ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವ ಮಂಟಪದ ಛಾಯಾಚಿತ್ರವನ್ನು ವಿಧಾನ ಪರಿಷತ್ ಶಾಸಕರಿಗೆ ವಿತರಣೆ ಮಾಡುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದರು.
ಸಾಂಸ್ಕೃತಿಕ ನಾಯಕ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಛಾಯಾಚಿತ್ರವನ್ನು ಸಾಂಕೇತಿಕವಾಗಿ ಕೆಲವು ಶಾಸಕರಿಗೆ ನೀಡಲಾಗಿದೆ, ಬರುವ ದಿನಗಳಲ್ಲಿ ಅದನ್ನು ಎಲ್ಲ ಶಾಸಕರಿಗೆ ವಿತರಣೆ
ಮಾಡಲಾಗುವುದು ಎಂದರು.
ನಗರದ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮೌಡ್ಯ ವ್ಯವಸ್ಥೆಗಳ ವಿರುದ್ಧ ಹಾಗೂ ಸಮಾಜದ ಒಳಿತಿಗಾಗಿ ಸ್ಥಾಪನೆಯಾದ ಅನುಭವ ಮಂಟಪ ಒಂದು ಸಾಮಾಜಿಕ ಕ್ರಾಂತಿ ಎಂದು ಹೇಳಿದರು.
ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ಕನಸು ಕಂಡ ಮಹಾನ್ ನಾಯಕ ಬಸವಣ್ಣನವರಿಗೆ ಗೌರವ ಸಲ್ಲಿಸುವ ಛಾಯಾಚಿತ್ರವನ್ನು…