ಶರಣರ ವಚನಗಳಲ್ಲಿ ಲಿಂಗಾಯತ ಧರ್ಮದ ಮೂಲತತ್ವ: ಬೆಲ್ದಾಳ ಶರಣರು

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ವೀರಗೊಲ್ಲಾಳೇಶ್ವರ ಸ್ಮರಣೋತ್ಸವ

ಬೀದರ:

ಲಿಂಗಾಯತ ಧರ್ಮ ಮೂಲತತ್ವಗಳು ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಅಡಗಿವೆ ಎಂದು ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ಅವರು ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಜರುಗಿದ ಶರಣ ಸಂಗಮ ಹಾಗೂ ವೀರಗೋಲ್ಲಾಳೇಶ್ವರ ಸ್ಮರಣೋತ್ಸವ ಕಾರ್ಯಕ್ರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಲಿಂಗಾಯತ ಧರ್ಮವು ೧೨ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಒಂದು ಸ್ವತಂತ್ರ ವೈಚಾರಿಕ ಮತ್ತು ಸಮಾನತೆಯ ಧರ್ಮವಾಗಿದೆ. ಇದು ಜಾತಿ, ಲಿಂಗ ಭೇದವನ್ನು ವಿರೋಧಿಸಿ, ಮಾನವೀಯತೆ ಮತ್ತು ಕಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು.

ಸಾನಿಧ್ಯ ವಹಿಸಿಕೊಂಡಿದ್ದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ವೀರಗೊಲ್ಲಾಳೇಶ್ವರರು ೧೨ನೇ ಶತಮಾನದ ಬಸವಾದಿ ಶಿವಶರಣರ ಸಮಕಾಲೀನ ಶರಣರಲ್ಲಿ ಒಬ್ಬರಾಗಿದ್ದರು. ಮುಗ್ದ ಶಿವಭಕ್ತನಾಗಿದ್ದು, ಮಾನವನ ಜೀವನದಲ್ಲಿ ಬದಲಾವಣೆಯ ತಿರುವುಗಳಿಂದ ಶರಣರಾದರು.

ಇವರವು ಕೇವಲ ೧೦ ವಚನಗಳು ಮಾತ್ರ ಸಿಕ್ಕಿವೆ. ಅವರ ವಚನಾಂಕಿತ ವೀರಬೀರೇಶ್ವರಾ ಎಂಬುದಾಗಿದೆ. ಕಾಯಕ ನಿಷ್ಠೆ, ಶೃದ್ಧಾಭಕ್ತಿ, ವಿಶ್ವಾಸ, ನಂಬಿಕೆ, ನಿಶ್ಚಲತೆಯನ್ನು ಮೈಗೂಡಿಸಿಕೊಂಡು ಶರಣರ ಸಂಗದಿಂದ ಪರಿವರ್ತನೆಯಾಗಿರುವುದನ್ನು ಕಾಣುತ್ತೇವೆ. ತನ್ನ ಸರಳ ನಡೆ ನುಡಿಗಳಿಂದ ಸಾಮಾನ್ಯರ ಮನಸ್ಸಿನಲ್ಲಿ ಗೊಲ್ಲಾಳೇಶ್ವರರು ಅಚ್ಚಳಿಯದೆ ಉಳಿದಿದ್ದಾರೆ ಎಂದು ನುಡಿದರು.

ಹುಮನಾಬಾದ ಬಸವ ಸೇವಾ ಪ್ರತಿಷ್ಠಾನದ ಗಣನಾಯಕಿ ಕರುಣ ಸಲಗರ ಉದ್ಘಾಟಿಸಿ ಮಾತನಾಡಿದರು. ಬೀದರ ನೀಲಮ್ಮನ ಬಳಗದ ಕರುಣಾ ಶೆಟಗಾರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಲ್ಪನಾ ಚಂದ್ರಕಾಂತ ಬಿರಾದಾರ ಧ್ವಜಾರೋಹಣಗೈದರು.

ರಾಂಪೂರ ಬಸವ ಸೇವಾ ಪ್ರತಿಷ್ಠಾನದ ದಿಲೀಪಕುಮಾರ ಹೂಗಾರ, ಜಗದೀಶ ಮೂಲಗೆ, ರಾಜಕುಮಾರ ನೆಲವಾಲ, ಸೊಮನಾಥ ಯಾಳವಾರ ಉಪಸ್ಥಿತರಿದ್ದರು.

ಗಂಗಾಂಬಿಕಾ ಮಹೇಶ ಮಂಗಲಗಿ ಗುರುಪೂಜೆ ನೇರವೇರಿಸಿದರು. ಗುರುಕಿರಣ ಚಿದ್ರಿ, ಮಾಣಿಕೇಶ್ವರಿ ವಚನ ಸಂಗೀತ ನಡೆಸಿಕೊಟ್ಟರು. ಆದರ್ಶ ಕಾಲೋನಿ ನೀಲಮ್ಮನ ಬಳಗದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಬಸವಜ್ಯೋತಿ ನಂದಿ ಸ್ವಾಗತಿಸಿದರೆ, ಧನಲಕ್ಷ್ಮಿ ಪಾಟೀಲ ನಿರೂಪಿಸಿದರು. ಉಮಾದೇವಿ ಬಲವಂತ ಮಂಗಲಗಿ ಭಕ್ತಿ ಸೇವೆಗೈದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬಸವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *