ವಿಶ್ವೇಶ್ವರ ಭಟ್ಟನೆಂಬ ಪತ್ರಕರ್ತ ಪ್ರಚೋದನಕಾರಿ ಟೀಕೆ ಮೂಲಕ ಸಾಣೆಹಳ್ಳಿ ಶ್ರೀಗಳನ್ನು ಗುರಿಯಾಗಿಸಿದ್ದಾರೆ.
ಆದರೆ ಲಿಂಗಾಯತರು ಹಿಂದೂಗಳಲ್ಲ ಎಂಬುದು ಸಾರ್ವಕಾಲಿಕಸತ್ಯವಾಗಿದೆ. ತತ್ವ ಬದ್ಧತೆಗಾಗಿ ಕಲಬುರ್ಗಿ ಸರ್ ಬಲಿದಾನಗೈದಿದ್ದು ನಾವ್ಯಾರೂ ಮರೆವಂತಿಲ್ಲ. ಸುಳ್ಳುಗಾರರ ಹಿಂದೆ ಹೋಗುವ ಕೆಲವು ಸ್ವಾಮಿಗಳೆನಿಸಿಕೊಂಡ ವಚನಾನಂದನಂಥವರ ಮೋಸದ ಜಾಲಕ್ಕೆ ಯಾರೂ ಬೀಳಬಾರದು. ವಚನಾಧ್ಯಯನವಿಲ್ಲದ ಇವರುಗಳಿಗೆ ವಚನಗಳ ಬಗ್ಗೆ ಮಾತಾಡುವ ಯಾವ ಯೋಗ್ಯತೆಯೂ ಇಲ್ಲವಾಗಿದೆ.
ಸುಳ್ಳುಗಳನ್ನು ಹಬ್ಬಿಸಿ ಪ್ರಚೋದಿಸಿ ಜನಮಾನಸವನ್ನು ಅಸತ್ಯದ ದಾರಿಯಲ್ಲಿ ಸಜ್ಜುಗೊಳಿಸುವಂತಹ ಷಡ್ಯಂತ್ರದಲ್ಲಿ ಈ ಪತ್ರಕರ್ತ ನಿಪುಣ. ಈ ಎಚ್ಚರಿಕೆ ಕನ್ನಡಿಗರಿಗೆ ಇರಲೇಬೇಕಿದೆ. ಕಲಬುರ್ಗಿ ಸರ್ ಸತ್ಯದ ನುಡಿಗಳು, ಸಾಣೆಹಳ್ಳಿ ಸ್ವಾಮಿಗಳ ಸತ್ಯದ ನುಡಿಗಳು ವಚನ ಚಳುವಳಿಯ ತತ್ವಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಮಠಾಧೀಶರ ಒಕ್ಕೂಟದ ನಿರ್ಣಯವು ಚಾರಿತ್ರಿಕ ಮಹತ್ವದ್ದಾಗಿದೆ.