ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ ಕರಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಇಲ್ಲಿನ ಹರಳಯ್ಯನವರ ಗವಿಯಲ್ಲಿ ೧೧ ರಿಂದ ೨೧ ಅಕ್ಟೋಬರ ೨೦೨೬ ರವರೆಗೆ ನಡೆಯುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ೧೧ ರಂದು ಮುಂಜಾನೆ ೮ ಗಂಟೆಗೆ ಆರಂಭೋತ್ಸವ, ಸಾಯಂಕಾಲ ೬ ಗಂಟೆಗೆ ಉದ್ಘಾಟನೆ ನಡೆಯುವುದು.

೧೨ ರಂದು ಸಾಯಂಕಾಲ ಮಾಜಿ ಸೈನಿಕರ ಸಮಾವೇಶ, ೧೩ ರಂದು ಮಹಾ ಶಕ್ತಿಕೂಟಗಳ ಸಮಾವೇಶ, ೧೪ ರಂದು ಸಾಯಂಕಾಲ ಅನುಭವ ಮಂಟಪದ ೩ನೇ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ನಾಟಕ, ೧೫ರಂದು ರೈತ ಸಮಾವೇಶ, ೧೬ ರಂದು ಹಿರಿಯ ನಾಗರಿಕರ ಸಮಾವೇಶ, ೧೭ ರಂದು ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಕುರಿತು ಗೋಷ್ಠಿ, ೧೮ ರಂದು ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾಸಾಹೇಬ ವಾರದ ಕುರಿತು ಗೋಷ್ಠಿ, ೧೯ ರಂದು ಮಹಾರಾಷ್ಟದ ಬಸವ ಬೆಳಕು ಕಾರ್ಯಕ್ರಮ.

೨೦ ರಂದು ೧೧ ಗಂಟೆಗೆ ಹುತಾತ್ಮ ಶರಣ ಹರಳಯ್ಯ – ಕಲ್ಯಾಣಮ್ಮನವರ ವೀರಗಾಥೆ, ೩.೦೦ ಗಂಟೆ ಐತಿಹಾಸಿಕ ಬಸವಕಲ್ಯಾಣದ ಕೋಟೆಯಿಂದ ಶರಣರ ಭಾವಚಿತ್ರಗಳ ಮೆರವಣಿಗೆ ಸಾಯಂಕಾಲ ೬ ಗಂಟೆಗೆ ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯುವುದು. ೨೧ ರಂದು ವಚನ ಪಠಣದೊಂದಿಗೆ ಮಂಗಲ ಜರುಗುವುದು.

ಪ್ರತಿದಿನ ಬೆಳಗ್ಗೆ ೮ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಸಿದ್ಧರಾಮೇಶ್ವರರ ಪ್ರವಚನ ನಡೆಯುವುದು.

ಯುವ ಸಮಾವೇಶ ಮತ್ತು ಸಂವಾದ : 

೧೪ ರಂದು ಮುಂಜಾನೆ ೧೧ ಗಂಟೆಗೆ ಯುವ ಸಮಾವೇಶ ಮತ್ತು ಸಂವಾದ. ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಸಹಸಂಚಾಲಕ ಡಾ. ರಾಮನಗೌಡ ವಿ. ನಾಡಗೌಡ ಹಾಗೂ ಡಿಆರ್‌ಡಿಓ ವಿಜ್ಞಾನಿ ಡಾ. ಕೆ. ತೇಜಸ್ವಿ ಅವರಿಂದ ವ್ಯಾಖ್ಯಾನ ಮತ್ತು ಸಂವಾದ ಜರುಗುವುದು ಎಂದರು.

ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ:

ಅಕ್ಟೋಬರ್ ೨೦ ರಂದು ನಡೆಯವ ಶರಣ ವಿಜಯೋತ್ಸವ ನಾಡ ಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡಮಾಡುವ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರಕ್ಕೆ ಕಲಬುರಗಿ ಶರಣ ಬಸವೇಶ್ವರ ವಿಶ್ವವಿದ್ಯಾಲಯ ಕುಲಾಧಿಪತಿ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾ ಅವರಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಡಾ. ಸೋಮನಾಥ ಯಾಳವಾರ ತಿಳಿಸಿದ್ದಾರೆ.

ಈ ಪ್ರಶಸ್ತಿಯು ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ೨೦೧೭ ರಲ್ಲಿ ಆರಂಬಿಸಲಾದ ಈ ಪ್ರಶಸ್ತಿ ಕಲೆ, ಸಾಹಿತ್ಯ, ಸಂಗೀತ. ಶೈಕ್ಷಣಿಕ ಸೇವೆ, ಸಾಮಾಜಿಕ ಸೇವೆ ಸೇರಿ ನಾನಾಕ್ಷೇತ್ರದ ೧೦ ಜನ ಸಾಧಕರಿಗೆ ನೀಡಿ ಗೌರವಿಸಲಾಗಿದೆ.

ಕಾರ್ಯಕ್ರಮದಲ್ಲಿ ವೀರಣ್ಣ ಹಲಶೆಟ್ಟಿ, ಡಾ. ಜಿ.ಎಸ್. ಭುರಾಳೆ, ಬಸವರಾಜ ಬಾಲಿಕಿಲೆ, ಚನ್ನಪ್ಪಾ ಪ್ರತಾಪೂರೆ, ಶಂಕರ ಕರಣೆ, ನಿರ್ಮಲಾ ಶಿವಣಕರ, ಮಲ್ಲಪ್ಪಾ ಭಾಗ್ಯವಾಡಿ, ರವೀಂದ್ರ ಕೋಳಕುರ, ಶಿವಕುಮಾರ ಬಿರಾದಾರ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *