ಉಡುಪಿ :
ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ಡಯಾನ ಸ್ಕೋರ್ ಸಹಕಾರದೊಂದಿಗೆ ಬಸವ ಜಯಂತಿ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ಈಚೆಗೆ ಜರುಗಿತು.
ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 36 ಪ್ರಭೇದದ ಏಕದಳ, ದ್ವಿದಳ ಧಾನ್ಯಗಳನ್ನು ಭಕ್ತರಿಗೆ ವಿತರಿಸಲಾಯಿತು.
ಗಾಯಕಿ ಮಾಯಾ ಕಾಮತ್ ಮತ್ತು ಶಿಷ್ಯಬಳಗ ಹಾಗೂ ಕಾಪುವಿನ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶೋಭಾ ಆರ್. ಶೇಟ್ ರಂಗೋಲಿ ಬಿಡಿಸಿದ್ದರು. ನಾಗರಿಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಸವ ಪುತ್ಥಳಿ ಸ್ಥಾಪನೆ:
ಬಸವಣ್ಣನವರ ತತ್ವಾದರ್ಶಗಳನ್ನು ತಿಳಿಸಲು ಉಡುಪಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಈಚೆಗೆ ಜಿಲ್ಲಾಡಳಿತ ವತಿಯಿಂದ ನಡೆದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ನಿರಂಜನ ಯು.ಸಿ. ಜಯಂತಿ ಕುರಿತು ಉಪನ್ಯಾಸ ನೀಡಿದರು. ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಹ ಮಾತನಾಡಿದರು. ಬಸವ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಎಸ್. ಚಂದ್ರಶೇಖರ, ಅಧ್ಯಕ್ಷ ಗಂಗಾಧರ, ಎಂ.ಎ. ಗಫೂರ್, ಅಬೀದ್ ಗದ್ಯಾಳ, ದಿನಕರ ಹೇರೂರ, ದಿನಕರ ಶೆಟ್ಟಿ ಮತ್ತಿತರ ಅಧಿಕಾರಿಗಳಿದ್ದರು.
