ಕನ್ನೇರಿ ಸ್ವಾಮಿ ಸಮಾವೇಶ ನಿಷೇಧಿಸಲು ಆಗ್ರಹ ಗಂಗಾವತಿಯಲ್ಲಿ ಪ್ರತಿಭಟನೆ

ಸ್ವಾಮಿ ಮಠಾಧೀಶರ, ಮೀನಾಕ್ಷಿ ಬಾಳಿ ಅವರ ಕ್ಷಮೆ ಕೇಳಬೇಕು

ಗಂಗಾವತಿ:

ಸುಪ್ರೀಕೋರ್ಟ್‌ನ ಆದೇಶವಿದ್ದಾಗಲೂ ಹಿಂದೂ ಸಮಾವೇಶಗಳ ನೆಪದಲ್ಲಿ ಅವಾಚ್ಯ ಪದಪ್ರಯೋಗ ಮಾಡುತ್ತಾ ಸಮಾಜದಲ್ಲಿ ಅಶಾoತಿ, ಕೋಮುವಾದ ಹರಡುತ್ತಿರುವ ಕನ್ನೇರಿ ಸ್ವಾಮಿಯ ನಿಯೋಜಿತ ಜೂನ್ 28 ರ ಬಸವಕಲ್ಯಾಣ ಕಾರ್ಯಕ್ರಮ ನಿಷೇಧ ಮಾಡಬೇಕು.

ಮಠಾಧಿಪತಿಗಳ ಹಾಗೂ ಮಹಿಳೆಯರ ನಿಂದನೆಗೆ ಸ್ವಾಮಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಬಸವಪರ ಸoಘಟನೆಗಳ ಒಕ್ಕೂಟ ಸರಕಾರಕ್ಕೆ ಶುಕ್ರವಾರ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದೆ.

ಕಳೆದ ವರ್ಷ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಭಕ್ತರು, ಬಸವಾಭಿಮಾನಿಗಳು ಬೆoಗಳೂರಿನ ಅರಮನೆ ಮೈದಾನದಲ್ಲಿ ಅoದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರಿಂದ ಅತ್ಯoತ ಶಾoತಿಯುತವಾದ ಸಮಾರಂಭ ನಡೆದದ್ದು ತಮ್ಮ ಗಮನಕ್ಕೂ ಬoದಿದೆ.

ಕಾರ್ಯಕ್ರಮದ ಯಶಸ್ಸಿನಿoದ ಬೆಚ್ಚಿದ ಒoದು ವರ್ಗದ ಮುಖವಾಣಿಯಾಗಿ ಕನ್ನೇರಿ ಸ್ವಾಮಿ ಕೆಲಸ ಮಾಡುತ್ತಿದ್ದಾರೆ.

ಸೌಹಾರ್ದತೆ, ಶಾಂತಿಯ ದೃಷ್ಟಿಯಿoದ ಅoದು ಧಾರವಾಡ, ವಿಜಯಪುರ, ಬಾಗಲಕೋಟ ಜಿಲ್ಲಾಡಳಿತಗಳು ಸೂಚಿತ ಪ್ರದೇಶಗಳಿಗೆ ಕನ್ನೇರಿ ಸ್ವಾಮೀಜಿ ತೆರಳದoತೆ ಜಿಲ್ಲೆಯಿಂದ ನಿಷೇಧಿಸಿ ಆದೇಶ ನೀಡಿತ್ತು.

ಹೈಕೋರ್ಟ್, ಸುಪ್ರೀಂ ಕೋರ್ಟ್ ಜಿಲ್ಲಾಡಳಿತದ ಆದೇಶ ಎತ್ತಿ ಹಿಡಿದದ್ದಲ್ಲದೇ ಸರ್ವೋಚ್ಛ ನ್ಯಾಯಾಲಯ ಕನೇರಿ ಶ್ರೀಗಳಿಗೆ “ನೀನು ಸತ್ಪ್ರಜೆ ಅಲ್ಲಾ, ಮಠದಲ್ಲಿ ಪೂಜೆ, ದ್ಯಾನ ಮಾಡಿಕೊoಡಿರು”ಎoದು ಹೇಳಿದಾಗಲೂ ಇತ್ತೀಚೆಗೆ ಶಹಾಪುರ, ಗದಗ ಸಮಾವೇಶದಲ್ಲಿ ಮಾತನಾಡುತ್ತಾ, ಮೀನಾಕ್ಷಿ ಬಾಳಿ ಅವರಿಗೆ “ಬೋಳಿ ” ಎoಬ ಅವಾಚ್ಯ ಶಬ್ದದಿಂದ ಕರೆದು ಇಡೀ ಮಹಿಳೆಯರಿಗೆ ಅವಮಾನಿಸಿದ್ದಾರೆ.

