ಗುರುರಾಜ ಕರ್ಜಗಿಗೆ ‘ವಚನ ಸಾಹಿತ್ಯಶ್ರೀ’ ಯಾಕೆ? ಸೋಮಶೇಖರ್ ಸ್ಪಷ್ಟನೆ ನೀಡಲಿ

ವಚನ ಸಾಹಿತ್ಯಕ್ಕೆ ಗುರುರಾಜ ಕರ್ಜಗಿ ಅವರ ಕೊಡುಗೆ ಏನು?

ಬೆಂಗಳೂರು

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿವನ್ನು ನೀಡಲಾಗುವುದು ಎಂದು ‘ಬಸವ ವೇದಿಕೆ’ಯ ಅಧ್ಯಕ್ಷರೂ ಕೂಡ ಆಗಿರುವ ಶರಣ ಸಾಹಿತ್ಯ ಪರಿಷತ್ತಿನ ಡಾ. ಸಿ. ಸೋಮಶೇಖರ್ ಹೇಳಿದ್ದಾರೆ.

ಏಪ್ರಿಲ್ ೨೭ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ದೊಡ್ಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಗುರುರಾಜ ಕರ್ಜಗಿಯವರಿಗೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಶಸ್ತಿಗಳಿಗೆ ಬರವಿಲ್ಲ. ಬಹುಪಾಲು ಪ್ರಶಸ್ತಿಗಳು ‘ಋಣ ಪರಿಹಾರ ಕಾರ್ಯಕ್ರಮ’ದ ಭಾಗವಾಗಿರುತ್ತವೆ. ಅಥವಾ ಅವುಗಳ ಹಿಂದೆ ಯಾವುದೋ ಲಾಭದ ಲೆಕ್ಕಾಚಾರವಿರುತ್ತದೆ.

‘ಬಸವ ವೇದಿಕೆ’ಯವರು ಯಾವ ಮಾನದಂಡ ಬಳಸಿ ಗುರುರಾಜ ಕರ್ಜಗಿ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ನೀಡುತ್ತಿದ್ದಾರೆ ಎಂಬುದನ್ನು ಸೋಮಶೇಖರ್ ಸಾರ್ವಜನಿಕವಾಗಿ ತಿಳಿಸಬೇಕು.

ಈ ಪ್ರಶಸ್ತಿಯ ಹೆಸರೇ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ. ವಚನ ಸಾಹಿತ್ಯಕ್ಕೆ ಗುರುರಾಜ ಕರ್ಜಗಿ ಅವರ ಕೊಡುಗೆ ಏನು? ಈ ಪ್ರಶ್ನೆಗೆ ಉತ್ತರ ನನಗಂತೂ ತಿಳಿದಿಲ್ಲ.

ದೊಡ್ಡ ಐಎಎಸ್ ಕೆಲಸದಿಂದ ನಿವೃತರಾಗಿ, ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ ಓಡಾಡುತ್ತಿರುವ ಸಿ ಸೋಮಶೇಖರ್ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು.

ಈ ಪ್ರಶಸ್ತಿ ಘೋಷಣೆಯಲ್ಲಿ ಸೈದ್ಧಾಂತಿಕ ಸಮಸ್ಯೆ ಕೂಡ ಇದೆ.

ವಚನ ಸಾಹಿತ್ಯ ಮನುವಾದದ ವಿರುದ್ಧ ದಂಗೆಯೆದ್ದ ಸಾಹಿತ್ಯ. ಆದರೆ ಗುರುರಾಜ ಕರ್ಜಗಿ ಅವರು ಮೂಲತಃ ಮನುವಾದಿಗಳು. ಮನುಸ್ಮೃತಿಯನ್ನು ಪವಿತ್ರ ಕೃತಿಯೆಂದು ಹೊಗಳುತ್ತಾರೆ.

ಮನುವಾದಿಗಳ ಬಗ್ಗೆ ಚೆನ್ನಬಸವಣ್ಣನವರು ಹೀಗೆ ಹೇಳುತ್ತಾರೆ:

ನಾಲ್ಕು ವೇದವನೋದಿದ ವಿಪ್ರರ ಮನೆಯ
ಎಣ್ಣೆ ಹೋಳಿಗೆ ತುಪ್ಪ ಸಕ್ಕರೆ ಎಂದಡೆ
ನಮ್ಮ ಶಿವಭಕ್ತರ ಮನೆಯ ಶ್ವಾನ,
ಮೂಸಿನೋಡಿ ಒಲ್ಲದೆ ಹೋಯಿತ್ತು…

ಇದು ಬಸವಣ್ಣನವರೂ ಸೇರಿದಂತೆ ಬಹಳಷ್ಟು ಶರಣರ ನಿಲುವೂ ಕೂಡ. ಶರಣ ಪರಂಪರೆಗೆ ವಿರುದ್ಧವಾಗಿರುವ ಇಂತಹ ಮನುವಾದಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ಕೊಡಲು ಕಾರಣವೇನು?

ಗುರುರಾಜ ಕರ್ಜಗಿ ವಚನಗಳನ್ನು ಪುರಾಣ, ಭಗವದ್ಗೀತೆ, ಉಪನಿಷತ್ತುಗಳ ಹಿನ್ನೆಲೆಯಲ್ಲಿಯೇ ಅರ್ಥೈಸುತ್ತಾರೆ. ಬಸವ ವಿರೋಧಿಗಳ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಪ್ರಶಸ್ತಿ ನೀಡುವುದರ ಮೂಲಕ ಈ ನಿಲುವುಗಳನ್ನೂ ಸೋಮಶೇಖರ್ ಅನುಮೋದಿಸಿದ್ದಾರೆಯೇ?

