ಗದಗ
ತೋಂಟದಾರ್ಯ ಜಾತ್ರೆಯಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಜನರ ಮೇಲೆ ಶಹರ ಠಾಣೆಯಲ್ಲಿ ಸೋಮವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಡ್ಯಾನ್ಸಿಂಗ್ ಫ್ಲೋರ್ ಮನರಂಜನಾ ಯಂತ್ರವು ಭಾನುವಾರ ರಾತ್ರಿ ಚಾಲನೆಯಲ್ಲಿ ಇದ್ದಾಗಲೇ ಮುರಿದು ಬಿದ್ದು 21 ಜನರು ಗಾಯಗೊಂಡಿದ್ದರು.
ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ.
ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಂ.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆಯಲ್ಲಿ ಜಹೀರ ಅಹ್ಮದ್ ಖಾಜಿ (42), ಕಲಂದರ ಖಾಜಿ (15), ಶಿಫಾ ಖಾಜಿ (16), ಸಮೀನಾ ಗಂಗಾವತಿ (18), ಸನಾ ಖಾಜಿ (15), ಸಗುಪ್ತಾ ಖಾಜಿ (14), ಜ್ಯೋತಿ ಗಬ್ಬೂರ (18), ನಾಜಿಯಾ ತೋಟಿಗಾರ (20), ಕಿರಣ ಹುಲ್ಲೂರ (25), ದೀಪಕ ಹುಬ್ಬಳ್ಳಿ (29), ರಾಜೇಸಾಬ ಅಣ್ಣಿಗೇರಿ (23), ಸುಮನ್ ನವಲಗುಂದ (28), ವಿಶಾಲ ನವಲಗುಂದ (6), ಸಲ್ಮಾ ಹಂದೂರ (17), ಖುಷಿ ದಲಬಂಜನ (14), ಕಿರಣ ಕಬಾಡಿ (21), ಮಾಹೀನ್ ಕಂದಗಲ್ (10), ರುಬಿನಾ ಕಂದಗಲ್ (36), ಮುಸ್ತಾಕ ಹಳೆಮನಿ (25), ಪ್ರದೀಪಕುಮಾರ ಕಮ್ಮಾರ (25), ಸತೀಶ ಗಬ್ಬೂರ (22) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
