ಬಸವಕಲ್ಯಾಣ:
ಸಮಾನತೆ, ಸಹೋದರತೆಗಾಗಿ ಪ್ರಾಣ ಬಲಿದಾನ ಮಾಡಿದ ಶರಣ ಸ್ಮರಣೆಗಾಗಿ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆಯನ್ನು ೧೧-೧೦-೨೦೨೬ ರಿಂದ ೨೧-೧೦-೨೦೨೬ ರವರೆಗೆ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ ೧೧ ರಂದು ಮುಂಜಾನೆ ೮ ಗಂಟೆಗೆ ಆರಂಭೋತ್ಸವ ಪೂಜ್ಯರ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆಯೊಂದಿಗೆ ಆರಂಭಿಸಿ ಸಕಲ ವೈಭವದೊಂದಿಗೆ ಪರುಷಕಟ್ಟೆಯವರೆಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ವಚನ ಪಠಣದೊಂದಿಗೆ ಮಂಗಲಗೊಳ್ಳುವುದು.
ಅಂದು ಸಾಯಂಕಾಲ ೬ ಗಂಟೆಗೆ ಉದ್ಘಾಟನೆ ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯ, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಅವರ ನೇತೃತ್ವದಲ್ಲಿ ಬೀದರ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿಕೊಳ್ಳುವರು. ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪೌರಾಯುಕ್ತ ರಾಜು ಬಣಕಾರ, ಮುಖಂಡ ಶಿವರಾಜ ನರಶೆಟ್ಟಿ, ವಚನ ಸಮೂಹ ಸಂಸ್ಥೆ ಅಧ್ಯಕ್ಷ ಅಲ್ಲಮಪ್ರಭು ನಾವದಗೇರೆ, ಶಿವಶಂಕರ ಟೋಕರೆ, ವೈಜಿನಾಥ ಕಾಮಶೆಟ್ಟಿ, ಉಪಸ್ಥಿತರಿರುವರು.
ಹರಳಯ್ಯ ಸಮಾಜ ಅಧ್ಯಕ್ಷ ಶಿವಾಜಿ ಕಾಂಬಳೆ ಅವರಿಂದ ಧ್ವಜಾರೋಹಣ ನೇರವೇರುವುದು. ವಿವೇಕಾನಂದ ವಸ್ತ್ರದ, ಮಂಜುನಾಥ ಹೆಮಶೆಟ್ಟಿ ಅವರಿಂದ ವಚನ ಸಂಗೀತ ನಡೆಯುವುದು.

೧೨ ರಂದು ಸಾಯಂಕಾಲ ೬ ಗಂಟೆಗೆ ವೀರ ಸೈನಿಕರ ವೇದಿಕೆ ಗೋಷ್ಠಿಯನ್ನು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು. ಮಾಜಿಸೈನಿಕರಾದ ಬಸವರಾಜ ಬಿರಾದಾರ, ವಿನೋದಕುಮಾರ ಭಗವಂತ ಅನುಭಾವ ನೀಡುವರು. ರಾಜುಕುಮಾರ ಲದ್ದೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಜಿಲ್ಲಾ ಹಾಗೂ ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ರಾಧಾ ಯವಳೆ ಮತ್ತು ಸಂಗಡಿಗರಿಂದ ದೇಶಭಕ್ತಿ ಗೀತೆಗಳು ಜರುಗುವವು.
೧೩ ರಂದು ಸಾಯಂಕಾಲ ೬ ಗಂಟೆಗೆ ಮಹಾಶಕ್ತಿ ಕೂಟಗಳ ಸಮಾವೇಶ ನ್ಯಾಯಾಧೀಶೆ ಶ್ರೇಯಾ ಉತ್ತೂರೆ ಉದ್ಘಾಟಿಸುವರು. ಭಾಲ್ಕಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ಗೀತಾ ಖಂಡ್ರೆ ಧ್ವಜಾರೋಹಣ ಮಾಡುವರು. ಕರ್ನಾಟಕ ರಾಜ್ಯ ಮಹಿಳಾ ಆಯೊಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ, ಸ್ತ್ರೀ ಜಾಗೃತಿ ಪತ್ರಿಕೆ ಸಂಪಾದಕಿ ಶೋಭಾ ಎಚ್. ಜಿ. ಅವರಿಗೆ ಶರಣ ನಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ತ್ರೀ ರೋಗ ತಜ್ಞರಾದ ಡಾ. ಜ್ಯೋತಿಲಕ್ಷಿ ಹಂಚಾಟೆ, ಡಾ. ಪ್ರಿಯಾಂಕಾ ವರವಟ್ಟೆ, ಪ್ರಾಧ್ಯಾಪಕಿ ಡಾ. ಸವಿತಾ ದಂಡೆ ಉಪಸ್ಥಿತರಿರುವರು.
೧೪ ರಂದು ಸಾಯಂಕಾಲ ೬ ಗಂಟೆಗೆ ಬೀದರವನ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಶಿವಯೋಗಿ ಸಿದ್ದಾರಾಮ ನಾಟಕ, ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಬುಳ್ಳಾ ಉದ್ಘಾಟಿಸುವರು. ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿಕೊಳ್ಳುವರು. ಅಶೋಕ ನಾಗರಾಳೆ, ಪತ್ರಕರ್ತಕ ಸಂಘದ ತಾಲೂಕಾಧ್ಯಕ್ಷ ಮಾರ್ತಂಡ ಜೋಷಿ. ಸಂಜು ಜಾಧವ ಇತರರಿರುವರು.
೧೫ ರಂದು ಸಾಯಂಕಾಲ ೬ ಗಂಟೆಗೆ ರೈತರ ಸಮಾವೇಶ ಪೂಜ್ಯ ಸಿದ್ಧರಾಮ ಸ್ವಾಮಿಗಳ ಸಾನಿಧ್ಯದಲ್ಲಿ ಆಳಂದ ಶಾಸಕ ಬಿ.ಆರ್. ಪಾಟೀಲ ಉದ್ಘಾಟಿಸುವರು. ಹೈದ್ರಾಬಾದ ಇಕ್ರಿಸ್ಯಾಟ್ ವಿಜ್ಞಾನಿಗಳಾದ ಡಾ. ಪ್ರಕಾಶ ಗಂಗಾಶೆಟ್ಟಿ, ಡಾ. ಬಾಬಾ ಜಗದೀಶ ತೊಗರಿಬೆಳೆ ಅರೆಒಣ ಪ್ರದೇಶಗಳ ಬೆಳೆಗಳ ಕುರಿತು ವಿಶೇಷ ಉಪನ್ಯಾಸ ನೀಡುವರು. ಡಾ. ಮಹೇಶ ಪಾಟೀಲ ಅಧ್ಯಕ್ಷತೆ ವಹಿಸಿಕೊಳ್ಳುವರು. ರೈತ ಗೀತೆ ಮತ್ತು ನೃತ್ಯಗಳು ಜರುಗುವವು.
೧೬ ರಂದು ಸಾಯಂಕಾಲ ೬ ಗಂಟೆಗೆ ಹಿರಿಯ ನಾಗರಿಕರ ಸಮಾವೇಶವನ್ನು ವಿಧಾನ ಪರಿಷತ್ತು ಸದಸ್ಯ ಡಾ. ಎಂ.ಜಿ. ಮುಳೆ ಉದ್ಘಾಟಿಸುವರು. ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ ಅನುಭಾವ ನೀಡುವುರು.
೧೭ ರಂದು ಸಾಯಂಕಾಲ ೬ ಗಂಟೆಗೆ ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಗೋಷ್ಠಿಯನ್ನು ನ್ಯಾಯಾಧೀಶ ಯಶ್ವಂತ ತವಾರೆ ಉದ್ಘಾಟಿಸುವರು. ನ್ಯಾಯಾಧೀಶ ಹಣಮಂತ ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು. ಲೋಕಾಯುಕ್ತ ನ್ಯಾಯವಾದಿ ಸಂತೊಷ ನಾಗರಾಳೆ ಅನುಭಾವ ನೀಡುವರು.
೧೮ ರಂದು ಸಾಯಂಕಾಲ ೬ ಗಂಟೆಗೆ ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾಸಾಹೇಬ ವಾರದ ಗೋಷ್ಠಿಯನ್ನು ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಕೇಂದ್ರದ
ನಿವೃತ್ತ ನಿರ್ದೇಶಕ ಪ್ರೊ. ಬಿ.ಬಿ. ಪೂಜಾರ ಉದ್ಘಾಟಿಸುವರು. ಡಾ. ನಿಲಾಂಬಿಕಾ ಶೇರಿಕಾರ ಅನುಭಾವ ನೀಡುವರು. ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿಕೊಳ್ಳುವರು.

೧೯ ರಂದು ಸಾಯಂಕಾಲ ೬ ಗಂಟೆಗೆ ಮಹಾರಾಷ್ಟ್ರದಲ್ಲಿ ಬಸವ ಬೆಳಕು ಗೋಷ್ಠಿಯಲ್ಲಿ ಬಸವ ಬೆಳವಿಯ ಶರಣಬಸವ ಮಹಾಸ್ವಾಮಿಗಳು ಅನುಭಾವ ನೀಡುವರು. ಬಿಕೆಡಿಬಿ ಆಯುಕ್ತ ಲಕ್ಷ್ಮಿಕಾಂತ ಉದ್ಘಾಟಿಸುವರು. ಮಾಜಿ ವಿಧಾನ ಪರಿಷತ್ತು ಸದಸ್ಯ ವಿಜಯಸಿಂಗ ಮಹಾರಾಷ್ಟ್ರದ ಮಾಧವರಾವ ಟಾಕಳೆಕರ ಇತರರು ಉಪಸ್ಥಿತರಿರುವರು.
