ವಚನ ದರ್ಶನ ವಿವಾದ: ಗದಗಿನ ಬಸವ ಭಕ್ತರೇ ಎಲ್ಲಿದ್ದೀರಿ?

ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಸಿಗುವುದು ಗದಗ ಜಿಲ್ಲೆಯಲ್ಲಿ. ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳ ನಾಡು, ಮುಳಗುಂದ ಬಾಲಲೀಲಾ ಶ್ರೀ ಮಹಾಂತ ಸ್ವಾಮಿಗಳ ಪುಣ್ಯ ಭೂಮಿ ಇದು.

ಸುಮಾರು ಹತ್ತು ಸಂಘಟನೆಗಳು ಇದ್ದರೂ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮಿಗಳ ‘ವಚನ ದರ್ಶನ’ ಎಂಬ ವೈದಿಕ ಮನಸ್ಸಿನ ಪುಸ್ತಕವನ್ನು ಸಂಘ ಪರಿವಾರದವರು ಪ್ರಾಯೋಜಿಕ ಪ್ರಯತ್ನದಂತೆ ಬಿಡುಗಡೆ ಮಾಡುತ್ತಿದ್ದಾರೆ.

ಅದರ ವಿರುದ್ಧ ಇಡೀ ಕರ್ನಾಟಕ ಪ್ರತಿಭಟನೆಯಲ್ಲಿ ತೊಡಗಿದ್ದರೂ, ಗದಗ ನಗರ ಮತ್ತು ಜಿಲ್ಲೆಯ ಬಸವ ಭಕ್ತರು ಮೌನಕ್ಕೆ ಜಾರಿದ್ದಾರೆ. ಇದು ಕುರುಡು ಜಾಣತನವೋ ಅಥವಾ ಹೇಡಿತನವೋ ಗೊತ್ತಿಲ್ಲ. ಅವರ ಶ್ರೀ ಮಠಕ್ಕೆ ಕೆಲವರು ಹೋಗಿ ಚರ್ಚಿಸಿ ಇಂತಹ ಪುಸ್ತಕವನ್ನು ಹಿಂದೆ ಪಡೆಯಲು ಒತ್ತಾಯಿಸಿರಿ.

ಇದು ನೀವು ಗುರು ಬಸವಣ್ಣನವರಿಗೆ ಕೊಡುವ ಗೌರವ. ನೀವು ಎಷ್ಟೇ ಸಮ್ಮೇಳನ ಮಾಡಿ, ಪುಸ್ತಕ ಮಾಡಿರಿ ಇಂತಹ ವೈದಿಕ ಪ್ರಯತ್ನಗಳು ನಿಲ್ಲುವುದಿಲ್ಲ. ಶ್ರೀ ಸದಾಶಿವಾನಂದ ಸ್ವಾಮಿಗಳಂತಹ ಪ್ರತಿಗಾಮಿ ಮನಸ್ಸು ಇಡೀ ಸಮಾಜವನ್ನು ಹಾಳು ಮಾಡುವುದು. ಈಗ ಎಚ್ಚರವಾಗದಿದ್ದರೆ ವೈದಿಕರು. ಶರಣ ಸಾಹಿತ್ಯಕ್ಕೆ ಸಮಾಧಿ ಕಟ್ಟುತ್ತಾರೆ.

ಈ ಮಾತಿನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ಬಸವ ತತ್ವದಲ್ಲಿ ಈಗ ಬೇಕಾಗಿರುವುದು ಗಣಾಚಾರ. ವಿರೋಧಿಸಿ, ಪ್ರತಿಭಟಿಸಿ, ವಚನ ಸಾಹಿತ್ಯ ಉಳಿಸಿ. ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದನ್ನು ತಪ್ಪಿಸಿ.

Share This Article
Leave a comment

Leave a Reply

Your email address will not be published. Required fields are marked *