಾಣಿ, ಶಶಿಕಾಂತ ದೊಡಮನಿ, ಶರಣು ಕಂಬಾಗಿ, ಪ್ರೇಮ್ ಬಳೋಲಗಿಡದ, ಶಶಿ ತೇರದಾಳ, ಚನ್ನು ಗುಣದಾಳ, ರಾಹುಲ್ ದೊಡಮನಿ, ಗಜಾನನ ಆಲಬಾಳ, ಸುಭಾಷ್ ರಬಕವಿ, ರಮೀಜ್ ಸವದಿ, ಸೋಹೇಲ್ ಪಾಚ್ಚಾಪುರ, ಮೋಹನ್ ಇಂಗಳೆ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

ಅಲಿಬಾಬಾ ಮತ್ತು ನಲವತ್ತು ಕಳ್ಳರ ಗುಂಪು ಹಿಂದಿನ ಕಾಲದಲ್ಲಿ ಇತ್ತಲ್ಲವೇ? ಆಗ ನೋಂದಣಿ ಇರಲಿಲ್ಲ. ಆದರೆ ಈಗ ರಾಜರು ಇಲ್ಲ. ಭಾರತ ಸರ್ಕಾರ ಎಲ್ಲ ರೀತಿಯ ಸಮಾನತೆ ಹಾಗೂ ಸಾಮಾಜಿಕ ಸುರಕ್ಷತೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಸಂಘ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಯಾಗಬೇಕಲ್ಲವೆ? ಒಂದು ಸಣ್ಣ SHG ಗ್ರೂಪ್ ನಲ್ಲಿ ನೋಂದಣಿಮಾಡುತ್ತಿದ್ದಾರೆ. ಇಲ್ಲಿ ನೂರಾರು ಕೋಟಿ ವ್ಯವಹಾರ ಮಾಡುವ ಮೂಲಕ ಜನರಿಗೆ ಮಾಹಿತಿ ನೀಡದೇ, ಸರಕಾರದ ನೋಂದಣಿ ನಿಯಮ ಮೀರಿದಂತೆ ಆಗುವುದಿಲ್ಲವೇ? ಸರಕಾರದ ಆಡಿಟರ್ ಜನರಲ್ ಭಾರತ ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಸಮಾನ ಕಾನೂನು ಕಾಯ್ದೆ ಜಾರಿಗೊಳಿಸಲು ತರತಮ್ಮೇವೇಕೆ?
ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಮನವಿ. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.