ರಾಯಚೂರು
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಬಸವರಾಜ ಕುರುಗೋಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲವಾಗುತ್ತದೆಯೇ?
ಹೌದು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದರಿಂದ, ಯಾವುದೇ ಪಕ್ಷದ ವ್ಯಕ್ತಿ ಬಸವಪರನಾ ಅಥವಾ ಬಸವ ವಿರೋಧಿಯಾ ಎಂಬುದು ಅರ್ಥವಾಗುತ್ತದೆ. ಹಾಗಾಗಿ ಲಿಂಗಾಯತ ಧರ್ಮದ ಹೋರಾಟಕ್ಕೆ ಬಲ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ.
2) ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ, ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡುತ್ತಿದೆ. ಇದೇ ರೀತಿ ಬಸವ ಸಂಘಟನೆಗಳಿಗೂ ತರಬೇತಿ ನೀಡಬೇಕೆ?
ಹೌದು, ತರಬೇತಿಯ ಅವಶ್ಯಕತೆ ಇದೆ. ಬಸವ ಸಂಘಟನೆಯ ಯುವಕರು ತಮ್ಮದೇ ಜಾತಿ, ತಮ್ಮದೇ ಪಕ್ಷ, ತಮ್ಮದೇ ಸಂಬಂಧ ಹೀಗೆ ಮುಂದುವರಿಯುತ್ತಾರೆಯೆ ಹೊರತು ಬಸವತತ್ವ ಪ್ರಜ್ಞೆಯಿಂದಲ್ಲ. ಧರ್ಮ, ಜಾತಿಗಳನ್ನು ಹಿಂದೆ ಸರಿಸಿ, ಪಕ್ಷ ಅಥವಾ ವ್ಯಕ್ತಿ ಬಸವ ಪರವಾ ಅಥವಾ ವಿರೋಧವಾ ಎಂಬ ಪ್ರಜ್ಞೆಯ ಮೂಲಕ ಅವರಿಗೆ ತರಬೇತಿಯ ಅವಶ್ಯವಿದೆ. ಅಗತ್ಯವಿದ್ದರೆ ಎದ್ದೇಳು ಕರ್ನಾಟಕ ಮುಂತಾದ ಸಂಘಟನೆಗಳ ಜೊತೆಗೂಡುವ ಮೂಲಕ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಒಳ್ಳೆಯದು.
3) ಈ ನಿಟ್ಟಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?
ನನ್ನ ವಿಚಾರದಲ್ಲಿ ಬಸವಶಕ್ತಿ ಶಿಬಿರ ಅನ್ನುವ ಬದಲು ಬಸವಪ್ರಜ್ಞೆಯ ಶಿಬಿರ ಅನ್ನೋದು ಒಳ್ಳೆಯದು. ಸಮಾವೇಶಗಳನ್ನು ಕಡ್ಡಾಯ ಆಯೋಜಿಸುವುದು ಸರಿ, ಇದಕ್ಕೆ ಬಸವಪರ ಮಠಾಧೀಶರು ಕೈಜೋಡಿಸಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ತಮ್ಮ ತಮ್ಮ ಮಠಗಳಲ್ಲಿ ಯುವಕರಿಗೆ ಪ್ರಜ್ಞೆ ಮೂಡಿಸುವುದು ಸರಿ.
4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಆಸಕ್ತಿ ಇದೆ. ಯುವಕರನ್ನು ಶಿಬಿರಕ್ಕೆ ಸೇರಿಸುವ ಮೂಲಕ ಮತ್ತು ನಾವು ಶಿಬಿರದಲ್ಲಿ ಭಾಗವಹಿಸುವ ಮೂಲಕ ಜೊತೆಗೂಡುವೆವು.

ಬಸವ ಪಥ ಹಿಡಿದವಗೆ ಮತ ಆಗ ದಾರಿಗೆ ಬರರುವ ರು. ನಮ್ಮ ದಾರಿ ಹಿಡಿದು ಬಸವ ಧರ್ಮ ಧ್ವಜದ ಹಿಡಿಯುವ ಯಾರೇ ಇರಲಿ ಅವರಿಗೆ ನಾವು ಎತ್ತಿ ಹಿಡಿಯುವ ಕಾರ್ಯಕ್ರಮ ಹಾಕಿ. ಧನ್ಯವಾದಗಳು 👏🏻ಶರಣು 👏🏻🙏🏻