ಹರಿಹರ
ಹರಿಹರ ಪಂಚಮಸಾಲಿ ಪೀಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿಕೊಂಡ ಅನುಮಾನವಿದೆ ಎಂದು ಲಿಂಗಾಯತ ಪಂಚಮಸಾಲಿ ಗುರುಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ. ರಾಜಕುಮಾರ್ ಆರೋಪಿಸಿದ್ದಾರೆ.
ನಗರದ ಶಿವಮೊಗ್ಗ ರಸ್ತೆಯ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡ ಅನುಮಾನವಿದೆ. ಇವರಿಗೆ ಲೆಕ್ಕಪತ್ರ ಕೇಳಿದಾಗಲೆಲ್ಲ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಾರೆ’ ಎಂದು ಗುರುವಾರ ಸುದ್ದಿಗೋಷ್ಠಿ ಯಲ್ಲಿ ಆರೋಪಿಸಿದರು.
ಈ ಮೂವರು ಪ್ರಭಾವಿ ಟ್ರಸ್ಟಿಗಳು ಮಾರ್ಚ್ 26ರೊಳಗೆ ವಚನಾನಂದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ನಿರ್ಧಾರ ಮಾಡಿದ್ದಾರೆ. ನನಗೆ ಹಾಗೂ ಶ್ರೀಗಳ ಜೀವಕ್ಕೆ ತೊಂದರೆಯಾದರೆ ಈ ಮೂವರೇ ಕಾರಣ ಎಂದು ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ್ ಹೇಳಿದರು.
ಶ್ರೀಗಳ ಪೀಠ ತ್ಯಾಗದ ಪ್ರಕ್ರಿಯೆ ನಡೆಸಿದರೆ ಈ ಮೂವರ ವಿರುದ್ಧ ಸಮುದಾಯದ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.
ಹಣ ದುರುಪಯೋಗ ಆರೋಪ
ಮಠಕ್ಕೆ ಸರ್ಕಾರ, ರಾಜಕಾರಣಿಗಳು ಹಾಗೂ ಭಕ್ತರಿಂದ ನೂರಾರು ಕೋಟಿ ರು. ಹರಿದುಬಂದಿದೆ. ಅದರಲ್ಲಿ ಸುಮಾರು 15 ಕೋಟಿ ಅವ್ಯವಹಾರ ಆಗಿದೆ. ಆದ್ದರಿಂದ ಲೆಕ್ಕ ಕೊಡಿ ಚಳವಳಿ ಆರಂಭಿಸಲಿದ್ದೇವೆ. ಲೆಕ್ಕ ಕೊಡುವವರೆಗೆ ನಮ್ಮ ಚಳವಳಿ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
‘ಮಠದ ಹೆಸರಲ್ಲಿ 4 ಬ್ಯಾಂಕ್ ಖಾತೆಗಳ ಬದಲಿಗೆ, 14 ಖಾತೆಗಳಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಖಾತೆ ನಿರ್ವಹಣೆಗೆ ಬಿ.ಸಿ.ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಅವರ ಸಹಿಯೊಂದಿಗೆ ಆಡಳಿತಾಧಿಕಾರಿ ಸಹಿ ಸೇರಿಸಿ ಎಂದರೂ ಸೇರಿಸಿಲ್ಲ’ ಎಂದರು.
ಗುರುಪೀಠಕ್ಕೆ ಮಾಜಿ ಸಚಿವ ಕರುಣಾಕರ ರೆಡ್ಡಿ, ದಿ.ಶಾಮನೂರು ಶಿವಶಂಕರಪ್ಪ, ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ದೇಣಿಗೆ ನೀಡಿದ್ದಾರೆ. ಮಠದ ಸಮೀಪದಲ್ಲಿ 4 ಎಕರೆ ಜಮೀನು ಖರೀದಿಗೆ ಹರಿಹರ, ರಾಣೆಬೆನ್ನೂರು, ಸಮುದಾಯದ ಜನರ ನೆರವಿದೆ. ಸರ್ಕಾರದ ಅನುದಾನ, ಭಕ್ತರ ದೇಣಿಗೆಯ ಲೆಕ್ಕ ಕೊಡಬೇಕಿದೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ಸೋಮಣ್ಣ ಬೇವಿನಮರದ ‘ಗುರುಪೀಠದ ಆವರಣದ ಕಟ್ಟಡದ ನಿರ್ಮಾಣಕ್ಕಾಗಿ ನಾನು ವೈಯಕ್ತಿಕವಾಗಿ ₹ 15 ಲಕ್ಷ ಮೊತ್ತದ ದೇಣಿಗೆ ಚೆಕ್ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರಿಗೆ ನೀಡಿದ್ದೇನೆ. ಈವರೆಗೂ ರಶೀದಿ ನೀಡಿಲ್ಲ. ಗುರುಪೀಠದ ಇತರ ಆಸ್ತಿಗಳ ರಕ್ಷಣೆಗೆ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗೊಂದಲ
ಸುದ್ದಿಗೋಷ್ಠಿ ನಡೆಯುವಾಗಲೇ ಸಮುದಾಯದ ಮುಖಂಡ, ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಎಂಬವರು ಏರುಧ್ವನಿಯಲ್ಲಿ ಮಾತನಾಡಿ, ಸೋಮಣ್ಣ ಬೇವಿನಮರದ ಅವರು ಶಿಗ್ಗಾವಿಯಲ್ಲಿನ ಗುರುಪೀಠಕ್ಕೆ ಸೇರಿದ 2 ಎಕರೆ ಜಮೀನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದರು. ಕೆಲಕಾಲ ಗೊಂದಲ ಸೃಷ್ಟಿಯಾದಾಗ ಪೊಲೀಸರು ಅವರನ್ನು ಹೊರಕ್ಕೆ ಕಳಿಸಿದರು.
ಮತ್ತೊಂದು ಸುದ್ದಿಗೋಷ್ಠಿ
ಹೊನ್ನಾಳಿಯ ಪ್ರಶಾಂತ್ ಪ್ಯಾಟಿ, ಶಶಿಧರ ಗೌಡ, ಹಾಲೇಶ, ಚಂದ್ರ ಪಾಟೀಲ್, ರಾಜುಗೌಡ ಎಂಬವರು ಗುರುಪೀಠದ ಆವರಣದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ, ಎರಡೂ ಗುಂಪುಗಳು ಸಮನ್ವಯದಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಹಾದಿ, ಬೀದಿ ರಂಪಾಟ ಮಾಡಬಾರದೆಂದು ಆಗ್ರಹಿಸಿದರು.
ವಿವಾದದ ಹಿನ್ನಲೆ
ಮಾರ್ಚ್ 10 ವಚನಾನಂದ ಸ್ವಾಮೀಜಿ ಸಮ್ಮುಖದಲ್ಲೇ ನಡೆದ ಸಭೆಯಲ್ಲಿ
ಲೆಕ್ಕಪತ್ರ ವಿಚಾರವಾಗಿ ಟ್ರಸ್ಟಿಗಳ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ, ನೂಕಾಟ– ತಳ್ಳಾಟ ನಡೆದಿದೆ.
‘ನಮ್ಮ ಮೇಲೆ ಹಲ್ಲೆ ನಡೆಸಿ, ಸಾಕ್ಷ್ಯ ನಾಶ ಮಾಡಲಾಗಿದೆ’ ಎಂದು ರಾಜಕುಮಾರ್ ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಎರಡು ಪೀಠದ ನಿರ್ವಹಣೆ ಬೇಡ
ಸಭೆಯ ಆರಂಭದಲ್ಲಿ ಪೀಠದ ಸಂಸ್ಥಾಪಕ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು, ‘8 ವರ್ಷಗಳ ಹಿಂದೆ ಪೀಠಾರೋಹಣದ ಸಮಯದಲ್ಲಿ ನಡೆದ ಒಪ್ಪಂದದಂತೆ ವಚನಾನಂದ ಶ್ರೀಗಳು ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಎರಡೂ ಪೀಠಗಳ ನಿರ್ವಹಣೆ ಮಾಡುವುದು ಬೇಡ. ಎರಡರಲ್ಲಿ ಒಂದು ಪೀಠದಲ್ಲಿರುವುದು ಸೂಕ್ತ’ ಎಂದು ಶ್ರೀಗಳಿಗೆ ಸಲಹೆ ನೀಡಿದರು.