೨೦ ಮುಂಜಾನೆ ೧೧ ಗಂಟೆಗೆ ಹುತಾತ್ಮ ದಿನಾಚರಣೆ ಪೂಜ್ಯ ಬಸವಪ್ರಭು ಸ್ವಾಮಿಗಳು ಜನಪದರ ನುಡಿಯಲ್ಲಿ ಹುತಾತ್ಮ ಶರಣ ಹರಳಯ್ಯ ಕಲ್ಯಾಣಮ್ಮನವರ ವೀರಗಾಥೆ ಕುರಿತು ಅನುಭಾವ ನೀಡುವರು.
೩ ಗಂಟೆಗೆ ಹುತಾತ್ಮ ಶರಣ ಎಳೆಹೂಟೆ ಮೆರವಣಿಗೆ: ಕೋಟೆಯಿಂದ ಹರಳಯ್ಯ ಗವಿಯವರೆಗೆ. ಡಿವೈಎಸ್ಪಿ ಮಡಿವಾಳಪ್ಪ ಮೆರವಣಿಗೆಗೆ ಚಾಲನೆ ನೀಡುವರು. ರಾಜೇಂದ್ರಕುಮಾರ ಗಂದಗೆ, ಸಿಪಿಐ ಅಲಿಸಾಬ ವಚನ ಪಠಣ ಮಾಡುವರು.
ಶರಣರ ತಲೆಯ ಮೇಲೆ ವಚನ ಸಾಹಿತ್ಯ, ಎತ್ತಿನ ಬಂಡಿಯ ಮೇಲೆ ಶರಣರ ಸ್ತಬ್ಧ ಚಿತ್ರಗಳು, ಕುದುರೆ ಒಂಟೆಯ ಮೇಲೆ ಶರಣ ವೇಷಧಾರಿಗಳು, ಭಜನಾ ತಂಡಗಳು, ಡೊಳ್ಳು, ವಚನ ವಡಪು, ಜಾನಪದ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಲಿವೆ.
ಸಾಯಂಕಾಲ ೬ ಗಂಟೆಗೆ ಶರಣ ವಿಜಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಅನುಭವ ಮಂಟಪ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಬಸವ ಧರ್ಮಪೀಠದ ಪೀಠಾಧ್ಯಕ್ಷರು ಸಾನಿಧ್ಯ, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿಕೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿಕೊಳ್ಳುವರು. ಕಲಬುರಗಿ ಗ್ರಾಮಿಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಬಸವರಾಜ ದೇಶಮುಖ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಳ್ಳುವರು.
ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿ ವರ್ಷ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದ್ದು, ೨೦೨೬ ನೇ ಸಾಲಿಗೆ ಪೂಜ್ಯಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೊಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಎಸ್.ಅಪ್ಪಾ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
೨೧ ರಂದು ಶರಣ ವಿಜಯೋತ್ಸವ ಮಂಗಲ ಸಮಾರಂಭ ಸರ್ವರಿಂದ ವಚನ ಪಠಣ ನಡೆಯಲಿದೆ.
ಯುವ ವೈಜ್ಞಾನಿಕ ಸಮಾವೇಶ:
೧೪ ರಂದು ಯುವ ವೈಜ್ಞಾನಿಕ ಸಮಾವೇಶವನ್ನು ಬೀದರನ ಪಶು ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಡಾ. ಸಿ. ವೀರಣ್ಣ ಉದ್ಘಾಟಿಸುವರು. ಇಸ್ರೋದ ಮಾಜಿ ವಿಜ್ಞಾನಿ ಡಾ. ರಾಮನಗೌಡ ವಿ. ನಾಡಗೌಡ ಹಾಗೂ ಹೈದ್ರಾಬಾದನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ವಿಜ್ಞಾನಿ ಡಾ. ತೆಜಸ್ವಿ ಕೆ. ಅವರಿಗೆ ಶರಣ ವಿಜ್ಞಾನಿ ಪುರಸ್ಕಾರ ಪ್ರದಾನ ಮಾಡಲಾಗುವುದು.
೧೧ ರಿಂದ ೨೧ ರವರೆಗೆ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗ, ಶಿವಯೋಗಿ ಸಿದ್ಧರಾಮೇಶ್ವರರ ಪ್ರವಚನ ನಡೆಯಲಿದೆ. ಮುಂಜಾನೆ ೧೧ ಗಂಟೆಗೆ ವಚನ ಓದು, ಗಣ ನಾಯಕ-ನಾಯಕಿಯರ ಸಮಾವೇಶ, ಜಾನಪದ ಗಾಯನ, ಭಜನೆ, ಕೀರ್ತನೆ ಕಥನಗಳು ನಡೆಯಲಿವೆ.
ಆದ್ದರಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
