“ಬಸವಣ್ಣನವರು ತಮ್ಮ ವಚನದಲ್ಲಿ ತಮ್ಮನ್ನು ತಾವು ‘ನಿಜ ವೀರಶೈವ’ ಎಂದು ಹೇಳಿಕೊಂಡಿದ್ದಾರೆ.”
ಬೆಂಗಳೂರು
ಕೇವಲ ಮೀಸಲಾತಿಗಾಗಿ ವೀರಶೈವ ಧರ್ಮದ ಸನಾತನ, ಚಾರಿತ್ರಿಕ ಘನತೆಗೆ ಧಕ್ಕೆ ತರುವ ಧರ್ಮದ್ರೋಹದ ಕೆಲಸವನ್ನು ಯಾರೂ ಮಾಡಬಾರದು, ಎಂದು ನಾಲ್ಕು ವೀರಶೈವ ಪೀಠಾಧಿಪತಿಗಳು ಹೇಳಿದ್ದಾರೆ.
ಈ ಬಗ್ಗೆ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು, ಕಾಶಿ ಉಭಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಜಂಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಬೆರಳೆಣಿಕೆಯಷ್ಟು ವ್ಯಕ್ತಿಗಳು ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಸಮಾಜ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಬಸವಣ್ಣನವರು ತಮ್ಮ ವಚನದಲ್ಲಿ ತಮ್ಮನ್ನು ತಾವು ‘ನಿಜ ವೀರಶೈವ’ ಎಂದು ಹೇಳಿಕೊಂಡಿದ್ದಾರೆ.
ಎಲ್ಲರೂ ಹಿಂದೂಗಳು
1955-56ರಲ್ಲಿ ಭಾರತ ಸರಕಾರವು ರಚಿಸಿದ ಹಾಗೂ ಇಂದಿಗೂ ಅನುಷ್ಠಾನದಲ್ಲಿರುವ ನಾಲ್ಕು ಹಿಂದೂ ಕಾಯ್ದೆಗಳ ವ್ಯಾಖ್ಯಾನದಡಿಯಲ್ಲಿ “ಹಿಂದೂ ವೀರಶೈವ/ಲಿಂಗಾಯತಗಳನ್ನು ಒಳಗೊಂಡಿದೆ” ಎಂದು ಸ್ಪಷ್ಟಪಡಿಸಿದೆ. ಇದರ ಅರ್ಥ ವೀರಶೈವ, ಲಿಂಗಾಯತ ಹಿಂದೂ ಧರ್ಮದ ಭಾಗ ಎಂಬುದು ಸಂವಿಧಾನದತ್ತವಾಗಿ ಸಿದ್ಧವಾದ ಅಂಶ, ಎಂದು ಹೇಳಿದ್ದಾರೆ.
ವೀರಶೈವ, ಲಿಂಗಾಯತ ಎಂದೆಂದೂ ಒಂದೇ
ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಲ ಸಿದ್ಧಾಂತವನ್ನೊಳಗೊಂಡ ಒಂದೇ ವಿಧವಾದ ಆಚಾರ, ವಿಚಾರ, ತತ್ವಗಳ ಅಡಿಯಲ್ಲಿ ಇಷ್ಟಲಿಂಗ ಪೂಜಕರಾದ ಸಮುದಾಯವನ್ನು ‘ವೀರಶೈವ ಮತ್ತು ಲಿಂಗಾಯತ’ ಎಂಬ ಎರಡೂ ಹೆಸರುಗಳಿಂದ ಕರೆಯುತ್ತಾರೆ.
ಈಗಾಗಲೇ ಶಿವಯೋಗ ಮಂದಿರದಲ್ಲಿ ಜರುಗಿದ ಬೃಹತ್ ಧರ್ಮ ಸಮಾವೇಶದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿಯವರು ಸ್ಥಾಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಆಶಯಗಳಲ್ಲಿ ಧರ್ಮವಾಚಕ ಪದವಾದ ‘ವೀರಶೈವ’ ಮತ್ತು ಸಂಸ್ಕಾರವಾಚಕ ಪದವಾದ ‘ಲಿಂಗಾಯತ’ ವನ್ನು ಸೇರಿಸಿ ಎಲ್ಲೆಡೆ ‘ವೀರಶೈವ– ಲಿಂಗಾಯತ’ ಎಂದೇ ಸಂಬೋಧಿಸಲು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ.
ಯಾರೂ ಸಹ ದ್ವಂದ್ವ–ವೈರುಧ್ಯಗಳನ್ನು ಹುಟ್ಟುಹಾಕದಂತೆ ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಜಗದ್ಗುರುಗಳು ಸಲಹೆ ನೀಡಿದ್ದಾರೆ.
ಪ್ರಾಚೀನ, ಸನಾತನ ವೀರಶೈವ
‘ಕ್ರಿಸ್ತಪೂರ್ವದಿಂದ 19ನೇ ಶತಮಾನದವರೆಗಿನ ನೂರಾರು ಶಾಸನಗಳಲ್ಲಿ ವೀರಶೈವದ ಪ್ರಸ್ತಾಪವಿದೆ. ಸಂಸ್ಕೃತ, ಕನ್ನಡ, ತಮಿಳು, ತೆಲುಗು ಭಾಷೆಯ ಸಾಹಿತ್ಯ ಮತ್ತು ಶಾಸನಗಳು ವೀರಶೈವ ಪ್ರಾಚೀನತೆಯನ್ನು ಸಾಬೀತುಪಡಿಸಿವೆ. ಎಂ.ಎಂ. ಕಲಬುರ್ಗಿ ಪ್ರಧಾನ ಸಂಪಾದಕತ್ವದ ಕರ್ನಾಟಕ ಸರ್ಕಾರ ಪ್ರಕಟಿತ ‘ವಚನ ಸಂಪುಟ’ಗಳಲ್ಲಿ ಬಸವಣ್ಣನವರೂ ಸೇರಿ 30 ಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದಪ್ರಯೋಗ ಮಾಡಿದ್ದಾರೆ’ ಎಂದು ಶ್ರೀಗಳು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಇತ್ತೀಚಿಗೆ ರಂಭಾಪುರಿ ಶ್ರೀ ಮತ್ತು ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಕೂಡ ವೀರಶೈವ ಧರ್ಮಕ್ಕೆ ಅಪಚಾರವಾಗುತ್ತಿದೆ, ಲಿಂಗಾಯತ ಧರ್ಮವೇ ಅಲ್ಲ ಎಂದು ಹೇಳಿದ್ದರು.
ವೀರಶೈವ ಮತ್ತು ಸಂಸ್ಕೃತ ಶಬ್ದಗಳನ್ನು 15 ನೇ ಶತಮಾನದ ಭ್ರಾಹ್ಮಣ ಕವಿಗಳು ತಮ್ಮ ಹೊಟ್ಟೆಪಾಡಿಗಾಗಿ ಹಿಟ್ಟಿಗಾಗಿ ಒಂದು ಹೊತ್ತಿನ ಕೂಳಿಗಾಗಿ ವಚನಗಳಲ್ಲಿ ತುರುಕಿ ಅಪಭ್ರಂಶ ಮಾಡಿದರು. ವೀರವೃತಿಗಳು ಎನ್ನುವ ಶಬ್ದವನ್ನು ವೀರಶೈವ ಎಂದು ತಿರುಚಿ ಮೂಢನಂಬಿಕೆಗಳಿಂದ ಜನರನ್ನು ಹೆದರಿಸಿ ಷೋಢಷೋಪಚಾರಗಳಿಂದ ಇಂದಿಗೂ ಊಟಕ್ಕಾಗಿ ತಿರುಪೆ ಎತ್ತುವದಕ್ಕೆ ದಂಧೆಯನ್ನಾಗಿಸಿರುವದನ್ನು ಗಮನಿಸಬಹುದು.
🙏🙏
ಲಿಂಗಾಯತ ಧರ್ಮ ಸಂಸ್ಥಾಪಕರು ಗುರು ಬಸವಣ್ಣನವರು ನೀವು ಎಷ್ಟೇ ಕೂಗಿ ಕೂಗಿ ಹೇಳಿದರೂ ಜನ ನಿಮ್ಮ ಮಾತು ಕೇಳುವುದಿಲ್ಲ ಯಾಕೆ ಅಂದರೆ ಅಜ್ಞಾನದಿಂದ ಸುಜ್ಞಾನ ಕಡೆ ಜನ ಬರತಾ ಇದ್ದಾರೆ ಇತಿಹಾಸ ಏನು ಅಂತ ಗೊತ್ತಾಗತಾ ಇದೆ
ವೀರಶೈವವೆಂದರೆ ಸೂಚಿಸುವಂತೆ ಪೌರಾಣಿಕ ಶಿವನೇ ಇಲ್ಲಿ ಮುಖ್ಯವಾಗಿ ಧಾರ್ಮಿಕ ನಾಯಕನಾಗುತ್ತಾನೆ ಲಿಂಗಾಯತ ವೆಂದರೆ ಸೃಷ್ಟಿಕರ್ತನಾದ ಪರಮಾತ್ಮನೇ ನಮ್ಮ ಆರಾಧ್ಯ ದೇವನಾಗಿದ್ದಾನೆ ವ್ಯಕ್ತಿಗಿಂತಲೂ ಸೃಷ್ಟಿ ಹಾಗೂ ಸೃಷ್ಟಿಕ್ರಿಯೆ ದೊಡ್ಡದು ಎಂಬುದನ್ನು ಬಸವದಿ ಪ್ರಮಥರು ಸಿದ್ದ ಮಾಡಿದ್ದಾರೆ ಪೌರಾಣಿಕ ಶಿವನೇಗಿಂತಲೂ ಸೃಷ್ಟಿಕರ್ತನು ದೊಡ್ಡವನು ಎಂಬುದನ್ನು ಬಸವಾದಿ ಪರಮಥರು ನಿರೂಪಿಸಿ ಸೃಷ್ಟಿಗೆ ಹಲವಾರು ನಾಮಗಳನ್ನು ಇಟ್ಟಿದ್ದಾರೆ ಆದುದರಿಂದ ವೀರಶೈವ ಕಿಂತಲೂ ಲಿಂಗಾಯಿತವೇ ಪ್ರಮುಖವೆಂದು ಜನಗಳು ತಿಳಿಯಬೇಕಿದೆ ಲಿಂಗಾಯತ ಯಾವುದೇ ಸಕಾರ ವ್ಯಕ್ತಿಯನ್ನು ನಿರೂಪಿಸದೆ ನೇರವಾಗಿ ಲಿಂಗವನ್ನೇ ಕುರಿತು ಹೇಳುತ್ತದೆ ಆದುದರಿಂದ ಲಿಂಗವನ್ನೇ ಅರಿಯಬೇಕು ಲಿಂಗವನ್ನೇ ಪ್ರಾರ್ಥಿಸಬೇಕು
ಇಂತವರಿಗೆ ಏನು ಹೇಳುವುದು, ಇವರೆಲ್ಲ ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲ ಮಾಡುತ್ತಾರೆ ನೋಡಿ 👆
ಸಾಂಸ್ಕೃತಿಕ ನಾಯಕ ಗುರು ಬಸವಣ್ಣನವರು ಅಂತಾ ಸರ್ಕಾರ ಘೋಷಣೆ ಮಾಡಿ ಆಯ್ತು,
ಥೇಮ್ಸ್ ನದಿಯ ದಡದಲ್ಲಿ ಬಸವಣ್ಣನವರು ವಿರಾಜಮಾನರಾಗಿ ಕುಳಿತರು.
ಇದೆಲ್ಲಾ ನೋಡಿದ ಪಂಚಪೀಠದವರಿಗೆ ತುಂಬಾ ಅಸಮಾಧಾನವಾಗಿ ನಿದ್ದೆಯೇ ಬರುತ್ತಿಲ್ಲ ಅಂತಾ ಕಾಣುತ್ತಿದೆ.
ಇದರ ಮೇಲೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಬಿಟ್ಟರೆ ಏನು ಮಾಡುವುದು ಎಂದು ಕಳವಳಗೊಂಡಿದ್ದಾರೆ.
ಹಾಗಾಗಿ ಏನು ಮಾತನಾಡಬೇಕೆಂದು ತಿಳಿಯದೆ ಏನೇನೋ ಮಾತನಾಡುತ್ತಿದ್ದಾರೆ.
ಬೆರಳೆಣಿಕೆಯಷ್ಟು ಜನ ವೀರಶೈವ ಬೇರೆ ಲಿಂಗಾಯತ ಬೇರೆ ಅಂತಾ ಹೇಳುತ್ತಿಲ್ಲ ನೂರಕ್ಕೆ ತೊಂಬತ್ತರೊಂಬತ್ತರಷ್ಜುಜನ
ಈ ಸತ್ಯವನ್ನು ಹೇಳುತ್ತಿದ್ದಾರೆ.
ಇವರ ಬಗ್ಗೆ ಮಾತನಾಡುವುದೇ ಶಕ್ತಿಯ ಅಪವ್ಯಯ. ಜಾತಿಯನ್ನೇ ನಂಬಿ ಬದುಕುತ್ತಿರುವ ಇವರು ಬಸವಣ್ಣ ನಾವರನ್ನು ಅರಿಯಲು ಹೇಗೆ ಸಾಧ್ಯ.
ಸ್ವಾಮಿಗಳೇ ನಿಮ್ಮದು ಹಿಂದೂ ಧರ್ಮವಾಗಿ
ದ್ದರೆ ಮೂರು ಸಲ ನಮಗೆ ಸ್ವತಂತ್ರ ಧರ್ಮ ಕೊಡಿ ಎಂದು ಕೇಳಿದ್ದೇಕೆ ? ಆಗಲೇ ಹಿಂದೂ ಧರ್ಮ ಆಗಿತ್ತಲ್ಲ.ಇಂತಹ ಎಷ್ಟೋ ವೈರುಧ್ಧಗಳನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಇವರು ಜನರನ್ನು ಹೇಗೆ ಉದ್ಧರಿಸಬಲ್ಲರು.?
ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರಾಧ್ಯಕ್ಷ
ಶ್ರೀ ಶಾಮನೂರು ಶಿವಶಂಕರಪ್ಪ ನವರು ನಾವು ಹಿಂದುಗಳಲ್ಲ ಎಂದು ಹೇಳುತ್ತಾರೆ,ಇವರು ಹಿಂದೂಗಳೆಂದು ಹೇಳುತ್ತಾರೆ, ಎನಿವರ ಸುಳ್ಳಿನ ದ್ವಂದ್ವದ ಮಾತುಗಳು.ಜನರನ್ನು ದಿಕ್ಕು ತಪ್ಪಿಸುತ್ತಾ ಇರುವದು ಇವರ ಮೂಲಗುಣ. ನಿಮಗೆ ತಾಕತ್ತು ಇದ್ದರೆ ಶಾಮನೋರರ ಹೇಳಿಕೆಯನ್ನು ವಿರೋಧಿಸಿ ಹೇಳಿಕೆ ಕೊಡಿ. ದಾವಣಗೆರೆಯ ವೀರಶೈವ ಮಹಾಸಭೆಯ ಲ್ಲಿಯೇ ನಾವು ಹಿಂದೂಗಳ ಅಲ್ಲ ಎನ್ನುವ ನಿರ್ಣಯ ಕೈಗೊಂಡಿದೆ.ಅವಾಗ ಶ್ರೀಜೈಲ,ಉಜ್ಜೈನಿ ಸ್ವಾಮಿಗಳು ಹಾಜರಿದ್ದರು. ಅವಾಗ ಏನು ಮಾಡುತ್ತಿದ್ದರು?ಉತ್ತರಿಸಿ ಸ್ವಾಮಿಗಳೇ.
ಲಿಂಗಾಯತ ಧರ್ಮ ಸಮಾನತೆ ಸಾರುವ ಸಲುವಾಗಿ ಹುಟ್ಟಿದೆ.
ವೀರಶೈವದ ಪ್ರಮುಖ ಲಕ್ಷಣ ಅಸಮಾನತೆ. ನಾನು ಶ್ರೇಷ್ಠ, ನೀನು ಕನಿಷ್ಠ ಅನ್ನುವುದು ಅಲ್ಲದೆ, ಅವರಲ್ಲಿಯೆ ಸ್ತ್ರೀ ಪುರುಷ ಬೇದ ಭಾವ ಇದೆ. ಪುರುಷರಿಗೆ ಅಯ್ಯಚಾರ ಇದ್ದರೆ, ಸ್ತ್ರೀ ಯಾರಿಗೆ ಇಲ್ಲ.
ಅಯ್ಯಚಾರ ಮಾಡಿಸಿಕೊಂಡವರು ವೀರಶೈವರು, ನಿಮ್ಮದು ಅಯ್ಯಚಾರ ಆಗಿದೆಯೆ?
ಭಾರತೀಯರಲ್ಲಿ ಅತಿ ಕಡು ಬಡವರಾದ ಬೇಡ ಜಂಗಮರ ಮೀಸಲಾತಿ ಕಸಿದು ಕೊಂಡು ತಿನ್ನಲು ಬೆನ್ನು ಹತ್ತಿದವರು, ಇದೆ ಪಂಚ ಪೀಠಾಧೀಶರು, ವೀರಶೈವರು. ಮೀಸಲಾತಿಗಾಗಿ ಯಾವುದಕ್ಕೂ ಹೇಸದ ಇವರು, ತಮಗೆ ಸಿಗುವ ಬಿಕ್ಷೆಗೆ ಕಲ್ಲು ಬಿದ್ದಿತು ಅಂತ ಧರ್ಮ ಒಡೆಯುತ್ತೀರಿ ಅಂತ ಹೇಳುತ್ತಾರೆ.
ಇವರು ಲಿಂಗಾಯತರು ಅಲ್ಲವೇ ಅಲ್ಲ. ಅಯ್ಯಚಾರ ಇರುವ ಇವರ ಧರ್ಮವೇ ಬೇರೆ. ಲಿಂಗಾಯತರ ಧರ್ಮವೇ ಬೇರೆ.
ಕರ್ಕಲಕ್ರ್ಳಲಕ್ಲಉತ್ಕ್ತ್ತ ಬರೆ.
ನಮ್ಮ ಜನ, ಮನ ಮತ್ತು ಮನೆಗಳಲ್ಲಿ ಬಸವ ತತ್ವಚಾರಣೆಯ ಅಗತ್ಯವಿದೆ. ಬರಿ ಬಾಯಿಂದ, ಬರವಣಿಗೆಯಿಂದ, ಸುದ್ದಿ ಮಾಧ್ಯಮಗಳಿಂದ ಮಾತ್ರ ಧಾರ್ಮಿಕ ಉನ್ನತಿ ಸಾಧ್ಯವಿಲ್ಲ.
ವಿಶೇಷವಾಗಿ ನಮ್ಮ ಯುವ ಪೀಳಿಗೆಗೆ ನಮ್ಮ ತತ್ವ, ಆಚರಣೆಗಳ ಬಗ್ಗೆ ತಿಳಿಸುವ ಅಗತ್ಯವಿದೆ.
ಈ ಸಂಸ್ಕಾರ ಪ್ರತಿ ಮನೆಯಿಂದ ಆಗಬೇಕು.
ಮನೆಗೆ ಬಸವತತ್ವ ಮುಟ್ಟಿಲ್ಲ, ಅಂದಮೇಲೆ ಮಗುವಿಗೆ ಮುಟ್ಟಲು ಸಾಧ್ಯವೇ? ಈ ಕಾರ್ಯ ಪ್ರತಿಯೊಬ್ಬ ಸ್ವಾಮೀಜಿಗಳು, ಬುದ್ದಿ ಜೀವಿಗಳು ಮಾಡಬೇಕು.
