ಚಿತ್ರದುರ್ಗ :

ಶ್ರೀ ಮುರುಘಾಮಠವು ಶೂನ್ಯಪೀಠ ಪರಂಪರೆಯ ಅಧಿಕೃತ ಮೂಲ ಮಠವಾಗಿದೆ. ಶರಣ ಸಂಸ್ಕ್ರತಿ ಉತ್ಸವ ೨೦೨೬ರ ಶೂನ್ಯ ಪೀಠಾರೋಹಣ ಕಾರ್ಯಕ್ರಮವನ್ನು ಈಚೆಗೆ ಶ್ರೀಮಠದ ರಾಜಾಂಗಣದ ಸದರುಕಟ್ಟೆಯಲ್ಲಿ ಶ್ರೀ ಮಠದ ಕರ್ತೃ ಶ್ರೀ ಮುರಿಗಿ ಶಾಂತವೀರ ಮಹಾಸ್ವಾಮಿಗಳ ಮೂರ್ತಿ ಶೂನ್ಯಪೀಠಾರೋಹಣ ಮೂಲಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮುರುಘರಾಜೇಂದ್ರ ಬೃಹನ್ಮಠ ಹಾಗು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ, ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು, ಎಸ್.ಎನ್. ಚಂದ್ರಶೇಖರ, ಡಾ.ಬಸವಪ್ರಭು ಸ್ವಾಮಿಗಳು, ಶಿರಾಳಕೊಪ್ಪ ವಿರಕ್ತಮಠದ ಸಿದ್ದೇಶ್ವರ ಮಹಾಸ್ವಾಮಿಗಳು, ಬೆಂಗಳೂರು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಮೋಕ್ಷಪತಿ ಸ್ವಾಮಿಗಳು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಡಾ.ಬಸವ ರಮಾನಂದ ಸ್ವಾಮಿಗಳು, ವಚನಾನಂದ ಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ವೇಮಾನನಂದ ಸ್ವಾಮಿಗಳು, ಹೊಸಮಠದ ಬಸವಲಿಂಗ ಮಹಾಸ್ವಾಮಿಗಳು, ಉಪ್ಪುಣಸಿಯ ಮುರುಘಾಮಠದ ಜಯಬಸವೇಶ್ವರ ಮಹಾಸ್ವಾಮಿಗಳು, ಹಿರೇಮಾಗಡಿ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಮಹಾಸ್ವಾಮಿಗಳು, ಚಿದರಳ್ಳಿ ಶ್ರೀ ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಿರಸಂಗಿ ಮುರುಘಾಮಠದ ಬಸವಮಹಾಂತ ಮಹಾಸ್ವಾಮಿಗಳು, ಶಿಕಾರಿಪುರದ ಶ್ರೀ ಮುರುಘಾಮಠದ ಚನ್ನಬಸವ ಮಹಾಸ್ವಾಮಿಗಳು, ದೊಡ್ಡಮೇಟಿಕುರ್ಕಿ ಶಶಿಶೇಖರ ಸಿದ್ದಬಸವ ಮಹಾಸ್ವಾಮಿಗಳು, ನಿಪ್ಪಾಣಿ ಮುರುಘೇಂದ್ರ ಮಠದ ಬಸವ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ರಾಣೆಬೆನ್ನೂರು ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು, ಕೊಡ್ಲಿಪೇಟೆಯ ಕಲ್ಲಳ್ಳಿ ಮಠದ ರುದ್ರಮುನಿ ಮಹಾಸ್ವಾಮಿಗಳು, ಕವಲತ್ತು ಬಸವ ಕೇಂದ್ರದ ಮುಕ್ತಾಯಕ್ಕನವರು, ಹೂವಿನಮಡುವು ಮುರುಘಾಮಠದ ಹಾಲಮಹಾಸ್ವಾಮಿಗಳು, ನರಸಿಂಹರಾಜಪುರ ಬಸವಯೋಗಪ್ರಭು ಮಹಾಸ್ವಾಮಿಗಳು, ತಿಳುವಳ್ಳಿಯ ಕಲ್ಮಠದ ಬಸವ ನಿರಂಜನ ಮಹಾಸ್ವಾಮಿಗಳು, ಕಮಡೊಳ್ಳಿ ಗುರುಲೋಚನೇಶ್ವರ ವಿರಕ್ತಮಠದ ರಾಚೋಟೇಶ್ವರ ದೇವರು, ಅಗಡಿಯ ಪ್ರಭುಸ್ವಾಮಿಮಠದ ಗುರುಸಿದ್ದ ಮಹಾಸ್ವಾಮಿಗಳು, ಬ್ಯಾಡಗಿ ಮುಪ್ಪಿನ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು, ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘಾರಾಜೇಂದ್ರ ಮಹಾಸ್ವಾಮಿಗಳು, ಸೋಮಾಪುರ ಸಿದ್ದಾರೂಡ ಮಠದ ಜಯದೇವ ಮಹಾಸ್ವಾಮಿಗಳು, ಕಲಬುರಗಿ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ರಾಮದುರ್ಗ ತಾಲೂಕಿನ ಹೊಸಕೇರಿಯ ನೀಲಲೋಚನ ತಾಯಿ, ಬೇಲೂರು ಗುರುಬಸವೇಶ್ವರ ವಿರಕ್ತಮಠದ ಶಿವಬಸ ಮಹಾಸ್ವಾಮಿಗಳು, ಮಹಾರಾಷ್ಟ್ರದ ಗಡಿಂಗ್ಲಜ್ ಜಡಿಯ ಸಿದ್ದೇಶ್ವರ ಆಶ್ರಮದ ಮಹಾಂತ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ಚಿತ್ರದುರ್ಗ ಗುರುಕುಲ ಮುರುಘಾಮಠದ ಬಸವ ಮುರುಘೇಂದ್ರ ಮಹಾಸ್ವಾಮಿಗಳು, ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಗಳು, ಬಸವಕಲ್ಯಾಣ ಅನುಭವ ಮಂಟಪದ ಸುಗುಣಾತಾಯಿ, ಕನ್ನಮಂಗಲ ಅಕ್ಕಮಹಾದೇವಿ ಆಶ್ರಮದ ಅಕ್ಕ ನಾಗಲಾಂಬಿಕಾ ತಾಯಿ, ಹೊಸದುರ್ಗ ಬಸವಾಶ್ರಮದ ಅಕ್ಕಮಹಾದೇವಿ ತಾಯಿ, ಐರಾಣಿ ಮನೆಮಠದ ಗಜದಂಡ ಮಹಾಸ್ವಾಮಿಗಳು, ಹಿರೇಹೊನ್ನಿಹಳ್ಳಿ ಬಸವ ಮಹಾಮನೆಯ ಚನ್ನಬಸವ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹಾಗೂ ಸೋಮವಾರಪೇಟೆ ವಿರಕ್ತಮಠದ ನಿಶ್ಚಲ ನಿರಂಜನ ಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳು, ಶ್ರೀಮಠದ ಸದ್ಭಕ್ತರು, ಎಸ್.ಜೆ.ಎಂ. ವಿದ್ಯಾಪೀಠ, ಎಸ್.ಜೆ.ಎಂ. ವಿಶ್ವವಿದ್ಯಾಲಯದ, ಮಠದ, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ಸಿಬ್ಬಂದಿಯವರು, ಸಾಕ್ಷೀಕರಿಸಿದರು.

ಕೋಲಾಟ ಪದಗಳು, ಡೊಳ್ಳು ಕುಣಿತ, ವೀರಗಾ ಸೆಕುಣಿತ, ಭಜನೆ ಪದಗಳು, ಕಹಳೆ, ಅನೇಕ ಜನಪದ ಕಲಾಮೇಳಗಳು ಪೀಠಾರೋಹಣಕ್ಕೆ ಮೆರುಗನ್ನು ನೀಡಿದವು. ಜನಸಾಮಾನ್ಯರು ಶೂನ್ಯ ಪೀಠಾರೋಹಣಕ್ಕೆ ಸಾಕ್ಷಿಯಾದರು. ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಮಹಾದಾಸೋಹ ಏರ್ಪಡಿಸಲಾಗಿತ್ತು.
ಶ್ರೀಮಠದ ಆವರಣದಲ್ಲಿ ಧರ್ಮಗುರು ಬಸವಣ್ಣನವರು ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರು ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಶ್ರೀ ಮುರುಘಾಮಠದ ಆವರಣದಲ್ಲಿ ಈ ನಾಡಿನ ಮಹಾಮಾನವತಾವಾದಿ ಬಸವಣ್ಣನವರ ಮತ್ತು ಶೂನ್ಯ ಪೀಠದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರ ಭಾವಚಿತ್ರ ಹಾಗು ಪ್ರಾಚೀನ ಹಸ್ತಪ್ರತಿಗಳನ್ನು ಹೂವಿನ ಪಲ್ಲಕಿಯಲ್ಲಿ ಹೊತ್ತು ಶ್ರೀಮಠದ ಆವರಣದಲ್ಲಿ ಮೆರವಣಿಗೆಯನ್ನು ನೆರವೇರಿಸಲಾಯಿತು.

ಹಸ್ತಪ್ರತಿಗಳು ನಾಡಿನ ಅರಿವಿನ ಕಣಜಗಳು. ಕನ್ನಡ ನಾಡಿನ ಜನರ ಬದುಕಿನ ಪ್ರತೀಕಗಳಾದ ಹಸ್ತ ಪ್ರತಿಗಳು ಕನ್ನಡ ಪರಂಪರೆ, ಕನ್ನಡ ಮನಸ್ಸು, ಮತ್ತು ಕನ್ನಡ ಸಂಸ್ಕೃತಿಯ ಅಧ್ಯಯನದ ಚಹರೆಗಳಾಗಿವೆ. ನಮ್ಮ ಪೂರ್ವಿಕರು ಹಸ್ತಪ್ರತಿಗಳನ್ನು ಧಾರ್ಮಿಕ ಕಾರಣಕ್ಕಾಗಿ ರಕ್ಷಣೆ ಮಾಡುತ್ತಿದ್ದರು. ವಂಶ ಸಂಬಂಧಿಗಳು ಧಾರ್ಮಿಕ ಹಿನ್ನೆಲೆ, ಸಾಂಸ್ಕೃತಿಕ ಹಿನ್ನೆಲೆ, ಜೀವನ ಚರಿತ್ರೆ, ದೈವಿಕಮೂಲ ಭಾವನೆಗಳೆಂದು ನಂಬಿದ್ದರು.

ಬಸವಾದಿ ಶರಣರು ಹೇಳಿದ ಲಕ್ಷಾಂತರ ವಚನಗಳು ಈ ಹಸ್ತಪ್ರತಿಗಳಲ್ಲಿವೆ. ಈ ಕೆಲಸವನ್ನು ಹಿಂದಿನಿಂದಲೂ ಮಠಮಾನ್ಯಗಳು ಸಂರಕ್ಷಣೆ ಮಾಡುತ್ತ ಬಂದಿವೆ. ಹೀಗೆ ಮಾಡದಿದ್ದರೆ ನಮಗೆ ವಚನಕಾರರ ಬಗ್ಗೆ ಏನು ಸಹ ತಿಳಿಯುತ್ತಿರಲಿಲ್ಲ. ಇದನ್ನು ಅವಲೋಕನ ಮಾಡಿಕೊಂಡಾಗ ಹಸ್ತಪ್ರತಿಗಳು ಈ ನಾಡಿನ ಸಾಹಿತ್ಯ, ಸಂಸ್ಕೃತಿ, ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಭಾಷಿಕವಾಗಿ ಮಹತ್ವಪೂರ್ಣವಾದವು ಎಂಬುದು ಗೊತ್ತಾಗುತ್ತದೆ.