ವಚನ ಪರಂಪರೆ ಜನ ಪರಂಪರೆಯ ಸಾಹಿತ್ಯ. ನನಗಂತೂ ಗುರುರಾಜ ಕರ್ಜಗಿಯವರಲ್ಲಿ ಇದಕ್ಕೆ ವ್ಯತಿರಿಕ್ತವಾದ ನಿಲುವುಗಳೇ ಕಾಣಿಸುತ್ತವೆ.

ತಮ್ಮ ಬುದ್ದಿಗೆ ತಿಳಿದಂತೆ ಚಿಂತಿಸಿ, ಸೂಕ್ತವೆನಿಸುವ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಹಕ್ಕಿದೆ. ಇದರ ಬಗ್ಗೆ ನನ್ನ ತಕರಾರಿಲ್ಲ.

ಆದರೆ ವಚನ ಸಾಹಿತ್ಯದ ದೃಷ್ಟಿಯಿಂದ ಇಷ್ಟೊಂದು ಆಭಾಸ ಆಭಾಸವಿರುವ ವ್ಯಕ್ತಿಗೆ ‘ಬಸವ ವೇದಿಕೆ’ ಎಂದು ಹೆಸರು ಇಟ್ಟುಕೊಂಡಿರುವ ಸಂಸ್ಥೆ ‘ವಚನ ಸಾಹಿತ್ಯಶ್ರೀ’ ಎಂಬ ಹೆಸರಿನ ಪ್ರಶಸ್ತಿ ಕೊಡಲು ಕಾರಣವೇನು? ಇದರಲ್ಲಿರುವ ಲೆಕ್ಕಾಚಾರವೇನು? ಇದು ಈಗ ಬಹಳಷ್ಟು ಜನರು ಕೇಳುತ್ತಿರುವ ಪ್ರಶ್ನೆ.

ಬಸವ ವೇದಿಕೆಯ ಅಧ್ಯಕ್ಷರ ಉತ್ತರಕ್ಕೆ ಎದುರು ನೋಡುತ್ತಿದ್ದೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
5 Comments
  • ಲಿಂಗಾಯತ ಧರ್ಮ ಮತ್ತು ತತ್ವದ ಅಪಮಾನ ಮಾಡುವ ಸಲುವಾಗಿ ಬಸವಣ್ಣನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಮನುವಾದಿಗಳಿಗೆ, ಹಾದರದ ಕಥೆಯನ್ನೇ ಭೋದಿಸುವವರಿಗೆ ಕೊಡುತ್ತಿದ್ದಾರೆ.

  • ಚೆನ್ನಾಗಿ ಪ್ರಶ್ನಿಸಿದ್ದಿರಿ ಸರ್ ಇಂದು ಅನೇಕರು ವಿದ್ಯಾವಂತರು,ವಚನಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು ಇಂಥ ಕೆಲಸ ಮಾಡುವುದನ್ನು ಕೇಳಿ ಥೂ ಎನ್ನಿಸುತ್ತದೆ. ಬಸವಣ್ಣನವರ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸುವ ಇಂಥ ಐಎಎಸ್ ಅಧಿಕಾರಿಗಳಿಗೆ ಮನಸಾಕ್ಷಿ ಇಲ್ಲವೇ?

  • ಟಿ ಆರ್ ಚಂದಾಶೇಖರ ಅವರು ಕೇಳಿದ ಪ್ರಶ್ನೆ ಸರಿಯಾಗಿದೆ. ವಚನಸಾಹಿತ್ಯವನ್ನು ಪುರಾಣ ಭಗವದ್ಗೀತೆ ಹಿನ್ನೆಲೆಯಲ್ಲಿ ತಿರುಚುವ ಮನುವ್ಯಾದಿಗಳು ವಚನ ಸಾಹಿತ್ಯಶ್ರೀ ಪ್ರಶಸ್ತಿಗೆ ಅರ್ಹರಲ್ಲ. ಬಸವ ವೇದಿಕೆಯವರು ತಮ್ಮ ನಿರ್ಧಾರ ಪುನರವೆರಿಸಲಿಸಲಿ

  • ತಮ್ಮ ನಿರ್ಧಾರ ಪುನರ್ ಪರಿಶೀಲನೆ ಮಾಡಲಿ

  • ಬಸವನ ಹೆಸರು ಬಸವನ ಹುಳಗಳಿಗೆ (ಸಿಂಬಳ ಹುಳಕ್ಕೆ )ಪ್ರಸಸ್ತಿ ಇದು ಸತ್ಯ ಮಾತು ಇದು ಸನಾತನ ವಾಕ್ಯ ನೀವು ಒಪ್ಪಿಗೆ ಸೂಚಿಸಬೇಕು. ಇದೆಲ್ಲ ನಮ್ಮ ಬಸವ ವಿರೋಧಿ ಜನರ ಕೈ ವಾಡಾ ಜನರಿಗೆ ಅರಿವು ಮಾಡಿಸ್ಬೇಕು. ಎಚ್ಚರ ವಾಗದಿದ್ದರೆ ನಮ್ಮ ತಲೆ ಮೇಲೆ ಕಾಲು ಇಡುವದು ಕೆಳ್ಗೆ ತಳ್ಳುವ ಕೆಲಸ ನಡೆದು ಹೋಗುತ್ತದೆ ಜಾಗ್ರತೆ ವಹಿಸಿ ಲಿಂಗಾಯತ ಬಂಧುಗಳೇ 👏🏻ಜಯ ಬಸವ 👏🏻

Leave a Reply

Your email address will not be published. Required fields are marked *

ಲೇಖಕರು ಅರ್ಥಶಾಸ್ತ್ರಜ್ಞರು ಮತ್ತು ಬಸವ ತತ್ವ ಚಿಂತಕರು