ಅನೇಕರು ಬಾಯಿಲೇ ಮಾತ್ರ ಬಸವತತ್ವ ಹೇಳುತ್ತಾರೆ ಹೊರತು ಅವರ ಕೊರಳಲ್ಲಿ ಲಿಂಗವಿಲ್ಲ ರುದ್ರಾಕ್ಷಿ ಇಲ್ಲಾ. ವಿರೋಧಿಗಳು ಹೇಳುತ್ತಿರುವಂತೆ ಬರಿ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮಾತ್ರ ಸಭೆ, ಸಮಾರಂಭ ಹಾಗು ಸುದ್ದಿ ಮಧ್ಯಮದಲ್ಲಿ ಮಾತ್ರ ಮಾತನಾಡುತ್ತಿದ್ದಾರೆ ಎಂದೆನಿಸುತ್ತದೆ.
ದಯಮಾಡಿ ಈ ಕುರಿತು ವಿಚಾರಿಸುವ ಅಗತ್ಯವಿದೆ.
ಮೊದಲು ಭಕ್ತರ ಹೆಗಲ ಮೇಲೆ, ತಲೆ ಮೇಲೆ ಕಾಲಿಡುವುದನ್ನು ನಿಲ್ಲಿಸಿ ಅಸಮಾತೆಯನ್ನ ಹೋಗಲಾಡಿಸಲಿ ಈ ಗೋಮುಖವ್ಯಾಘ್ರ ಪಂಚಪೀಠಾಧೀಶರು.
ಗುರು ಬಸವಣ್ಣನವರಿಂದ ಸ್ಥಾಪಿತವಾದ ಲಿಂಗ +ಆಯಾತ ಲಿಂಗಾಯತ ಧರ್ಮ ಇದು ಎಲ್ಲಾ ಜಾತಿಯವರಿಗೆ ಧಾರ್ಮಿಕ ಹಕ್ಕನ್ನು ಕೊಟ್ಟ ಧರ್ಮ.
ಯಾರು ಬೇಕಾದರೂ ದೇವರನ್ನು ಪೂಜಿಸುವ ಹಕ್ಕು. ಕೊಟ್ಟ ಬಸವಣ್ಣನವರಿಗೆ ಗಡಿಪಾರು ಏಕೆ ಆಯಿತು, ಹರಳಯ್ಯ ಮಧುವಯ್ಯ, ಶೀಲವಂತರಿಗೆ ಎಳೆ ಹೂಟೆ, ಕಣ್ಣು ಕೀಳಿಸುವ ಶಿಕ್ಷೆ ಇದೆಲ್ಲಾ ಗುರು ಬಸವಣ್ಣನವರ ಸಂತತಿಗಳಿಗೆ ಮಾತ್ರ ತಿಳಿಯುತ್ತದೆ.
ಇದಕ್ಕೆ ಯಾರಾದರೂ ಸರಿಯಾಗಿ ಉತ್ತರ ಕೊಡಬೇಕು
ಈ ಕೆಳಗಿನ ವಚನದಲ್ಲಿ 12 ನೇ ಶತಮಾನದಲ್ಲಿಯೇ ಚೆನ್ನಬಸವಸವಣ್ಣನವರು ಉತ್ತರವಾಗಿ ವಿವರಿಸಿದ್ದಾರೆ…… ನೋಡಿ
🌹🌹
ಅನಂತ ವರುಷದವರ ಹಿರಿಯರೆಂಬೆನೆ ? ಎನ್ನೆನು_ ಅವರು ಭೂಭಾರಕರಾಗಿ. ಏಳು ವರುಷದ ಹಿರಿಯ ಚೀಲಾಳ; ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ. ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು. ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ, ಕೂಡಲಚೆನ್ನಸಂಗಮದೇವಾ.
✍️……ಚೆನ್ನಬಸವಣ್ಣನವರು