ಶ್ರಾವಣ ವಿಶೇಷ: ಸಾಮೂಹಿಕ ಇಷ್ಟಲಿಂಗ ಪೂಜಾ ಕರಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಜಾತಿ, ವರ್ಣ ಹಾಗೂ ಲಿಂಗ ಭೇದವಿಲ್ಲದೆ ಎಲ್ಲರಿಗೂ ಅಧ್ಯಾತ್ಮದ ಹಕ್ಕನ್ನು ನೀಡಿದ ೧೨ನೇ ಶತಮಾನದ ಶರಣರ ಪರಂಪರೆಯಲ್ಲಿ ಇಷ್ಟಲಿಂಗ ಪೂಜೆಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ ೧೩ ರಿಂದ ಸೆಪ್ಟಂಬರ್ ೦೪ ರವರಗೆ ಪ್ರತಿದಿನ ಮುಂಜಾನೆ ೬-೧೫ ರಿಂದ ೭-೧೫ ರವರಗೆ ನಗರದ ವಿವಿಧ ಸಂಘಗಳ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಗುರು ಬಸವಣ್ಣನವರು ಮತ್ತು ಶರಣರು ಇಷ್ಟಲಿಂಗ ಪೂಜೆಯ ಮೂಲಕ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿ ಹಾಗೂ ಸಮಾನತೆಯನ್ನು ಸಾರಿದರು. ಇದು ಕೇವಲ ಮೂರ್ತಿ ಪೂಜೆಯಲ್ಲದೆ ಅಂತರಂಗದ ಶಕ್ತಿಯನ್ನು ಪರಮಾತ್ಮನೊಂದಿಗೆ ಬೆಸೆಯುವ ಸಾಧನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ, ಹುಲಸೂರ ಬಸವ ಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ, ರೈತ ಮುಖಂಡ ಸುಭಾಷ ರಗಟೆ, ರವಿ ಬೇಲೂರೆ, ನಿವೃತ್ತ ಶಿಕ್ಷಕ ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೇಡೆ, ಚೆನ್ನಪ್ಪಾ ಇಜಾರೆ, ಸವಿತಾ ರಗಟೆ, ಉಷಾ ಕನ್ನಾಡೆ, ಮೀನಾ ಜಾಧವ ಗುರುದೇವಿ ಆನಿಮಠ, ಲಕ್ಷ್ಮಿ ಬಿರಾದಾರ ಸೇರಿಂದತೆ ಇತರರಿದ್ದರು.

ರೇಣುಕಾ ಹೋಗ್ತಾಪೂರೆ ಸ್ವಾಗತಿಸಿ ನಿರೂಪಿಸಿದರು.

೨೦೨೬ನೇ ಸಾಲಿನ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯನ್ನು ಅಕ್ಟೋಬರ್ ೧೧ ರಿಂದ ೨೧ ರವರೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಅದರ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಹಲವರು ಸಲಹೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *