ಗಂಗಾವತಿ:
ಸಾಮಾನ್ಯವಾಗಿ ಒಬ್ಬರನ್ನು ಪರಿಚಯಿಸುವಾಗ ಆತನ ಇರುವಿಕೆಗಿಂತಲು ಹೆಚ್ಚಾಗಿ ಅಥವಾ ಕಡಿಮೆ ಅನ್ನೋ ರೀತಿಯಲ್ಲಿ ಆಗುತ್ತದೆ. ಆದರೆ ಸತ್ಯಕ್ಕೆ ಚ್ಯುತಿ ಬರದ ರೀತಿಯಲ್ಲಿ ಪರಿಚಯಿಸುವವರು ಶ್ರೇಷ್ಠವೆನಿಸುತ್ತಾರೆ.
ಅದರಂತೆ “ಜಗದಗಲ ಮುಗಿಲಗಲ” ಎನ್ನುವ ಮುಖಾಂತರ ಬಸವಣ್ಣನವರು ಪರಮಾತ್ಮನ ಪರಿಚಯ ಮಾಡಿಕೊಟ್ಟರು. ಭಕ್ತರ ಜಗುಲಿಗಳಲ್ಲಿ ಪೂಜೆಗೊಳ್ಳುತ್ತಿದ್ದ ಭೌತಿಕವಾದ ವಚನ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯಿಸಿದವರು ಫ. ಗು. ಹಳಕಟ್ಟಿಯವರಾದರೆ, ಆ ಸಾಹಿತ್ಯವನ್ನು ಬೌದ್ಧಿಕವಾಗಿ ತಿಳಿಯುವಂತೆ ಮಾಡಿದವರು ಪ್ರವಚನ ಪಿತಾಮಹ ಸ್ವಾಮಿ ಲಿಂಗಾನಂದರು ಎಂದು ಬಸವಕೇಂದ್ರದ ಅಧ್ಯಕ್ಷ ಕೆ.ಬಸವರಾಜ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವದಳದ ಗುರುಬಸವ ಮಂಟಪದಲ್ಲಿ ಲಿಂಗಾನಂದ ಸ್ವಾಮಿಗಳ ಜನ್ಮದಿನದ ಸಮಾರಂಭದಲ್ಲಿ ಮಾತನಾಡುತ್ತಾ, 1988 ರಲ್ಲಿ ನಡೆದ ಪ್ರವಚನದ ವಿಷಯಗಳನ್ನು ತಿಳಿಸಿದರು.
ಪ್ರಾರಂಭದಲ್ಲಿ ಬಸವಣ್ಣನವರ ಮತ್ತು ಲಿಂಗಾನಂದ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಾರದ ಪದ್ದತಿಯಂತೆ ಪ್ರಾರ್ಥನೆ ವಿನಯಕುಮಾರ ಅಂಗಡಿ ಬಸವಜ್ಯೋತಿ ಇವರು ವಚನಪಠಣ ನಡೆಸಿದರು.
ಕಾರ್ಯದರ್ಶಿ ವಿರೇಶ ಅಸರಡ್ಡಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಅವರು ಹಾಡಿನ ಮುಖಾಂತರ ಪೂಜ್ಯರನ್ನು ಪರಿಚಯಿಸಿದರು.

ಅಧ್ಯಕ್ಷರಾದ ದಿಲೀಪಕುಮಾರ ವಂದಾಲ ಅವರು, ನಾವು ಕೂಡಲಸಂಗಮದವರಾದರೂ ಬಸವಣ್ಣನವರ ಬಗ್ಗೆ ತಿಳಿಸಿಕೊಟ್ಟವರು ಲಿಂಗಾನಂದ ಸ್ವಾಮಿಗಳು ಎಂದು ಹೇಳಿದರು.
ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