ಆ ಸಮಯದಲ್ಲಿ ಆಡಳಿತಾಧಿಕಾರಿಯವರು ಹಳೆಯ ಲೆಕ್ಕಪತ್ರದ ವಿಷಯ ತೆಗೆದರು.
ಆಗ ಕೆಲ ಟ್ರಸ್ಟಿಗಳು ಮಧ್ಯ ಪ್ರವೇಶಿಸಿ, ‘ಈ ಹಿಂದೆ ನಡೆದ ಸಭೆಯಲ್ಲಿ ಹಳೆಯ ಲೆಕ್ಕಕ್ಕಾಗಿ ಆಂತರಿಕ ಸಮಿತಿಯನ್ನು ರಚಿಸುವುದು, ವರದಿ ನೀಡುವ ಕುರಿತು ನಿರ್ಣಯಿಸಲಾಗಿತ್ತು. ಆಂತರಿಕ ಸಮಿತಿ ವರದಿ ನೀಡಿದೆ. ಈಗ ಮತ್ತೇಕೆ ಹಳೆಯ ಲೆಕ್ಕಪತ್ರದ ವಿಷಯ?’ ಎಂದು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಭೆಯಲ್ಲಿ ಪ್ರಧಾನ ಟ್ರಸ್ಟಿ ಬಿ.ಸಿ.ಉಮಾಪತಿ, ಟ್ರಸ್ಟಿಯಾಗಿರುವ ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪಿ.ಡಿ.ಶಿರೂರು, ಮಹೇಶ್, ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ಪ್ರಕಾಶ್ ಪಾಟೀಲ್, ಮಲ್ಲಿಕಾರ್ಜುನ್ ಹಾವೇರಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಖಿಚಡಿ ಕೊಟ್ರೇಶ್ ಹಾಗೂ ಇತರರು ಇದ್ದರು.

Vachanaanand exposed himself by his rude behaviour with the then cm Yedeyurappa on the stage .He forgot all politeness with him and blamed .Such swamies serve as a tool in the hands of politicians . Swami was good when he taught Yoga in TV !
If people forgot to preach and practice the principles of Lingayat there is no honour left in chanting the names of 12th century saints of our state . Because of such swamijies some characterless, power hungry people become MLAs . All sorts of accusations were made against koodalsangam swami by a politician who owes his election to him .
ಸಂಮ್ ಸಾರಿ ಪೀಠ ಮಾಡಿ ಸಂನ್ಯಾಯ ಮಾಡಿ. ಸಂನ್ಯಾಸಿ ಸಂಸಾರ ಕೂಡಿ ಮಾಡುವ ಮಠ ಯಾವ ಸಾಧನೆಗೆ ಮಾಡುತ್ತಿರುವುದು ಗೊತ್ತಾಗುತ್ತಿಲ್ಲ. ದಯವಿಟ್ಟು ಧರ್ಮದ ಮಾರ್ಗದರ್ಶನ ಪಡೆದು ಪಂಚಾಯತ್ ಮಾಡಿ ಪೀಠದ ಮಾನ ಉಳಿಸಿ 👏🏻ಶರಣು ಲಿಂಗಾಯತ ಜನ ಜಾಗೃತಿ ಬದುಕು ಕಟ್ಟಿ ಮಾದರಿ ಆಗಿ 👏🏻👏🏻
ರೊಕ್ಕ ಎತ್ತಿ ಹಾಕುವ ಪೀಠಗಳು ಮೂಢಭಕ್ತರಿಂದ ಹಣ ಎತ್ತುವ ಪೀಠ ಗಳು ಹೆಚ್ಚು ಇವೆ ನಿಜವಾದ ಧರ್ಮ ಪೀಠ ಗಳು kadime
ರೊಕ್ಕ ಎತ್ತಿ ಹಾಕುವ ಪೀಠಗಳು ಮೂಢಭಕ್ತರಿಂದ ಹಣ ಎತ್ತುವ ಪೀಠ ಗಳು ಹೆಚ್ಚು ಇವೆ ನಿಜವಾದ ಧರ್ಮ ಪೀಠ ಗಳು ಕಡಿಮೆ