ಶೋಷಿತ ವರ್ಗದಿಂದ ಬಂದು ನೂರಕ್ಕೂ ಹೆಚ್ಚು ವಚನ ರಚಿಸಿದ ಹಡಪದ ಲಿಂಗಮ್ಮ

ಲಿಂಗಸುಗೂರು :

12ನೇ ಶತಮಾನದ ಪ್ರಮುಖ ಶಿವಶರಣೆ ಹಡಪದ ಲಿಂಗಮ್ಮ ತಾಯಿಯ ಜೀವನ ಪರಿಚಯ ಮತ್ತು ಅವರ ಬರೆದಿರುವ ವಚನ ವಿಶ್ಲೇಷಣೆಯನ್ನು ಶಾಂತಾ ಪಾಟೀಲ, ಉಪನ್ಯಾಸಕರು ಅವರಿಂದ ನಡೆಯಿತು.

ವಿಜಯಮಹಾಂತೇಶ್ವ ಶಾಖೆ ಅನುಭವ ಮಂಟಪದಲ್ಲಿ ಜರುಗಿದ ನವ ವಚನ ಚಿಂತನೆ ಕಾರ್ಯಕ್ರಮದಲ್ಲಿ ಅವರು ಲಿಂಗಮ್ಮ ಶರಣೆಯ ಕುರಿತು ಮಾತನಾಡುತ್ತ, 12ನೇ ಶತಮಾನದಲ್ಲಿ ಹೆಣ್ಣು ಅಸ್ಪೃಶ್ಯಳು ಎಂಬ ಕಾಲವಿತ್ತು. ಅಂತಹದರಲ್ಲಿ ಶರಣೆಯರು ವಚನಗಳನ್ನು ರಚನೆ ಮಾಡಿ ಹೆಣ್ಣುಮಕ್ಕಳು ಯಾವ ಜ್ಞಾನದಲ್ಲಿಯೂ ಕಡಿಮೆ ಇಲ್ಲ ಎನ್ನುವುದು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ಶೋಷಿತ ವರ್ಗದ ಕ್ಷೌರಿಕ ಕುಟುಂಬದಲ್ಲಿ ಹುಟ್ಟಿದ ಲಿಂಗಮ್ಮ ಶರಣೆ ಎಂತಹ ಅದ್ಭುತವಾದ ವಚನಗಳನ್ನು ರಚಿಸಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಿಂದ ಬಂದಿದ್ದರೂ, ಆಧ್ಯಾತ್ಮದ ಸಾಧನೆಯಲ್ಲಿ ಉತ್ತುಂಗದ ಶಿಖರವನ್ನು ಏರಿದ ಶರಣೆಯರಲ್ಲಿ ಹಡಪದ ಲಿಂಗಮ್ಮ ತಾಯಿಯು ಒಬ್ಬರು ಎಂದರು.

ದಾಂಪತ್ಯದ ವಿಷಯಕ್ಕೆ ಬಂದರೆ ಅವರ ಗಂಡ ಹಡಪದ ಅಪ್ಪಣ್ಣ ಶರಣರು. ಅಪ್ಪಣ್ಣ ಅವರನ್ನು ನಿಜಸುಖಿ ಅಪ್ಪಣ್ಣ ಹಾಗೂ ನಿಜಮುಕ್ತಿ ಲಿಂಗಮ್ಮ ತಾಯಿ ಎಂದು ದಂಪತಿ ಪ್ರಸಿದ್ಧರಾಗಿದ್ದರು.

ಲಿಂಗಮ್ಮ ಅವರ 114 ವಚನಗಳು ಲಭ್ಯವಿದೆ. 1 ಸ್ವರ ವಚನವನ್ನು ರಚಿಸಿದ್ದಾರೆ. 1 ಮಂತ್ರ ಗೌಪ್ಯ ರಚಿಸಿದ್ದಾರೆ. ಇವರ ವಚನಗಳು ಬಹಳಷ್ಟು ವೈಚಾರಿಕತೆ ನೆಲೆಯಲ್ಲಿ ಮತ್ತು ಮನಸ್ಸಿನ ನಿಗ್ರಹದ ಬಗ್ಗೆ ಹಲವಾರು ವಚನಗಳನ್ನು ಅವರು ರಚಿಸಿದ್ದಾರೆ.

ಡಾಂಭಿಕತೆ ಮತ್ತು ಮೌಡ್ಯತೆಗಳನ್ನು ವಿರೋಧಿಸುವ ವಚನಗಳು ಕೂಡ ಅವರು ರಚಿಸಿದ್ದನ್ನು ನಾವು ಸ್ಮರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಭೂಮಿಕಾ ಸಕ್ರಿ ನೆರವೇರಿಸಿದರು. ಪ್ರಾರ್ಥನೆ ಅಕ್ಕನ ಬಳಗದ ತಾಯಂದಿರಿಂದ ಜರುಗಿತು.

ಅದೇ ರೀತಿ ಶರಣೆ ಲಿಂಗಮ್ಮ, ಅವರ ವಚನ ಕುರಿತು ಸಂವಾದ ಚರ್ಚೆಗಳು ನಡೆದವು. ಮಹಾಪ್ರಸಾದವು ಶ್ರೀಮಠದ ಕಡೆಯಿಂದ ನಡೆಯಿತು.

ಅಕ್ಕನ ಬಳಗ, ಕದಳಿ ವೇದಿಕೆ, ಮತ್ತಿತರ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಯುತ್ತಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *