ಬನಹಟ್ಟಿ
ಲಿಂಗಾಯತರು ಹಿಂದೂಗಳು ಎಂದು ವಾದಿಸುತ್ತಾ ವಿಭೂತಿ ಬದಲು ಕುಂಕುಮ ಹಾಕುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಕನ್ನೇರಿ ಸ್ವಾಮಿಯನ್ನು ಬಹಿರಂಗ ಚರ್ಚೆಗೆ ಬರಲು ಅನೇಕ ಲಿಂಗಾಯತ ಪೂಜ್ಯರು, ಚಿಂತಕರು ಕರೆದಿದ್ದಾರೆ.
ಅಂತವರನ್ನು “ಶಿಖಂಡಿ”, “ನಾಯಿಗಳು” ಎಂದು ಕರೆದು ಅವರೊಡನೆ ಚರ್ಚೆ ಮಾಡಲು ಕನ್ನೇರಿ ಸ್ವಾಮಿ ಹಿಂಜರಿದಿದ್ದಾರೆ.
ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರು ತಾವು ಮೊದಲು ಹಿಂದೂಗಳೆಂದು ಒಪ್ಪಿಕೊಂಡರೆ ಹಿಂದೂ ಸಮಾವೇಶಗಳನ್ನು ನಿಲ್ಲಿಸುವುದಾಗಿ ಹೇಳಿದರು.
ಆದರೆ ಇದಕ್ಕೆ ಪ್ರತಿಯಾಗಿ ತಮ್ಮ ಜೊತೆ ಚರ್ಚೆ ಮಾಡಲು ಕೆಲವು “ನಾಯಿಗಳನ್ನು ಛೂ ಬಿಟ್ಟಿದ್ದಾರೆ” ಎಂದು ಕನ್ನೇರಿ ಸ್ವಾಮಿ ಆಪಾದಿಸಿದರು.
ನಮ್ಮ ಕೂಡ ಯುದ್ಧ ಮಾಡಬೇಕಾದರೆ ಸಮಾನ ಯೋಗ್ಯತೆಯವರು ಬೇಕು. ಇದೇ ಕಾರಣಕ್ಕೆ ಭೀಷ್ಮ “ಶಿಖಂಡಿ” ವಿರುದ್ಧ ಯುದ್ಧ ಮಾಡಲಿಲ್ಲ, ಎಂದು ಹೇಳಿದರು.
“ಹಳೆ ನಾಯ್ಗಳು ರಗಡ್ ಬರ್ತಾವೆ. ನಾಯ್ಗಳು ಬೊಗಳಿದ್ರೆ ಗುಡ್ಡಕೇನು ಫರಕ ಆಗೂದೈತಿ, ನಾಯಿಗಳೇ ದಣಿತಾವು,” ಎಂದು ಹೇಳಿದರು.
“ನಾನು ಅವಕ್ಕ ಉತ್ತರ ಕೊಡೋದಿಲ್ಲ ಝಾಡಿಸಿ ಒಂದು ಒಗದೀರ್ತೀನಿ, ಮುಂದೆ ಒಂದು ತಿಂಗಳು ಅವು ವದರಾಡ್ತವ. ನಾನು ಮತ್ತೆ ಝಾಡಿಸಿ ಒಂದು ಒಗದೀರ್ತೀನಿ, ಹಂದಿಗಳು ಜೋರು ಒದರಾಕ ಹತ್ಯಾವು ಅಂತಂದ್ರ ಅವಕ್ಕ ಹೊಡೆತ ಬೇಶ್ ಬಿದ್ದಾವು ಅಂತ ತಿಳ್ಕೊಬೇಕು,” ಎಂದು ಹೇಳಿದರು.

ಬಾಯಿತ
ಪೂರ್ವಾಶ್ರಮದಲ್ಲಿ ಮಠದ ವಾಹನ ಚಾಲಕನಾಗಿದ್ದವನಿಗೆ ರಬ್ಬರ್ ಬಾಲ್ ಹಾರನ್ ಅಮುಕೀ ಅಮುಕೀ ರೂಢಿ… ಅಂತೆಯೇ ಈತನ ಹಿಂದುತ್ವ ರಾಡಿ… ರಾಡಿ…! ಕೊಲೆ ಪ್ರಕರಣದಲ್ಲಿ ತಗಲಾಕಿಕೊಂಡು ಊರುವರಿಂದ ಒದೆ ತಿಂದವನ ಒಣ ಹಾರಾಟ ಇದು ಅಷ್ಟೇ!
Please discuss this issue in front of all lingyath community people.then only it is solve.please ask this swmiji to why he is given this statement. 1.call open meeting without politics.all leaders village peoples in nearest place.2 Orange food and water other facility to people for particular meeting.3 .collect community people opinion. 4 discuss
particular point then only good result will come.it is healthy for our community.
ಈ ಕನ್ನೇರಿ ಕುನ್ನಿ ಲಿಂಗಾಯತ ಸ್ವಾಮಿಜೀಗಳ ಬಗ್ಗೆ ಹಂದಿಯಂತೆ ಮಾತನಾಡಿ ಚಟ ತಿರಿಸಿಕೊಳ್ಳತಾನ ಜನಸಾಮನ್ಯ ಬಸವ ಧರ್ಮಿಯರಾದ ಲಿಂಗಾಯತರ ಬಗ್ಗೆ ಮಾತನಾಡಿದರೇ ಅವನಿಗೆ ತಕ್ಕ ಶಾಸ್ತಿ ಮಾಡೋದು ಖಂಡಿತಾ !
ಈತ ಸ್ವಾಮಿಯೋ ಅಥವಾ ಸ್ವಾಮಿಯ ರೂಪದಲ್ಲಿ ಇರುವ ಅಯೋಗ್ಯ ಮನುಷ್ಯನೋ. ಕಾವಿ ಧರಿಸಿದರೆ ಮುಗಿಯಿತು, ಸರ್ವಸಂಗ ಪರಿತ್ಯಾಗಿ, ಸದಾ ದೇವರ ಧ್ಯಾನ, ಜೀವಸಂಕುಲದ ಒಳಿತಿಗಾಗಿ ಸಮರ್ಪಣೆ ಇರಬೇಕು. ಆದರೆ ಈತ ಹೇಳಿದ ಮೂರು ಪದಗಳು ಇವನಿಗೆ ತಿರುಗೇಟು ಆಗಿದೆ. ಶಿಖಂಡಿ: ಮಹಾಭಾರತದಲ್ಲಿ ಒಂದು ಪಾತ್ರ. ನಾಯಿ: ದತ್ತಾತ್ರೇಯನ ಪರಮಾಪ್ತ ಹಾಗೂ ನಿಯತ್ತಿಗೆ ರಾಯಭಾರಿ, ಇನ್ನು ಹಂದಿ: ವರಾಹ ಸ್ವಾಮಿ ಮುಖ. ಇನ್ನೆಂತಹ ಸ್ವಾಮಿ. ಪುಢಾರಿ ಆಗಿ ವಿಧಾನಸೌಧದ ಮುಂಭಾಗದಲ್ಲಿ ಏಜೆಂಟ್ ಆಗಲು ಲಾಯಕ್ ಅಷ್ಟೇ
ಸತ್ಯಮೇವ ಜಯತೆ
12ನೇ ಶರಣರನ್ನು ಹೀಗೆ ಕಾಡಿದವರು 21 ನೇ ಶತಮಾನದಲ್ಲಿ ಅದನ್ನೇ ಮುಂದುವರೆಸಿದ್ದಾರೆ ಅದಕ್ಕೆ ಇಂತವರನ್ನು ಬಳಸಿಕೊಂಡಿದ್ದಾರೆ ಇಂತಹ ಮೂರ್ಖತನವನ್ನು ಮಾಡುವ ಸ್ವಾಮಿಗಳು ಅರ್ಥ ಮಾಡಿಕೊಳ್ಳಬೇಕು ಯಾವುದೋ ಆಸೆಗಾಗಿ ಬಸವಾದಿ ಶರಣರಿಗೆ ವಚನ ಸಾಹಿತ್ಯದ ಆಶಯಕ್ಕೆ ಧಕ್ಕೆ ತರಬಾರದು ಎಂಬುದನ್ನು
ಕೀಳು ಮಟ್ಟದ ಪದ ಪ್ರಯೋಗವು ಅವರ ಸಂಸ್ಕಾರವನ್ನು ತೋರಿಸುತ್ತದೆ.ಮತ್ತು ಬೇರೆಯವರಿಗೆ ಒಂದು ಬೆರಳು ತೋರಿಸಿ ಅವರ ತಪ್ಪನ್ನು ಹೇಳಲು ಹೋದರೆ ಅದಕ್ಕೆ ಹಲವು ಪಟ್ಟು ನಮ್ಮ ತಪ್ಪನ್ನೇ ಇನ್ನುಳಿದ ಬೆರಳುಗಳು ತೋರಿಸುವಂತೆ ಹಾಗಾಗಿದೆ ಈ ಕುಂಕುಮ-ಖಾವಿ ಧಾರಿಯ ಪರಿಸ್ಥಿತಿ. ಶರಣರ ವಚನ ಸಾಹಿತ್ಯ ಕೇವಲ ಒಂದು ಸಾಹಿತ್ಯ ಅಷ್ಟೇ ಅಲ್ಲ ನುಡಿದಂತೆ ನಡೆದ ಅನುಭಾವದ ಸಾಹಿತ್ಯ ಅದನ್ನು ಅರ್ಥ ಮಾಡಿಕೊಳ್ಳದೇ,ಚರ್ಚೆಗೂ ಸಿದ್ಧವಾಗದೆ ಹೀಗೆ ಅರ್ಥವಿಲ್ಲದೇ ವಡ-ವಡ ವದರಿದರೇನು ಪ್ರಯೋಜನ ಅಲ್ಲವೇ?
. ✍️ಹೂಬನ ಹೊನ್ನಳ್ಳಿ
ಒಟ್ಟಿನಲ್ಲಿ ಸಮಾಜದ ಸ್ವಾಸ್ತ್ಯ ಹಾಳುಮಾಡಿ ಕೊಂಡಿಮಂಚಣ್ಣನಂತೆ ಅಶಾಂತಿ ಮೂಡಿಸುವದೇ ಇವರ ಉದ್ದೇಶ. ಜನರು ಅರ್ಥಮಾಡಿಕೊಂಡರೆ ಒಳ್ಳೆಯದು. ಅನೇಕ ಲಿಂಗಾಯತ ಪೂಜ್ಯರು ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ಹೇಳಿಕೆ ನೀಡದೆ ಈ ಸ್ವಾಮಿಯನ್ನು ಓಪನ್ ಚರ್ಚೆಗೆ ಕರೆದರೂ ಏನೇನೋ ಮಾತನಾಡುವದು ಎಷ್ಟು ಸರಿ. ಹಗ್ಗ ಹರಿಬಾರ್ದು ಕೋಲು ಮುರಿಬಾರ್ದು.