ಬಸವನಬಾಗೇವಾಡಿ :
ಪಟ್ಟಣದ ಕೊಡೆಕಲ್ ಬಸವೇಶ್ವರ ಜಾತ್ರಾ ಮಹೋತ್ಸವ ಬುಧವಾರ, ಗುರುವಾರ ಸಂಭ್ರಮದಿಂದ ನಡೆಯಿತು. ಬುಧವಾರ ರಾತ್ರಿ ದೇವಸ್ಥಾನದಲ್ಲಿ ದೇವರಿಗೆ ಗಂಧ ಏರಿಸುವ ಕಾರ್ಯಕ್ರಮ ಜರುಗಿತು. ಗುರುವಾರ ಬೆಳಗ್ಗೆ ಕೊಡೆಕಲ್ ಬಸವೇಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ನಂತರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳ ಮೂಲಕ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಪಲಕ್ಕಿ ಉತ್ಸವದಲ್ಲಿ ಈರಯ್ಯ ಕೊಡೆಕಲ್ಲಮಠ ಕಾಲ ಜ್ಞಾನ ವಚನ ಪಠಣ ಮಾಡಿದರು. ಸಾವಿತ್ರಿ ಅಗಸರ ಅವರು ಹಡದಿ ಸೇವೆ ಸಲ್ಲಿಸಿದರು.

ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಸಂಗಯ್ಯ ಕೊಡೆಕಲ್ಲಮಠ, ಸಂಗಯ್ಯ ನರಸಲಗಿಮಠ, ಚಂದ್ರಶೇಖರ ಮುರಾಳ, ಬಸವರಾಜ ಹಾರಿವಾಳ, ಪ್ರವೀಣ ಮುತ್ತಗಿ, ಸಂಗಮೇಶ ಮುರಾಳ, ಗಿರೀಶ ಹಾರಿವಾಳ, ಶಿವಲಿಂಗ ಹಾರಿವಾಳ, ಸದಪ್ಪ ಅರಕೇರಿ, ಸುರೇಶ ಹಾರಿವಾಳ, ಮುತ್ತು ಹಾರಿವಾಳ, ಶಂಕ್ರೆಪ್ಪ ಹಾರಿವಾಳ, ಮಂಜು ಹಾರಿವಾಳ, ಸಂಗಪ್ಪ ರಾಯಗೊಂಡ, ಶಿವರಾಯ ರಾಯಗೊಂಡ, ನಾಗಪ್ಪ ರಾಯಗೊಂಡ, ಶಿವು ಮುರಾಳ, ಸಂಗನಗೌಡ ಪಡಸಲಗಿ, ಲಲಿತಾ ಮುರಾಳ, ಆರತಿ ಹಾರಿವಾಳ, ಮಹಾದೇವಿ ಹಾರಿವಾಳ, ನಿರ್ಮಲಾ ಮುರಾಳ, ವಿಜಯಲಕ್ಷ್ಮೀ ಹಾರಿವಾಳ, ಬಸಮ್ಮ ಹಾರಿವಾಳ, ಲಲಿತಾ ಹಾರಿವಾಳ, ಇಂದುಮತಿ ಮಣ್ಣೂರ, ಪ್ರಭಾವತಿ ರಾಯಗೊಂಡ, ಗೀತಾ ನಾಶಿ, ಸಂಗಮ್ಮ ಕೊಡೆಕಲ್ಲಮಠ, ನೀಲಮ್ಮ ಬದ್ರಗೋಳ, ಸಣ್ಣಮ್ಮ ಕೊಡೆಕಲ್ಲಮಠ, ಗೀತಾ ಹಾರಿವಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