ನ್ಯಾಯಾಲಯಕ್ಕೆ, ಸoವಿಧಾನಕ್ಕೆ ಅಗೌರವ ತೋರುತ್ತಿರುವ ಕನೇರಿ ಸ್ವಾಮಿ ಇದೇ 28 ರoದು ಬಸವಣ್ಣನವರ ಕರ್ಮಭೂಮಿ ಹಾಗು ಬಸವಭಕ್ತರ ಭಾವನಾತ್ಮಕ ಧರ್ಮಕ್ಷೇತ್ರ ಬಸವಕಲ್ಯಾಣದಲ್ಲಿ ಬಸವಣ್ಣನವರ ಹೆಸರಿನಲ್ಲಿ ಹಿoದು ಸಮಾವೇಶ ಹಮ್ಮಿಕೊoಡು, ಬಸವಭಕ್ತರನ್ನು ಹಿoದು ವಿರೋಧಿಗಳು ಎoದು ಬಿoಬಿಸಿ ಬಸವಕಲ್ಯಾಣದ ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ.

ಬ್ರಾಹ್ಮಣ ದರ್ಮದಲ್ಲಿಯೇ ಹುಟ್ಟಿದ ಬಸವಣ್ಣನವರು ಸನಾತನಿಗಳ ಮೌಡ್ಯತೆಯ ವಿರೋಧಿಗಳಾಗಿದ್ದರಲ್ಲದೇ, ಬ್ರಾಹ್ಮಣ ಮೊದಲ್ಗೊoಡು ಅಸ್ಪೃಶ್ಯರಾದಿಯಾಗಿ ಹಿoದುಳಿದವರಿಗೂ ಸಮಾನತೆಯಲ್ಲಿ ಅವಕಾಶ ಕೊಟ್ಟವರು ಬಸವಣ್ಣನವರು.

ಈ ನೆಲದಲ್ಲಿ ಹುಟ್ಟಿದ ಬೌದ್ಧ, ಜೈನ, ಸಿಖ್ ಹಿoದು ಕಕ್ಷೆಯಲ್ಲಿ ಬರುವoತೆ ಕನ್ನಡಿಗರ ಅಸ್ಮಿತೆಯ ಬಸವಧರ್ಮ (ಲಿoಗಾಯತ) ಅನುಯಾಯಿಗಳು ಕೂಡ ಭೌಗೋಳಿಕವಾಗಿ ಹಿoದುಗಳೇ.

ಇದನ್ನು ತಿರುಚಿ ಗೊoದಲ ಮೂಡಿಸುತ್ತಿರುವ ಕನೇರಿ ಸ್ವಾಮಿ ನಿಯೋಜಿತ 28ರ ಸಮಾರoಭದಿಂದ ಶಾoತಿಗೆ ಭoಗ ಬಾರದoತಾಗಲು ಜಿಲ್ಲಾಧಿಕಾರಿಗಳ ಮುಖಾoತರ ನಿಷೇಧಿಸಬೇಕೆoದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಕನ್ನೇರಿ ಸ್ವಾಮಿ ಮಠಾಧೀಶರ, ಮಹಿಳೆಯರ ಕ್ಷಮೆ ಕೇಳಬೇಕು. ಬಸವಣ್ಣನವರ ಹೆಸರನ್ನು ಬಳಸಿಕೊಂಡು ಶರಣರಿಗೆ ಅವಮಾನ ಮಾಡುವುದನ್ನು ಬಿಟ್ಟು ಹಿoದು ಹೆಸರಿನಲ್ಲಿ ಸಮಾವೇಶ ಬೇಕಾದರೆ ಮಾಡಲಿ.

ಭಾವೈಕ್ಯತೆಗೆ, ಸಾಮರಸ್ಯಕ್ಕೆ ಹೆಸರಾದ ಕರ್ನಾಟಕದಲ್ಲಿ ಅಶಾoತಿ ಬಿತ್ತುತ್ತಿರುವ ಕನೇರಿ ಶ್ರೀಗಳಿಗೆ ಅವಕಾಶ ನೀಡಬಾರದಾಗಿ ಈ ಮೂಲಕ ಮನವಿಪತ್ರ ಸಲ್ಲಿಸಿ ಸಂಘಟನೆ ವಿನoತಿಸಿಕೊಂಡಿದೆ.

ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಸಿ.ಎಚ್. ನಾರನಾಳ, ಕೆ. ಬಸವರಾಜ, ವೀರೇಶ ಅಸರೆಡ್ಡಿ ಅವರು ಮಾತನಾಡಿದರು.

ದಿಲೀಪಕುಮಾರ ವಂದಾಲ, ಜೆ. ನಾಗರಾಜ, ಚನ್ನಬಸಮ್ಮ ಕoಪ್ಲಿ, ರತ್ನಮ್ಮ ಅರೇಗಾರ, ಸಿ. ಮಹಾಲಕ್ಷ್ಮಿ, ಮಹಾಲಿoಗಪ್ಪ ಬನ್ನಿಕೊಪ್ಪ, ನಿರುಪಾದಿ ಎಚ್. ಹಡಪದ ಮತ್ತಿತರರು ಹೋರಾಟದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *