ತುಮಕೂರು:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಸಮಸ್ತ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜುಲೈ 02ರಂದು “ಡಾ: ಫ.ಗು. ಹಳಕಟ್ಟಿ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ”ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪೂರ್ವದಲ್ಲಿ ಜೂನ್ 30ರಂದು ಮಧ್ಯಾಹ್ನ 03 ಗಂಟೆಗೆ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು ಇಲ್ಲಿ
1) ವಚನ ಗಾಯನ ಸ್ಪರ್ಧೆ ಮತ್ತು
2) ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಮೂವರು ವಿಜೇತರಿಗೆ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ” ಕಾರ್ಯಕ್ರಮದಂದು ಸನ್ಮಾನಿಸಲಾಗುವುದು.
ಸ್ಪರ್ಧೆಯ ಷರತ್ತುಗಳು:
- ಎಲ್ಲಾ ಸ್ಪರ್ಧೆಗಳಲ್ಲೂ ತೀರ್ಪುಗಾರರ ತೀರ್ಮಾನವೇ ಅಂತಿಮವಾದುದು.
- ಸ್ಪರ್ಧೆಯನ್ನು ಮೂರು ವಿಭಾಗದಲ್ಲಿ ಏರ್ಪಡಿಸಿದ್ದು, 1ನೇ ಹಂತದಲ್ಲಿ ಪ್ರಥಮ / ದ್ವಿತೀಯ ಪಿ.ಯು.ಸಿ ಅಥವಾ ಸಮನಾಂತರದಲ್ಲಿ.
2ನೇ ಹಂತದಲ್ಲಿ ಸ್ನಾತಕ / ಸ್ನಾತರೋತ್ತರ ವಿಭಾಗದಲ್ಲಿ.
3ನೇ ಹಂತದಲ್ಲಿ ಸಾರ್ವಜನಿಕರಿಗೆ, 23ನೇ ವಯಸ್ಸಿನ ಮೇಲ್ಪಟ್ಟು ಅವಕಾಶ ಇರುವುದು.
3) ವಚನ ಗಾಯನ ಸ್ಪರ್ಧೆಯಲ್ಲಿ 12ನೇ ಶತಮಾನದಲ್ಲಿ ಶರಣ/ ಶರಣೆಯರು ರಚಿಸಿದ ವಚನಗಳಿಗೆ ಮಾತ್ರ ಅವಕಾಶ ನೀಡಲಾಗುವುದು, 5 ನಿಮಿಷ ಕಾಲಾವಕಾಶ.
4) ಪ್ರಬಂಧ ಸ್ಪರ್ಧೆಯಲ್ಲಿ ವಚನ ಸಾಹಿತ್ಯಕ್ಕೆ ಡಾ: ಫ.ಗು. ಹಳಕಟ್ಟಿ ಅವರ ಕೊಡುಗೆ ಕುರಿತಂತೆ ಸ್ಪರ್ಧಾ ವಿಷಯವಾಗಿದೆ, 30 ನಿಮಿಷ ಕಾಲಾವಕಾಶ ವಿರುತ್ತದೆ.
5) ಸ್ಪರ್ಧಾರ್ಥಿಗಳು ಸ್ಪರ್ಧೆಯ ದಿನದ ಪೂರ್ವದಲ್ಲಿ ಈ ಕೆಳಕಂಡ ಸಂಘಟಕರ ಬಳಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
6) ಹೆಚ್ಚಿನ ಮಾಹಿತಿಗೆ ವಿದ್ವಾನ್ ಎಂ. ಜಿ ಸಿದ್ದರಾಮಯ್ಯ(ಮೊ: 9449472092) ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ತುಮಕೂರು / ರಾಜಶೇಖರಯ್ಯ (ಮೊ:9448253225), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು / ಶ್ರೀಮತಿ ಕಲ್ಪನಾ, (ಮೊ: 9448479405) ಬಸವ ಕೇಂದ್ರ, ತುಮಕೂರು ಇವರನ್ನು ಸಂಪರ್ಕಿಸಲು ಕೋರಿದೆ.
