ವಚನಗಳನ್ನು ತಪ್ಪಾಗಿ ಅರ್ಥೈಸುವ ಕನ್ನೇರಿ ಸ್ವಾಮಿಗೆ ಎಚ್ಚರಿಕೆ

ಬೀದರ

ಕನ್ನೇರಿ ಸ್ವಾಮಿ ನೀ ವಚನಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇನ್ನೊಂದು ಜನ್ಮ ಹೊತ್ತುಕೊಂಡು ಬರಬೇಕು. ನಿನ್ನಂತ ಅಜ್ಞಾನಿಗೆ, ನಿನ್ನ ಕೊಳಕು ಚಿಂತನೆಗೆ ವಚನಗಳ ಆಳ ಅರ್ಥವಾಗಲಾರದು.

ನೀನು ವಚನವನ್ನು ತಪ್ಪಾಗಿ ಅರ್ಥೈಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಿಯಾ. ನಿನಗೆ ಅರ್ಥವಾಗದ ವಚನ ಜನಗಳಿಗೆ ಹೇಗೆ ಅರ್ಥವಾಗಬೇಕು?

ಗುರು ಬಸವಣ್ಣನವರ ಜೀವನದಲ್ಲಿ ಮೂರು ಹಂತಗಳು ಬರುತ್ತವೆ. ಬಾಲ್ಯ, ಯೌವನ, ಮುಪ್ಪಾವಸ್ಥೆಗಳು ಹೇಗಿವೆಯೋ, ಹಾಗೆಯೇ ಅವರು ಬಾಲ್ಯದಲ್ಲಿ ದೇವತೆಗಳ ಪೂಜೆ, ಯೌವನದಲ್ಲಿ ಏಕದೇವತಾ (ಶಿವ ಅಥವಾ ಸಂಗಮನಾಥ) ಪೂಜೆ, ನಂತರದಲ್ಲಿ ಏಕದೇವೋಪಾಸನೆ ಮಾಡಿದ್ದಾರೆ.

“ಬಿಡಲಾರೆನಯ್ಯಾ, ಹೊನ್ನ ಹಾವುಗೆಯ ಮೆಟ್ಟಿದವನ!
ಮಿಡಿಮುಟ್ಟಿದ ಕೆಂಜೆಡೆಯವನ!
ಮೈಯಲ್ಲಿ ವಿಭೂತಿಯ ಹೂಸಿದವನ!
ಕರದಲ್ಲಿ ಕಪಾಲವ ಹಿಡಿದವನ!
ಅರ್ಧನಾರಿಯಾದವನ!
ಬಾಣನ ಬಾಗಿಲ ಕಾಯ್ದವನ!
ನಂಬಿಗೆ ಕುಂಟಣಿಯಾದವನ
ಕೂಡಲಸಂಗಮದೇವಾ!”

ಈ ವಚನ ಏಕ ದೇವತಾ ಉಪಾಸಕರಿದ್ದಾಗ ಸಂಗಮನಾಥನನ್ನು ಪೂಜೆ ಮಾಡುವಾಗ ಹೇಳಿದ ವಚನ. ಈ ವಚನ ತೆಗೆದುಕೊಂಡು ಜನಗಳ ದಾರಿ ತಪ್ಪಿಸುವ ಹುನ್ನಾರವನ್ನು ಕನ್ನೇರಿ ಸ್ವಾಮಿ ಮಾಡುತ್ತಿದ್ದಾನೆ.

“ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ? ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಗಿತ್ತು.
ಅಂತಹ ಪಾರ್ವತಿ ಘನವೆಂಬೆನೆ? ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ? ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು! “

ಕನ್ನೇರಿ ಸ್ವಾಮಿಗೆ ಈ ವಚನ ಅರ್ಥವೇ ಆಗಿಲ್ಲ.

ಈ ವಚನದ ಅರ್ಥ ಹೀಗಿದೆ. ಸಮುದ್ರ ದೊಡ್ಡದು ಇಡೀ ಜಗತ್ತಿಗೆ ಸಮುದ್ರವೇ ನೀರು ಕೊಡುತ್ತಿದೆ. ಅದಕ್ಕೆ ಸಮುದ್ರ ದೇವರೆಂದು ಪೂಜೆ ಮಾಡಬೇಕೆಂದು ಹೇಳುತ್ತಾರೆ.

