ಸಾಗರ :
ವಿಶ್ವಗುರು ಬಸವೇಶ್ವರರು ಹಾಗೂ ಶಿವಶರಣರ ಕುರಿತು ಅವಹೇಳನಕಾರಿ ಬರಹ ಮತ್ತು ಹೇಳಿಕೆಗಳನ್ನು ನೀಡಿರುವ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ಟರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬಸವಭಕ್ತರು, ಬಸವಾಭಿಮಾನಿಗಳು ಆಗ್ರಹಿಸಿದರು.
ಸೋಮವಾರ ಸಹಾಯಕ ಆಯುಕ್ತರ(ಎಸಿ) ಕಚೇರಿ ಎದುರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಲ್ಲಿ ಶ್ರೀ ವೀರಶೈವ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ತಾಲ್ಲೂಕು ವೀರಶೈವ ಯುವ ವೇದಿಕೆ, ಅಕ್ಕನ ಬಳಗ ಈ ಎಲ್ಲ ಸಂಘಟನೆಗಳು ಭಾಗವಹಿಸಿದವು.
ಬಸವೇಶ್ವರರು ಹಾಗೂ ಶಿವಶರಣರ ಘನತೆಗೆ ಧಕ್ಕೆ ತರುವ ಕೃತ್ಯಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದವು.

ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಲವಾರು ಜನ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
