ನೆತ್ತಿಗೆ ಶರಣ ಬುತ್ತಿ ಉಣಬಡಿಸುತ್ತಿರುವ ಮಹಾಂತ ಬಸವಲಿಂಗ ಸ್ವಾಮಿಗಳು

ಗಂಗಾವತಿ:

ಗಂಗಾವತಿಯಲ್ಲಿ ಬಸವ ಜಯಂತಿ ಅಂಗವಾಗಿ 10 ದಿನಗಳ ಪ್ರವಚನ ನಡೆಯುತ್ತಿದೆ. ಹಾಸನ ಜಿಲ್ಲೆಯ ಮುಕ್ಕುಂದೂರು ವಿರಕ್ತಮಠ ಮಲ್ಲೆದೇವರಪುರದ ಪೂಜ್ಯ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ಪ್ರವಚನ ಮಾಡುತ್ತಿದ್ದಾರೆ.

ಎಷ್ಟೋ ವರ್ಷಗಳ ನಂತರ ಬಸವತತ್ವದ ವಿಚಾರಗಳು ಇಂದು ಮತ್ತೆ ಕೇಳಿದ ಖುಷಿ. ಒಂದು ಕಾಲವಿತ್ತು ಬಸವತತ್ವದ ಗಟ್ಟಿನೆಲ ಅಂದ್ರೆ ಅದು ಗಂಗಾವತಿ ಆಗಿತ್ತು, ಆದರೆ ಬದಲಾದ ಕಾಲಘಟ್ಟದಲ್ಲಿ ಆ ತತ್ವಗಳು ಮಾತಾಡುವುದೆ ಅಪರಾಧ ಎನ್ನುವಂತಾಗಿ ಎಲ್ಲವೂ ಹೊಂದಾಣಿಕೆ ಸಾಂಸ್ಕೃತಿಕ ರಾಜಕಾರಣ ಆಗಿಬಿಟ್ಟಿತ್ತು. ಇಂದು ಸ್ವಾಮೀಜಿ ಅವರ ಮಾತುಗಳನ್ನು ಕೇಳಿದ ಮೇಲೆ ಆ ತತ್ವದ ಗಟ್ಟಿತನದ ಮಾತು ತುಂಬಾ ವರ್ಷಗಳ ನಂತರ ಕೇಳುವಂತೆ ಆಯಿತು.

ಬಸವ ತತ್ವದ ತಾಯಿಬೇರುಗಳಾದ ಅಷ್ಟಾವರ್ಣ, ಪಂಚಾಚಾರ, ಷಟಸ್ಥಲಗಳ ಅರಿವು ಮರೆತು ಹೋಗಿದ್ದ ಗಂಗಾವತಿಯ ಜನಕ್ಕೆ ಅಷ್ಟೆ ಮೃದುವಾಗಿ, ಅಷ್ಟೆ ಮಾರ್ಮಿಕವಾಗಿ, ಆ ವಿಷಯಗಳನ್ನು ತಮ್ಮ ಮಾತುಗಳಲ್ಲಿ ಸೂಕ್ಷ್ಮವಾಗಿ ಹೇಳುತ್ತಿರುವ ಸ್ವಾಮಿಗಳ ಮಾತುಗಳು ಜನಕ್ಕೆ ಇಷ್ಟವಾಗುತ್ತಿವೆ.

ಆ ತತ್ವದ ಬಗ್ಗೆ ಗಟ್ಟಿಯಾಗಿ ಪ್ರಖರವಾಗಿ ಮಾತಾಡುವ ಅವರ ಮಾತುಗಳಿಗೆ ಸ್ವಲ್ಪ ಮೃದು ಟಚ್ ಕೊಟ್ಟು ಜನರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಆ ತತ್ವವನ್ನು ಬಲ್ಲವರಿಗೆ ಅವರ ಮಾತಿನ ಮಾರ್ಮಿಕತೆ ಅರ್ಥ ಆಗುತ್ತೆ. ಒಂದು ಖುಷಿಯ ಸಂಗತಿ ಏನೆಂದರೆ ಬಹಳ ವರ್ಷಗಳ ಮೇಲೆ ಮತ್ತೆ ಆ ತತ್ವವನ್ನು ಅರ್ಥಪೂರ್ಣವಾಗಿ ಹೇಳುವಂತಹ ಪ್ರವಚನ ಗಂಗಾವತಿಯಲ್ಲಿ ಆಗುತ್ತಿದೆ.

ಮೌಢ್ಯಗಳನ್ನು ಧಿಕ್ಕರಿಸಿದ ಆ ತತ್ವವನ್ನು ಜನರ ಮನಕ್ಕೆ ಮುಟ್ಟುವಂತೆ ಹೇಳುತ್ತಿದ್ದಾರೆ. ಗುಡಿ ಗುಂಡಾರಗಳನ್ನು ಸುತ್ತುವ ಇಂದಿನ ಲಿಂಗಾಯತ ಸಮುದಾಯ ಸ್ಥಿತಿಗೆ ಶರಣತತ್ವವೇ Antidot ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಇತ್ತೀಚಿಗೆ ಗಂಗಾವತಿಯಲ್ಲಿ ನಡೆಯುತ್ತಿದ್ದ ಪ್ರವಚನಗಳಿಗೆ ಹೋಲಿಸಿದರೆ ಈ ಪ್ರವಚನ ಕೇಳಲು ಸಾಕಷ್ಟು ಜನಸಂಖ್ಯೆ ಸೇರುತ್ತಿದೆ. ಮತ್ತೆ ಬಸವ ತತ್ವದ ಸುಗಂಧದ ಗಾಳಿ ಬೀಸುತ್ತಿದೆ ಎನ್ನಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *