ಆಳಂದ:
ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಚನ ಗ್ರಂಥದ ಭವ್ಯ ಮೆರವಣಿಗೆ ಬುಧವಾರ ನಡೆಯಿತು.

ಲಿಂಗಾಯತ ಭವನದಲ್ಲಿ ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುರಾಜೇಂದ್ರ ಸ್ವಾಮಿಗಳು ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀರಾಮ್ ಮಾರ್ಕೆಟ್ ಸೇರಿ ಪ್ರಮುಖ ಬೀದಿಗಳಲ್ಲಿ ಸಾಗಿತು.

ಅಸಂಖ್ಯಾತ ಭಕ್ತರ ವಚನ ಗ್ರಂಥದ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು. ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿ ಗಮನಸೆಳೆದರು.
ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಿರೇಮಠದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯ, ನರೋಣಾದ ಶ್ರೀ ಗುರು ಮಹಾಂತ ಸ್ವಾಮೀಜಿ, ಮಾದನಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಮಾಜಿ ಶಾಸಕ ಸುಭಾಷ ಗುತ್ತೇದಾರ್, ಕಲಬುರಗಿ, ಬೀದರ್-ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಪ್ರಮುಖರಾದ ಹರ್ಷಾನಂದ ಗುತ್ತೇದಾರ್, ಶಿವಪುತ್ರಪ್ಪ ಪಾಟೀಲ್, ರಾಜಶೇಖರ ಯಂಕಂಚಿ, ಗುರುಶರಣ ಗೌಡ ಪಾಟೀಲ್, ಆನಂದರಾವ ಪಾಟೀಲ್, ಸೋಮಶೇಖರ ಮೂಲಗೆ, ಶ್ರೀಶೈಲ ಖಜೂರಿ, ಮಹಾದೇವಪ್ಪ ಪಾಟೀಲ್, ಮಲ್ಲಿಕಾರ್ಜುನ ತಡಕಲ, ಮಹೇಶ ಗೌಳಿ, ಸಿದ್ದು ಪಾಟೀಲ್, ನಾಗರಾಜ ಶೇಗಜಿ, ರೇವಣಸಿದ್ದಪ್ಪ ನಾಗೂರೆ ಇತರರಿದ್ದರು.
ಉತ್ಸವ ಸಮಿತಿ ಅಧ್ಯಕ್ಷ ಆನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಜನಾಥ ಝಳಕಿ ಹಾಗೂ ಸೋಮಶೇಖರ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಶರಣು ಕುಮಸಿ ವಂದಿಸಿದರು.
