ಸಿಂಧನೂರು
ಸಕಲ ಸಸ್ಯವರ್ಗ, ಪ್ರಾಣಿವರ್ಗಗಳಲ್ಲಿ ಜಂಗಮ ಸ್ವರೂಪ ಅಡಗಿದೆ. ಮನುಷ್ಯರಾಗಿ ಮನುಷ್ಯರನ್ನು ಪ್ರೀತಿಸುವುದನ್ನು ಬಸವಾದಿ ಶರಣರು ಮೊಟ್ಟ ಮೊದಲು ಕಲಿಸಿದರು. 12ನೇ ಶತಮಾನದ ಶರಣರು ಮಾನವರಲ್ಲಿ ದೇವರನ್ನು ಕಂಡರು. ಅದೇ ಹಾದಿಯಲ್ಲಿ ಇಂದು ನಾವು ಸಾಗಬೇಕಾಗಿದೆ ಎಂದು ಪಿ. ರುದ್ರಪ್ಪ ಹೇಳಿದರು.
ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ನೌಕರರ ಸಂಘದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಶರಣ ವೀರಭದ್ರಗೌಡ ಅಮರಾಪುರ ಮಾತನಾಡುತ್ತ, ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಸಹಕಾರಿ ಸಂಘ ಸ್ಥಾಪಿಸಿ ಇಂತಹ ಸಾಮಾಜಿಕ ಸೇವಾ ಮಾಡುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಬೇಸಿಗೆಯ ತಾಪ ಹೆಚ್ಚುತ್ತಿದ್ದು ನೀರಿಗೆ ಹಾಹಾಕಾರ ಶುರುವಾಗುತ್ತಿದೆ. ಬಸವೇಶ್ವರರ ಹೆಸರೇ ದಾಸೋಹದ ಸಂಕೇತ. ಅಂತಹ ಮಹಾತ್ಮನ ಹೆಸರನ್ನು ಇಟ್ಟುಕೊಂಡು ಸಂಸ್ಥೆ ಸಾರ್ಥಕ ಸೇವೆ ಮಾಡುತ್ತಿದೆ.
ಸಿದ್ದರಾಮ ಶಿವಯೋಗಿಗಳು “ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ ಪರರ ಹಿತಕ್ಕಲ್ಲ ನೋಡಯ್ಯ” ಎಂದು ಹೇಳಿದ್ದಾರೆ. ಇಂದಿನವರು ತಮ್ಮ ಸ್ವಾರ್ಥಕ್ಕಾಗಿ ಇರುವರು ಪರರಿಗಾಗಿ ಅಲ್ಲ. ಸಹಕಾರಿ ಸಂಘದವರು ಪರೋಪಕಾರ ಭಾವನೆಯಿಂದ ಇಂತಹ ಕಾರ್ಯದ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರದ ಅಧ್ಯಕ್ಷರಾದ ಕರೇಗೌಡ ಕುರಕುಂದ, ಬಸವರಾಜಪ್ಪ ಕುರುಕುಂದ, ಬಸವಲಿಂಗಪ್ಪ ಬಾದರ್ಲಿ, ಚಂದ್ರೇಗೌಡ ಹರಟನೂರ, ಬಸವರಾಜ್ ಹೆಚ್. ವಕೀಲರು, ಬಸನಗೌಡ ಜಿನ್ನದ್ ಹಾಗೂ ಸಹಕಾರಿ ಸಂಘದ ನೌಕರರು ಭಾಗವಹಿಸಿದ್ದರು.
Fine
👍👏
ಗುರು ಬಸವ ತಂದೆಯ ಸಂಕಲ್ಪ ಹಿಡೆರಿಸಿದ ಬಸವೇಶ್ವರ ಸಹಕಾರ ಪತ್ತಿನ ಸಂಘದ ಎಲ್ಲಾ ಸದಸ್ಯರಿಗೂ ಅನಂತ ಶರಣುಗಳು🙏🙏
ಗುರು ಬಸವ ತಂದೆಯ ಸಂಕಲ್ಪದಂತೆ ಬಸವೇಶ್ವರ ಸಹಕಾರ ಪತ್ತಿನ ಸಂಘದ ಎಲ್ಲಾ ಸದಸ್ಯರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಅವರೆಲ್ಲರಿಗೂ ಶರಣು ಶರಣಾರ್ಥಿಗಳು