ವಚನಕಾರರು ಬರೆದಂತಹ ಸಾಹಿತ್ಯ ದಾಖಲಾಗಿ ಉಳಿಸಿಕೊಟ್ಟಂತಹ ಅಮೂಲ್ಯವಾದ ಸಂಪತ್ತು ಹಸ್ತಪ್ರತಿಗಳು. ಅದ್ದರಿಂದ ಶ್ರೀ ಮುರುಘಾಮಠವು ಹಸ್ತಪ್ರತಿಗಳನ್ನು ವಿಶೇಷವಾಗಿ ದೈವಿ ಭಾವನೆ ನೆಲೆಯಲ್ಲಿ ನೋಡುವುದರ ಜೊತೆಗೆ ನಾಡಿನ ಜ್ಞಾನದ ಕಣಜಗಳಾಗಿವೆ. ಇಂತಹ ಪ್ರಾಚೀನ ಹಸ್ತಪ್ರತಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿರಿಸಿ ಮೆರವಣೆಗೆಯನ್ನು ಮಾಡುವುದು ಶ್ರೀ ಮಠದ ಸಂಪ್ರದಾಯ. ಈ ಮೆರವಣೆಗೆಯನ್ನು ಶ್ರೀ ಮಠದ ಆವರಣದಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಡಾ. ಬಸವಕುಮಾರ ಮಹಾಸ್ವಾಮಿಗಳು, ಡಾ ಬಸವಪ್ರಭು ಮಹಾಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮಿಗಳು, ವೇಮಾನಂದ ಸ್ವಾಮಿಗಳು, ಮೋಕ್ಷಪತಿ ಸ್ವಾಮಿಗಳು, ಆಡಳಿತ ಮಂಡಳಿ ಸದಸ್ಯರಾದ ಎನ್ ಎಸ್. ಚಂದ್ರಶೇಖರ, ಹಾಗೂ ನಾಡಿನ ನಾನಾ ಕಡೆಯಿಂದ ಅಗಮಿಸಿದ ಪೂಜ್ಯ ಮಠಾಧೀಶ್ವರರು ಸಾಕ್ಷಿಕರಿಸಿದ್ದರು.
ಈ ಮೆರವಣೆಗೆಯಲ್ಲಿ ಅನೇಕ ಜಿಲ್ಲೆಗಳಿಂದ ಅಗಮಿಸಿದ ಕಲಾವಿದರು ಹಾಗೂ ಜನಪದ ಕಲಾಮೇಳಗಳಾದ. ಖಾಸಾ ಬೇಡರ ಪಡೆ ಕುಣಿತ, ಹಗಲು ವೇಷಗಾರರು, ಕೋಲಾಟ ಪದಗಳು, ಮಹಿಳಾ ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೊಂಬು ಕಹಳೆ , ಗೊರವನ ಕುಣಿತ, ಲಂಬಾಣಿ ನೃತ್ಯ, ನಾಸಿಕ್ ಡೋಲು ನಗಾರಿ ಕುಣಿತ, ಪೂಜಾ ಕುಣಿತ , ಎಸ್.ಬಿ.ಬಿ ಬ್ಯಾಂಡ್ ಮೇಳ ಭಾಗವಹಿಸಿದ್ದವು.
ಕಹಳೆಯ ನಿನಾದದಿಂದ ಮೆರವಣಿಗೆಯ ಶೋಭೆಯು ಹೆಚ್ಚಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವಿಶೇಷವಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯು ಹಾಜರಿದ್ದು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯಕ್ರಮವನ್ನು ನಡೆಸುವಲ್ಲಿ ಸಹಕಾರ ನೀಡಿತು. ಮಠದ ಸದ್ಭಕ್ತರು ಹಾಗೂ ಜನಸಮಾನ್ಯರು ಶೂನ್ಯ ಪೀಠರೋಹಣಕ್ಕೆ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆಗೆ ಸಾಕ್ಷಿಯಾದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
