47ನೇ ಶರಣ ಕಮ್ಮಟ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾಗಿ ಶಂಕರ ಕರಣೆ ನೇಮಕ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ನವೆಂಬರ್ 28 ಮತ್ತು 29ರಂದು ನಡೆಯುವ ಅನುಭವ ಮಂಟಪದ ಮತ್ತು ಬಸವಾದಿ ಶರಣರ ದಿವ್ಯ ತತ್ವ ಸಂದೇಶಗಳನ್ನು ಸಾರುವ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ -2026 ಅಂಗವಾಗಿ ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪೂಜ್ಯರು ಮಾತನಾಡಿ, ಜಗತ್ತಿಗೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವದ ಸಂದೇಶಗಳನ್ನು ನೀಡಿದ ವಿಶ್ವದ ಪ್ರಥಮ ಸಂಸತ್ತಾದ ಅನುಭವ ಮಂಟಪದ ಮತ್ತು ಬಸವಾದಿ ಶರಣರ ದಿವ್ಯ ತತ್ವ ಸಂದೇಶಗಳನ್ನು ಸಾರುವ ಉದ್ಧೇಶದಿಂದ ಪ್ರತಿವರ್ಷ ನವೆಂಬರ್ ತಿಂಗಳ ಕೊನೆಯ ಶನಿವಾರ ಮತ್ತು ಭಾನುವಾರದಂದು ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ವರ್ಷದ ಅನುಭವ ಮಂಟಪ ಉತ್ಸವ ನಿಮಿತ್ಯವಾಗಿ ಪೂಜ್ಯ ಚನ್ನಬಸವ ಸ್ವಾಮಿಗಳು ಹಿರೇಹೊನ್ನಳ್ಳಿ – ಧಾರವಾಡ ಅವರಿಂದ 16-11-2026 ರಿಂದ 26-11-2026 ರವರೆಗೆ ಬಸವಕಲ್ಯಾಣದ ಶ್ರೀ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ “ಜನಪದದಲ್ಲಿ ಬಸವ ದರ್ಶನ ಪ್ರವಚನ”ವನ್ನು ಏರ್ಪಡಿಸಲಾಗಿದೆ.

ಪೂಜ್ಯರು ಬಸವಾದಿ ಶರಣರ ಕುರಿತು ಇರುವ ಜನಪದವನ್ನು ಬಹಳಷ್ಟು ಅಧ್ಯಯನ ಮಾಡಿದ್ದಾರೆ. ಬಸವಾದಿ ಶರಣರ ಜನಪದ ಪ್ರವಚನಗಳನ್ನು ನಾಡಿನ ತುಂಬೆಲ್ಲ ಯಶಸ್ವಿಯಾಗಿ ಮಾಡಿದ್ದಾರೆ. ಆದ್ದರಿಂದ ಬಸವಕಲ್ಯಾಣದ ಎಲ್ಲಾ ಸದ್ಭಕ್ತರು ಈ ಪ್ರವಚನಕ್ಕೆ ಸಕಾಲಕ್ಕೆ ಆಗಮಿಸಿ ಕೇಳಿ ಬಸವಾದಿ ಶರಣರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿಕೊಂಡರು.

ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರನ್ನಾಗಿ ಶರಣ ಶಂಕರ ಕರಣೆ ಅವರನ್ನು ನೇಮಕ ಮಾಡಲಾಗಿದೆ. ಈ ಪ್ರವಚನಕ್ಕೆ ಸಂಘಟಿಸಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರ ಸೇರಿಸಿ ಯಶಸ್ವಿಗೊಳಿಸುವ ಸಾಮರ್ಥ್ಯ ಅವರಲ್ಲಿ ಇದೆ ಎಂದರು.

ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಶರಣ ಶಂಕರ ಕರುಣೆ ಅವರು ಮಾತನಾಡಿ, ಪೂಜ್ಯರು ನನಗೆ ನೀಡಿದ ಈ ಜವಾಬ್ದಾರಿಯನ್ನು ಪೂಜ್ಯರ ಆಶೀರ್ವಾದದಿಂದ ಮತ್ತು ಎಲ್ಲರ ಸಹಕಾರದಿಂದ ಎಲ್ಲರೂ ಸೇರಿ ಯಶಸ್ವಿಯಾಗಿ ನೆರವೇರಿಸಲು ಪ್ರಯತ್ನಿಸೋಣ ಎಂದು ಹೇಳಿದರು.

ಸಭೆಯಲ್ಲಿ ಪ್ರವಚನಕಾರರಾದ ಪೂಜ್ಯ ಚನ್ನಬಸವಾನಂದ ಮಹಾಸ್ವಾಮಿಗಳು, ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಹೊಳಲ್ಕೆರೆಯ ಪೂಜ್ಯ ತಿಪ್ಪೇರುದ್ರ ಮಹಾಸ್ವಾಮಿಗಳು, ಪೂಜ್ಯ ಬಸವ ದೇವರು, ಪೂಜ್ಯ ಪ್ರಭುಲಿಂಗ ದೇವರು ಮತ್ತು ಅನುಭವ ಮಂಟಪದ ಮುಖ್ಯ ನಿರ್ವಾಹಕರಾದ ಅಶೋಕ ಕುಂಬಾರ ಮತ್ತು ಗಂಗಾಧರ ಬಿರಾದರ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *