ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಸಮರ್ಥ ಎಂ. ಶಾಮನೂರು 5708 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಸಮರ್ಥ ಶಾಮನೂರು 69,578 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ 63870 ಮತ ಪಡೆದರು. ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 18975 ಮತ ಪಡೆದು, ತೃತೀಯ ಸ್ಥಾನ ಪಡೆದರು.
ದೇಶದಲ್ಲೇ ಅತಿ ಹಿರಿಯ ವಯಸ್ಸಿನ ಶಾಸಕರೆಂಬ ಹೆಗ್ಗಳಿಕೆ ಹೊಂದಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಏ.9ಕ್ಕೆ ಉಪ ಚುನಾವಣೆ ನಡೆದಿತ್ತು.
ಅವರ ಮೊಮ್ಮಗ ಸಮರ್ಥ ಶಾಮನೂರುಗೆ ಈಗ ರಾಜ್ಯದ ಅತಿ ಕಿರಿಯ ಶಾಸಕರಾಗಿದ್ದಾರೆ.
ಮೊದಲ 7 ಸುತ್ತಿನ ಎಣಿಕೆಯಲ್ಲಿ ಬಿಜೆಪಿ 8539 ಮತಗಳ ಮುನ್ನಡೆ ಸಾಧಿಸಿತ್ತು. ಆದರೆ, 8ನೇ ಸುತ್ತಿನ ಮತ ಎಣಿಕೆ ಶುರು ಆಗುತ್ತಿದ್ದಂತೆಯೇ ಇಡೀ ಚಿತ್ರಣವೇ ಬದಲಾಯಿತು.
ಕಾಂಗ್ರೆಸ್ ತಲೆಬಿಸಿಯಾದ ಎಸ್ಡಿಪಿಐ
ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯ ಚುನಾವಣೆಯಲ್ಲಿ ಕಾಂಗ್ರೆಸಿಗೆ ಎಚ್ಚರಿಕೆ ನೀಡಿದ್ದಾರೆ.
ಮತ ಎಣಿಕೆ ಆರಂಭದಿಂದಲೂ ಗೆ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಗಣನೀಯ ಮತಗಳನ್ನು ಸೆಳೆಯುತ್ತಲೇ ಹೋದರು. ಮುಸ್ಲಿಂ ವಾರ್ಡ್ಗಳ ಮತ ಎಣಿಕೆ ಮುಗಿಯುವ ತನಕ ಕಾಂಗ್ರೆಸ್ ಮತಗಳು ಎಸ್ಡಿಪಿಐಗೆ ಹರಿದು ಹೋದವು.
ಒಟ್ಟು 24 ಸುತ್ತುಗಳಲ್ಲಿ ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಒಟ್ಟು 18,975 ಸಾವಿರ ಮತಗಳು ಪಡೆದರು.
ಆದರೂ ಬಹುತೇಕ ಮುಸ್ಲಿಂ ಮತಗಳು ಪಕ್ಷಕ್ಕೆ ಮತದಾನ ಮಾಡಿದ್ದು ಸಮರ್ಥ ಪ್ರಯಾಸದ ಗೆಲವು ಸಾಧಿಸಲು ಕಾರಣವಾಯಿತು.