ಆದರೆ ಆ ಸಮುದ್ರ ದೊಡ್ಡದಲ್ಲ. ಆ ಸಮುದ್ರ ಧರೆಯ (ಪೃಥ್ವಿಯ, ಭೂಮಿ) ಮೇಲೆ ಅಡಗಿದೆ.

ಹಾಗಾದರೆ ಧರೆ ದೊಡ್ಡದೇನು ಅಲ್ಲ. ಅದು ನಾಗೇಂದ್ರನ ಫಣಾಮಣಿಯಯಲ್ಲಿ ಅಡಗಿದೆ. ಹಾಗಾದರೆ ನಾಗೇಂದ್ರ ದೊಡ್ಡವನೇನು? ಇಲ್ಲ. ಪಾರ್ವತಿ ಕೈ ಬೆರಳಿನ ಉಂಗುರವಾಗಿದೆ. ಹಾಗಾದರೆ ಪಾರ್ವತಿ ದೊಡ್ಡವಳೇನು? ಇಲ್ಲ. ಅವರು ಪರಮೇಶ್ವರನ ಅರ್ಧಾಂಗಿ.

ಹಾಗಾದರೆ ಪರಮೇಶ್ವರ ದೊಡ್ಡವನೇನು? ಇಲ್ಲ. ಪರಮೇಶ್ವರನು ನಮ್ಮ ಶರಣರ ಮನದಲ್ಲಿ ಅಡಗಿದ್ದಾನೆ. ಯಾಕೆ ಅವನು ಶರಣರ ಮನದಲ್ಲಿ ಅಡಗಿದ್ದಾನೆಂದರೆ, ಆ ಮನಸ್ಸನ್ನು ಕೊಟ್ಟವನು ನಿರಾಕಾರ ಪರಶಿವನು. ಪರಮೇಶ್ವರನಿಗೆ ಜನ್ಮ ಕೊಟ್ಟವನು ಪರಶಿವನು.

ಆದಕಾರಣ ಸಮುದ್ರದಕ್ಕಿಂತಲೂ, ಧರೆಗಿಂತಲೂ ನಾಗೇಂದ್ರನಕ್ಕಿಂತಲೂ, ಪಾರ್ವತಿಗಿಂತಲೂ, ಪರಮೇಶ್ವರನಿಗಿಂತಲೂ ಶರಣರು ದೊಡ್ಡವರು.

ಏಕೆಂದರೆ ಶರಣರು ನೀರು, ಪೃಥ್ವಿ, ನಾಗೇಂದ್ರ, ಪಾರ್ವತಿ, ಪರಶಿವ ಇವರೆಲ್ಲರಿಗೂ ಜನ್ಮ ನೀಡಿದ ಜನ್ಮದಾತ ನಿರಾಕಾರ ನಿರ್ಗುಣ ನಿರಂಜನನಾದ ಪರಶಿವನನ್ನು ನಿತ್ಯದಲ್ಲಿ ಆರಾಧಿಸುವವರು. ಹಾಗಾಗಿ ಶರಣರು ದೊಡ್ಡವರು.

ಇಲ್ಲಿ ಶಿವ ಬೇರೆ ಪರಶಿವ ಬೇರೆ. ಶಿವ ಪಾರ್ವತಿ ಪತಿ. ಪರಶಿವ ನಿರಾಕಾರ ಪರಮಾತ್ಮ. ಆ ಪರಮಾತ್ಮನ ಕುರುಹು ಇಷ್ಟಲಿಂಗ. ಇಷ್ಟಲಿಂಗವನ್ನು ಆರಾಧಿಸಿದವರು ಶರಣರು.

ಕನ್ನೇರಿ ಸ್ವಾಮಿ ವಚನಗಳನ್ನು ಅರ್ಥಮಾಡಿಕೊಳ್ಳಲಾರದೆ ಬಾಯಿಗೆ ಬಂದಂತೆ ಒದರ ಬೇಡ. ತಪ್ಪು ತಪ್ಪಾಗಿ ವಚನ ಅರ್ಥೈಸಿ ಜನಗಳಿಗೆ ಹೇಳಿದರೆ ನಾವು ಸುಮ್ಮನಿರುವುದಿಲ್ಲ. ಎಚ್ಚರಿಕೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ, ಬಸವ ಮಂಟಪ, ಬೀದರ್