ಬಸವಕಲ್ಯಾಣ
ಬಸವಣ್ಣನವರ ಕರ್ಮಭೂಮಿಯಲ್ಲಿ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ಮಾಡಲು ಕನ್ನೇರಿ ಮಠದ ಶ್ರೀಗಳಿಗೆ ಯಾವುದೇ ನೈತಿಕ ಹಕ್ಕಿಲ್ಲ.
ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಾದಿ ಶರಣರು ಸಾರಿದ ಸಮಾನತೆಯನ್ನು ವಿರೋಧಿಸಿ, ಕಲ್ಯಾಣ ನೆಲದಲ್ಲಿ ಅಂದು ಶರಣರ ಹತ್ಯಾಕಾಂಡ ನಡೆಸಿದ ವರ್ಣಾಶ್ರಮಿಗಳ ಸಂತತಿಯೇ ಇವರಾಗಿದ್ದಾರೆ.
ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದ್ದರಿಂದ ಇಂಥವರಿಗೆ ಬಸವಕಲ್ಯಾಣದಲ್ಲಿ ಜೂನ್ 28ಕ್ಕೆ ನಡೆಯುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಮಾಡಲು ಬಿಡುವುದಿಲ್ಲ.
ಹಿಂದೂ ಧರ್ಮವೇ ಅಲ್ಲ; ಅದು ಜೀವನ ಪದ್ಧತಿಯಾಗಿದೆ. ವೈದಿಕ ಧರ್ಮವೇ ಹಿಂದೂ ಧರ್ಮವೆಂದು ವೈದಿಕ ಜನಗಳನ್ನು ಮೂರ್ಖನಾಗಿಸುತ್ತ ಒಳಗೊಳಗೆ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ವಿರೋಧಿಸುತ್ತ ಮತ್ತೊಮ್ಮೆ ಈ ದೇಶದಲ್ಲಿ ಮನು ಸಂಸ್ಕೃತಿ ಜಾರಿಗೆ ತರುವ ಹುನ್ನಾರ ಈ ಕಾರ್ಯಕ್ರಮದ ಹಿಂದೆ ಅಡಗಿದೆ.
ಬಸವಣ್ಣನವರು ವೈದಿಕತೆಯಲ್ಲಿರುವ ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ ಅದರಿಂದ ಹೊರಬಂದು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. 900 ವರ್ಷದಿಂದ ಬಸವಣ್ಣನವರ ತತ್ವವನ್ನು ವಿರೋಧಿಸಿದವರು ಈಗ ಏಕಾಏಕಿಯಾಗಿ ಬಸವಣ್ಣನವರನ್ನು ಹಿಂದುತ್ವಕ್ಕೆ ತಳಕು ಹಾಕಿ ಬಸವಣ್ಣನವರ ವಚನವನ್ನು ತಪ್ಪುತಪ್ಪಾಗಿ ಅರ್ಥೈಸುತ್ತಾ ಬಸವಣ್ಣನವರನ್ನು ಹಿಂದೂಧರ್ಮದ ಸುಧಾರಕ ಎಂದು ಬಿಂಬಿಸಲು ಹೊರಟಿದ್ದಾರೆ. ಇವರ ಕುತಂತ್ರ ನಡೆಯನ್ನು ಲಿಂಗಾಯತ ಧರ್ಮಿಯರು, ಬಸವಾಭಿಮಾನಿಗಳು ಅರ್ಥಮಾಡಿಕೊಂಡು ಹೋರಾಟದಲ್ಲಿ ಭಾಗವಹಿಸಬೇಕು.
ಬಸವತತ್ವ ಪ್ರಚಾರಕರನ್ನು ತಾಲಿಬಾನಿಗಳೆಂದು ಹೀಯಾಳಿಸುತ್ತ, ಬಸವತತ್ವ ಸ್ವಾಮಿಗಳನ್ನು ಹೊಡೆಯುವಂತೆ ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುವ ಕನ್ನೇರಿ ಸ್ವಾಮಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದೂ ಆಗ್ರಹಿಸಿದರಲ್ಲದೆ ಕಾರ್ಯಕ್ರಮ ಮಾಡದಂತೆ ತಡೆಯೊಡ್ಡಲು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.

ಚೆನ್ನಾಗಿ ಉಗಿರಿ, ಹಿಂದೂಗಳ ಹೆಸರಿನಲ್ಲಿ ಉಗ್ರವಾದವನ್ನು ಪ್ರಸಾರ ಮಾಡುವ kannerige ಮತ್ತೊಮ್ಮೆ ಗಡಿ ಪಾರು ಮಾಡಬೇಕು.
ಇಡೀ ಬಸವ ಕಲ್ಯಾಣದ ಜನ ಒಟ್ಟುಗೂಡಿ ವಿರೋಧಿಸಬೇಕು.