‘ಒಡಲ ಪೋಷಣೆ ಮಾಡುವಾಗ ವಿಷಯ ಸುಖಿಗಳಾಗಿರದೆ ಪ್ರಸಾದ ಸುಖಿಗಳಾಗಿರಬೇಕು’

ಗುಳೇದಗುಡ್ಡ:

ಶಿವಾನಂದ ಅಂಗಡಿಯವರ ಮನೆಯಲ್ಲಿ ಶನಿವಾರ ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಜರುಗಿತು.

ಚಿಂತನೆಗಾಗಿ ವ್ಯೋಮಮೂರುತಿ ಅಲ್ಲಮ ಪ್ರಭುದೇವರ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಎಣ್ಣೆ ಬೇರೆ ಬತ್ತಿ ಬೇರೆ ಎರಡೂ ಕೂಡಿ ಸೊಡರಾಯಿತ್ತು
ಪುಣ್ಯ ಬೇರೆ ಪಾಪ ಬೇರೆ ಎರಡೂ ಕೂಡಿ ಒಡಲಾಗಿತ್ತು.
ಮಿಗಬಾರದು ಮಿಗದಿರಬಾರದು,
ಒಡಲಿಚ್ಛೆ ಸಲ್ಲಿಸದೆ ನಿಮಿಷವಿರಬಾರದು
ಕಾಯ ಗುಣವಳಿದು ಮಾಯಾ ಜ್ಯೋತಿ
ವಾಯುವ ಕೂಡದ ಮುನ್ನ ಭಕ್ತಿಯ ಮಾಡಬಲ್ಲಡೆ     
ಆತನೇ ದೇವ ಗುಹೇಶ್ವರ.

ಪ್ರಾರಂಭದಲ್ಲಿ ಉಪನ್ಯಾಸಕರಾದ ಪ್ರೊ. ಶ್ರೀಕಾಂತ ಗಡೇದವರು ಚಿಂತನೆ ಪ್ರಾರಂಭಿಸುತ್ತ, ಎಣ್ಣೆ ಮತ್ತು ಬತ್ತಿಗಳು ಎರಡೂ ಸೇರಿ ಜ್ಯೋತಿಯಾಗುವಂತೆ, ಪಾಪ ಪುಣ್ಯಗಳ ಸಮ್ಮಿಶ್ರಣದ ಫಲವಾಗಿ ಶರೀರವಾಗುವಂತೆ ಈ ಜೀವವು ಶರೀರ ಮತ್ತು ಮಾಯೆಯನ್ನು ಕೂಡಿದೆ. ಇದನ್ನು ಅರಿತು ಆಚರಿಸಿ ನಡೆಯಬೇಕಿದೆ. ಅದನ್ನೇ ಭಕ್ತಿ ಎನ್ನುವುದು. ಈ ಭಕ್ತಿಯಿಂದಾಗಿ ಮಾನವ ದೇವನೇ ಆಗುತ್ತಾನೆ ಅದುವೇ ಬಹು ಪ್ರಮುಖವಾಗಿದೆ ಎಂದು ತಿಳಿಸಿದರು.

ಇದೇ ಆಶಯವನ್ನು ಸಮರ್ಥಿಸುತ್ತ ಮಹಾಲಿಂಗಪ್ಪ ಕರನಂದಿಯವರು, ಶರಣರು ಕಾಯಗುಣವನ್ನು ನೀಗಿಕೊಂಡು ಭಕ್ತಿಯನ್ನು ಮಾಡಬಲ್ಲವರು. ದೇಹ ಅಳಿಯುವ ಮುನ್ನವೇ ಅಂಗಲಿಂಗದ ಸಂಬಂಧವನ್ನ ಅರಿಯಬೇಕು ಶರೀರ ಅಳಿದ ನಂತರ ಮತ್ತೇನಿಲ್ಲ. ಅದು ಇರುವಂತೆಯೇ ನಿಜದ ನೆಲೆಯನ್ನು ಅರಿತರೆ ಆತನೇ ಗುಹೇಶ್ವರನಾಗುತ್ತಾನೆ ಎಂದು ಶ್ರೀಮದ್ ಅಲ್ಲಮರು ಹೇಳಿದ್ದಾರೆ ಎಂದರು.

ಡಾ. ಗಿರೀಶ ನೀಲಕಂಠಮಠ ಅವರು ಚಿಂತನೆಯನ್ನು ಮುಂದುವರೆಯಿಸುತ್ತ, ದೀಪ ಬೆಳಗಲು ಪ್ರಣತೆ ಎಣ್ಣೆ ಬತ್ತಿಗಳು ಬೇಕು. ಮುಖ್ಯವಾಗಿ ಎಣ್ಣೆ ಬತ್ತಿಗಳಿಂದಲೇ ಜ್ಯೋತಿಯೂ ಬೆಳಗುತ್ತದೆ. ಹಾಗೆಯೇ ಪುಣ್ಯ-ಪಾಪಗಳ ಸಮಿಶ್ರಣ ರೂಪದಿಂದಲೇ ಈ ಶರೀರ ಉಂಟಾಗಿದೆ. ಯಾವುದೂ ಅತಿಯಾಗಬಾರದು ದೇಹ ಭಾವ ಅಳಿದು ಹೋಗಬೇಕಾದರೆ ಮನಸ್ಸನ್ನು ನಿಯಂತ್ರಿಸಬೇಕು. ಈ ಮನಸ್ಸನ್ನು ಹಿಡಿತದಲ್ಲಿರಿಸಲು ಕೇವಲ ಶರೀರವನ್ನು ದಂಡಿಸಿದರೆ ಸಾಲದು ಮನದ ಕಾಮನೆಗಳನ್ನು ನಿಯಂತ್ರಿಸಬೇಕು. ಇದು ಭಕ್ತಿಯಿಂದ ಸಾಧ್ಯವಾಗುತ್ತದೆ ದೇವನ ನೆನಹೆಂಬ ಪಾಶದಿಂದ ಮನವನ್ನು ಕಟ್ಟಿದಾಗ ದೇಹ ಬಿಡುವ ಮುನ್ನವೇ ದೇವನಾಗುತ್ತಾನೆ ಎಂದು ಅನೇಕ ದ್ರಷ್ಟಾಂತಗಳ ಮೂಲಕ ತಿಳಿಸಿದರು.

ಎಸ್.ಬಿ. ಬರಗುಂಡಿ ಅವರು ಎಲ್ಲರಿಗೂ ವಿದಿತವಾಗಿರುವಂತೆ ಎಣ್ಣೆ ಬತ್ತಿಗಳಿಂದ ಜ್ಯೋತಿ, ಪುಣ್ಯ ಪಾಪಗಳಿಂದಾಗಿ ದೇಹ ಉಂಟಾಗಿರುವಂತೆ ಶರೀರ ಪ್ರಾಣಗಳಿಂದಾಗಿ ಜೀವಾತ್ಮ ನೆನೆಸಿಕೊಳ್ಳುತ್ತಾನೆ. ಪರಶಿವನ ಅಂಶವೇ ಆಗಿರುವ ತನಗೆ ಎಲ್ಲಿಯವರೆಗೆ ಶರೀರವಿದೆಯೋ ಅಲ್ಲಿಯವರೆಗೆ ಜನನ ಮರಣ ಹಸಿವು ನೀರಡಿಕೆ ಇತ್ಯಾದಿಗಳು ಇರುತ್ತವೆ. ಜೊತೆಗೆ ನಾನು ನನ್ನದೆಂಬ ಮೋಹ ಮಮಕಾರಗಳಿಂದಾಗಿ ಮಾಯಾ ಆವರಣ ಉಂಟಾಗುತ್ತದೆ.

ತನುವನ್ನು ಹೊಂದಿರುವವರೆಗೆ ಅದರಿಚ್ಚೆಯನ್ನು ಸಲ್ಲಿಸುವುದು ಕೂಡ ಮುಖ್ಯವೆ ಆಗುತ್ತದೆ. ಹಸಿವು ನೀರಡಿಕೆಗಳಿಂದ ಮನುಷ್ಯ ಕಂಗೆಡುತ್ತಾನೆ. ಅದನ್ನು ತುಂಬಿಸಲೆಂದೇ ಹೋರಾಡುತ್ತಾನೆ ಇದು ಅತಿ ಆದಾಗ ಕಳವು ಸುಳ್ಳು ಮೊದಲಾದವುಗಳಿಗೆ ಬಲಿಯಾಗುತ್ತಾನೆ.

ಇಂಥ ಒಡಲ ಇಚ್ಛೆಯನ್ನು ಪೂರ್ತಿ ಅಲಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಅದರ ಪೋಷಣೆ ಮಾಡುವಾಗ ನಾವು ವಿಷಯ ಸುಖಿಗಳಾಗಿರದೆ ಪ್ರಸಾದ ಸುಖಿಗಳಾಗಿರಬೇಕು ಈ ಪ್ರಸಾದವು ಕಾಯಕ ದಾಸೋಹದಿಂದ ಸಾಧ್ಯವಾಗುತ್ತದೆ. ಇದು ದೇಹಾಂತ್ಯ ಪೂರ್ವವೇ ಆಗಬೇಕು. ಅರಿವು ಆಚಾರಗಳನ್ನು ಒಂದುಮಾಡಿ ನಡೆದುಕೊಳ್ಳುವುದೇ ಭಕ್ತಿ. ಇಂಥ ಭಕ್ತಿ ಆತನನ್ನು ಐಕ್ಯಸ್ಥಲದವರೆಗೆ ಕರೆದುಕೊಂಡು ಹೋಗಿ ಶಿವನಲ್ಲಿ ಸಮರಸವಾಗಿರಿಸುತ್ತದೆ. ಆಗ ಆತನೇ ದೇವನಾಗಿರುತ್ತಾನೆ ಎಂಬುದನ್ನು ಈ ವಚನ ಬಿಂಬಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮವು ಸಾಮೂಹಿಕ ವಚನ ಪಠಣದೊಂದಿಗೆ ಪ್ರಾರಂಭವಾಯಿತು. ಸ್ವಾಗತ ಹಾಗೂ ಶರಣು ಸಮರ್ಪಣೆಯನ್ನು ಶರಣ ಮುರುಗೇಶ ಶೇಖಾ ಅವರು ನಡೆಸಿಕೊಟ್ಟರು.

ಪುತ್ರಪ್ಪ ಬೀಳಗಿ, ರಾಚಣ್ಣ ಕೆರೂರ, ಬಸಲಿಂಗಯ್ಯ ಕಂಬಾಳಿಮಠ, ರಾಚಪ್ಪ ಯಂಡಿಗೇರಿ, ಬಸವರಾಜ ಖಂಡಿ, ಪಾಂಡಪ್ಪ ಕಳಸಾ, ದಾಕ್ಷಾಯಿಣಿ ತೆಗ್ಗಿ, ಸುಲೋಚನ ಹಿರೇಮಠ, ಗೀತಾ ತಿಪ್ಪಾ ಮೊದಲಾದವರು ಉಪಸ್ಥಿತರಿದ್ದರು.                  

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಓಂಶ್ರೀಗುರುಬಸವಲಿಂಗಾಯನಮಃ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜನ್ಮ ತಪೋಭೂಮಿಹೊಸಕೇರಿಬಸವನಗರ ಅಂಚೆ.ಮು ತಿಮ್ಮಾಪೂರ ತಾ.ರಾಮದುರ್ಗ ಜಿ.ಬೆಳಗಾವಿ ಶ್ರೀ ಮ.ನಿ.ಪ್ರ.ಸ್ವ.ಜ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅಸೂಟಿ ಅರಹಟ್ಟಿ ಮೆಣಸಗಿ ಖಜೂರಿ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಾಹಿತ್ಯ
    ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು. ಎನ್ನ ಜೀವಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು. ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು. ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು. ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ, ನಿಜಗುರು ಶಂಕರದೇವಾ.ಎರಳೆ ಯತಿಯಂತೆ, ಕಾಕ ಪಿಕದಂತಿರಬೇಡವೆ?
    ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ
    ಬಳಲುವರ ಕಳ ಹೇಸಿಕೆಯ ನೋಡಾ!
    ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ.
    ಅರಿದಡೆ ಶರಣ, ಮರೆದಡೆ ಮಾನವ.
    ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ
    ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ.ಕಾಯದ ಮದವಳಿದಲ್ಲದೆ ಮಾಯಾವಿಕಾರವಳಿಯದು.
    ಮಾಯಾವಿಕಾರವಳಿದಲ್ಲದೆ ಭವನಾಶವಾಗದು.
    ಭವನಾಶವಾದಲ್ಲದೆ ಲಿಂಗಸಂಬಂಧವಳವಡದು.
    ಲಿಂಗಸಂಬಂಧವಳವಟ್ಟಲ್ಲದೆ ಸುಖವು ಸಾಧ್ಯವಾಗದು.
    ಪರಮಸುಖ ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇ ಬೇಕು.
    ಮಹಾನುಭಾವಿಗಳ ಸಂಗದಿಂದಲ್ಲದೆ ವಿಶ್ರಾಮವಿಲ್ಲ.
    ಇಂತಪ್ಪ ಮಹಾನುಭಾವದ ಮೂರ್ತಿ
    ಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು ಕಾಣಬಂದಿತ್ತು.
    ಇದು ಕಾರಣ, ನಿಜಗುರು ಶಂಕರದೇವರ ಶರಣ
    ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ.ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ,
    ಮಥನವಿಲ್ಲಾಗಿ ಭಾವವಿಲ್ಲ, ಭಾವವಿಲ್ಲಾಗಿ ಬಯಕೆಯಿಲ್ಲ,
    ಬಯಕೆಯಿಲ್ಲಾಗಿ ನಿರ್ಭಾವ ನಿಜವನೈದಿ,
    ನಿಜಗುರು ಶಂಕರದೇವರೆಂಬುದು ತಾನಿಲ್ಲ.ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
    ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
    ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
    ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
    ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
    ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
    ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
    ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
    ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
    ನಿಜಗುರು ಶಂಕರದೇವಾ. ವಿಶ್ವಬಸವಧರ್ಮ ಅರಿವಿನ ಮಹಾಮನೆಯ ಸಂಸ್ಕಾರ ನೀಡುವ ಮೂಲಕ ದಿವ್ಯಪಥ ಲೋಕಹಿತ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಂವಿಧಾನ ಸದಾಕಾಲ ಪ್ರಸ್ತುತ ಜಾತಿಸೂತಕ ಜನನಸೂತಕ ಪ್ರೇತಸೂತಕ
    ಉಚ್ಛಿಷ್ಟಸೂತಕ ರಜಃಸೂತಕವೆಂಬ ಪಂಚಸೂತಕವನತಿಗಳೆದಾತನಾಗಿ,
    ಲಿಂಗಾಚಾರ ಸದಾಚಾರ ಭಕ್ತ್ಯಚಾರ ಶಿವಾಚಾರ
    ಗಣಾಚಾರವೆಂಬ ಪಂಚಾಚಾರನಿಷ್ಠನಾಗಿ,
    ದಾಸತ್ವ ವೀರದಾಸತ್ವ ಭೃತ್ಯತ್ಬ ವೀರಭೃತ್ಯ[ತ್ವ] ಸಮಯಾಚಾರತ್ವ
    ಸಕಲಾವಸ್ಥಾತ್ವಂಗಳೆಂಬ ಷಡ್ಚಿಧ ಸಜ್ಜನತ್ವಯುಕ್ತನಾಗಿ,
    ದೇಶ ಕಾಲ ಕಲ್ಪತಾದಿ ಲೌಕಿಕಾಚಾರಂಗಳಂ ಮೀರಿ ಸ್ವತಂತ್ರಶೀಲನಾಗಿ,
    ಶಿವಾತ್ಮರ್ಗೆ ಭೇದಭ್ರಾಂತಿದೋರದಾತನಾಗಿ,
    ಉಪನಿಷದ್ವಾಕ್ಯ ಜನಿತ ವಿದ್ಯೆಯಲ್ಲಿ ರಮಿಸುವ
    ಶಿವನಪ್ಪುದರಿಂ ತತ್ಸಂಜ್ಞೆಯುಳ್ಳಾತನಾಗಿ,
    ಜಗತ್ಪೂಜ್ಯನಾಗಿಪ್ಪಾತನೆ ವೀರಶೈವನಪ್ಪನಯ್ಯಾ
    ಶಾಂತವೀರೇಶ್ವರಾ.
    ಬಳಿಕಾ ವೀರಶೈವನೆ ಕ್ರಿಯಾಭೇದದಿಂ
    ಸಾಮಾನ್ಯ ವೀರಶೈವನೆಂದು,
    ವಿಶೇಷ ವೀರಶೈವನೆಂದು
    ನಿರಾಭಾರಿವೀರಶೈವನೆಂದು ತ್ರಿವಿಧಮಾಗಿರ್ಪನವರಲ್ಲಿ
    ಶ್ರೀಗುರುವಿನ ಹಸ್ತಮಸ್ತಕಸಂಯೋಗದಿಂ
    ವಿಭೂತಿಯಪಟ್ಟದಿಂ ಶಿವಮಂತ್ರೋಪದೇಶದಿಂ
    ಲಿಂಗಾಂಗಸಂಗಿಯಾಗಿ,
    ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿಗಳಲ್ಲಿ
    ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ
    ತ್ರಿಕಾಲಮಾದೊಡಂ ಲಿಂಗಾರ್ಚನಾಸಕ್ತನಾಗಿ,
    ಗುರುಲಿಂಗಭಸಿತಂಗಳಲ್ಲಿ ಭಕ್ತಿಯುಕ್ತನಾಗಿಪ್ಪಾತನೆ
    ಸಾಮಾನ್ಯ ವೀರಶೈವನಪ್ಪನಯ್ಯ
    ಶಾಂತವೀರೇಶ್ವರಾ.
    ಅಂತರಾತ್ಮ ಪರಮಾತ್ಮ ಭೂತಾತ್ಮವೊಳಗಾದ ಆಧ್ಯಾತ್ಮಿ ಕೇಳಾ:
    ನೀನು ಯೋಗದ ಪ್ರಮಾಣ ಬಲ್ಲ ಅಯ್ಯನು
    ಶ್ರೋತ್ರೇಯ ಮನೆಯಲ್ಲಿ, ನೇತ್ರೆಯ ಜಿಹ್ವೆಯಲ್ಲಿ,
    ಆನಂದ ಪಾತ್ರೆಯಲ್ಲಿ
    ಸಂಗತಿ ಸದಾಚಾರ ನಿಷ್ಕಳ ಪರಮಸೀಮೆ ಎಂಬ ಪಾತ್ರೆಯಲ್ಲಿ
    ಪಂಚಬ್ರಹ್ಮವನೊಡಗೂಡಿದ ಪಂಚಸ್ತ್ರೀಯರಿಗೆ ಪ್ರಸಾದವನಿಕ್ಕುವಾಗ
    ಪ್ರಸನ್ನತೆಯೆಂಬ ಪ್ರಸಾದವನನುಗ್ರಹಿಸಲರಿಯದೆ
    ಇದ್ದ ಕಾರಣ ಅಂತರಿಸಿದೆಯಯ್ಯಾ
    ಆದ್ಯಂತಪ್ರಸಾದವ ಕೊಂಡ ಕಾರಣದಲ್ಲಿ ಆನು ನೀನಾದೆ;
    ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಸಂದಳಿದೆ. ಶ್ರೀ ಮ.ನಿ.ಪ್ರ.ಸ್ವ.ಜ ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ಅಸೂಟಿಶ್ರೀಫಲಹಾರ ಶಿವಯೋಗಿಗಳವರ ತಪೋಭೂಮಿಹೊಸಕೇರಿಬಸವನಗರ ಅಂಚೆ ಮು ತಿಮ್ಮಾಪೂರ ತಾ.ರಾಮದುರ್ಗ ಜಿಲ್ಲೆ.ಬೆಳಗಾವಿ ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಹೊಸಕೇರಿಬಸವನಗರ

Leave a Reply

Your email address will not be published. Required fields are marked *