ಚಾಮರಾಜನಗರದಲ್ಲಿ ಬಸವ ಧರ್ಮ ಅಧ್ಯಯನ ಕಾರ್ಯಗಾರಕ್ಕೆ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ವೀರಶೈವ ಧರ್ಮವಲ್ಲ, ವೃತ: ಜೆ.ಎಸ್. ಪಾಟೀಲ

ಚಾಮರಾಜನಗರ:

ವೀರಶೈವ ಎಂಬುದೊಂದು ವೃತವಾಗಿದ್ದು, ಅದನ್ನು 13ನೇ ಶತಮಾನದ ಕೊನೆ ಮತ್ತು 14ನೇ ಶತಮಾನದ ಪ್ರಾರಂಭದಲ್ಲಿ ಬಸವ ಪ್ರಭುಗಳು ಉಲ್ಲೇಖಿಸಿದರು. ಅದನ್ನೇ ಧರ್ಮವನ್ನಾಗಿ ಭಾವಿಸಿ ಮುಂದುವರೆದಿದ್ದಾರೆ. ಆದರೆ ವಿರಶೈವ ಎಂಬುದು ಧರ್ಮವಲ್ಲ ಅದೊಂದು ವೃತ ಮಾತ್ರ ಎಂದು ವಿಜಯಪುರದ ಶರಣತತ್ವ ಚಿಂತಕರಾದ ಡಾ. ಜೆ.ಎಸ್‌. ಪಾಟೀಲ ಅವರು ಹೇಳಿದರು.

ತಾಲ್ಲೂಕಿನ ಆಲೂರು ಗ್ರಾಮದ ಬಸವ ಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಚಾಮರಾಜನಗರ ಜಿಲ್ಲಾ ಘಟಕ, ರಾಷ್ಟ್ರೀಯ ವೀರಗಣಾಚಾರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ‘ಬಸವ ಧರ್ಮ ಅಧ್ಯಯನ ಕಾರ್ಯಗಾರ’ದಲ್ಲಿ ‘ಲಿಂಗಾಯತ ಧರ್ಮದ ಇತಿಹಾಸ ಮತ್ತು ಸಂಘಟನೆ’ ವಿಷಯವಾಗಿ ಅವರು ಉಪನ್ಯಾಸ ನೀಡುತ್ತಿದ್ದರು.

ಭಾರತದಲ್ಲಿರುವ ಜೈನ, ಬೌದ್ಧ ಧರ್ಮಗಳು ಸ್ಥಾಪನೆಯಾದ ಬಗೆ ಮತ್ತು ಅವುಗಳ ಮೇಲೆ ವೈದಿಕರು ಹೇಗೆ ದಾಳಿ, ದಬ್ಬಾಳಿಕೆ ನಡೆಸಿದರು ಎಂಬುದನ್ನು ತಿಳಿಸಿದರು.

ಅದರಂತೆ ಶರಣ ಚಳವಳಿ, ಲಿಂಗಾಯತ ಧರ್ಮದ ಮೇಲೆ ವೈದಿಕರು ನಡೆಸಿದ ದಾಳಿ, ವಚನ ಸಾಹಿತ್ಯ ನಾಶ, ಶರಣರನ್ನು ಕೊಲೆ ಮಾಡಿದ ಕಾರಣ, ಬಗೆಯನ್ನು ಪಾಟೀಲರು ವಿವರಿಸಿದರು.

ಮಂಗಳವಾರ ಕಾರ್ಯಾಗಾರವನ್ನು ಜೆಎಲ್‌ಎಂ ಜಿಲ್ಲಾ ಅಧ್ಯಕ್ಷರಾದ ಕಾಳನಹುಂಡಿ ಗುರುಸ್ವಾಮಿ ಅವರು ಉದ್ಘಾಟಿಸಿ ಮಾತನಾಡುತ್ತ, 12ನೇ ಶತಮಾನದಲ್ಲಿ ಶರಣ ಧರ್ಮ ಸ್ಥಾಪನೆ ಮತ್ತು ಚಳುವಳಿಯ ಸರಿಯಾದ ಅರಿವಿನ ಅಗತ್ಯವಿದ್ದು, ಅದನ್ನು ಪಡೆಯಲು ಈ ಕಾರ್ಯಾಗಾರ ಸುವರ್ಣ ಅವಕಾಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎ.ಬಿ. ಮಹೇಶ ಆಲೂರ ಸ್ವಾಗತಿಸಿದರು. ವಚನವನ್ನು ಮೈತ್ರಿ ಹಾಡಿದರು. ವಿ.ಎಸ್.‌ ನಂದೀಶ ಆಲೂರ ಅವರು ನಿರೂಪಿಸಿ ವಂದಿಸಿದರು.

14ರಿಂದ ಆರಂಭವಾದ ಕಾರ್ಯಗಾರ 18ರ 5 ದಿನದ ವರೆಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಗೆಯವರೆಗೆ ನಡೆಯುತ್ತದೆ ಎಂದು ಆಯೋಜಕರಾದ ಎಂ. ಶಿವಪ್ರಸಾದ ತಿಳಿಸಿದರು.

ಆಲೂರಿನ ಶ್ರೀ ಬಸವೇಶ್ವರ ಭಜನಾ ಸಂಘದವರಿಂದ ಕಾರ್ಯಾಗಾರದಲ್ಲಿ ಬಸವ ಭಜನೆ ನಡೆಯುವುದು. ಕಾರ್ಯಾಗಾರಕ್ಕೆ ಅನೇಕ ಶರಣರು ಪ್ರಸಾದ ದಾಸೋಹ ಸೇವೆ ನೀಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment
  • ಶರಣು ಶರಣಾರ್ಥಿಗಳು ಚಾಮರಾಜನಗರದಲ್ಲಿ ಬಸವ ಧರ್ಮ ಅಧ್ಯಯನ ನಡೆದಿರುವುದು ಬಹಳ ಸಂತೋಷದ ವಿಷಯ ಶರಣರೇ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ತಾಲೂಕ ಮಟ್ಟದಲ್ಲಿ ಜಿಲ್ಲಾಮಟ್ಟದಲ್ಲಿ ಏಕೆ ನಡೆಸಬಾರದು ನಡೆಸಿದ್ದೆ ಆದರೆ ಬಸವ ಧರ್ಮ ಇನ್ನೂ ಜನರ ಹತ್ತಿರ ಹೋಗಲಿಕ್ಕೆ ಅನುಕೂಲವಾಗುತ್ತದೆ ಇಲ್ಲದಿದ್ದರೆ ಬಸವ ಧರ್ಮದ ಜಾಗದಲ್ಲಿ ಬೇರೆ ಯಾವುದೋ ವಿಚಾರ ತಲೆ ಎತ್ತುವುದರಲ್ಲಿ ಸಂದೇಹವಿಲ್ಲ

Leave a Reply

Your email address will not be published. Required fields are marked *