ತಿಳಿಯುವ ಭಾಷೆಯಲ್ಲಿ ವಚನ ರಚಿಸಿ ಮಾರ್ಗದರ್ಶನ ಮಾಡಿದ ಶರಣರು

ಬಸವ ಮೀಡಿಯಾ
ಬಸವ ಮೀಡಿಯಾ

ರಬಕವಿ-ಬನಹಟ್ಟಿ:

ಬಸವಾದಿ ಶರಣರು ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು ಎಂದು ಉಪನ್ಯಾಸಕ ಡಾ. ಸಿದ್ದರಾಮ ಖಾನಾಪುರ ಹೇಳಿದರು.

ಅವರು ರಬಕವಿಯ ಶಿವದಾಶಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಶ್ರೀ ವಿಜಯ ಮಹಾಂತೇಶ್ವರ ಮಠದ 3ನೇ ತೈಮಾಸಿಕ ಶಿವಾನುಭವ ಗೋಷ್ಟಿಯಲ್ಲಿ ಮಾತನಾಡಿದರು.

ಶರಣರು ಜಗತ್ತಿನ ಕಾಯಕ, ದಾಸೋಹ, ಸಮಾನತೆ, ಸಹೋದರತೆ ಮತ್ತು ನೈತಿಕತೆಯ ಮೌಲ್ಯಗಳು ಬೋಧಿಸಿದರು. ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರ ಮತ್ತು ಮೌಡ್ಯಾಚರಣೆಗಳನ್ನು ಖಂಡಿಸಿ ವೈಚಾರಿಕ ಚಿಂತನೆಯನ್ನು ಮಂಡಿಸಿದರು.

ಕಾಯಕ ಮತ್ತು ದಾಸೋಹ ವಿಚಾರಗಳು ಸಮಾಜದಲ್ಲಿ ಸಮಾನತೆಯನ್ನು ತರಲು ಬಹಳ ಪ್ರಮುಖ ವಿಚಾರಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸಮಸಮಾಜ ನಿರ್ಮಾಣ ಮಾಡಲು ಬಸವಾದಿ ಶರಣರ ವಚನಗಳು ಸದಾ ಪ್ರಸ್ತುತವಾಗಿವೆ ಎಂದು ಖಾನಾಪುರ ಹೇಳಿದರು.

ಕಾರ್ಯಕ್ರಮದಲ್ಲಿ ರಬಕವಿಯ ಮರೆಗುದ್ದಿ ಮಹಾಂತ ಮಠದ ಗುರುಮಹಾಂತ ಸ್ವಾಮಿಗಳು ಸಾನಿಧ್ಯವನ್ನು ವಹಿಸಿ ಮಾತನಾಡಿದರು. ರಬಕವಿ ಮರೆಗುದ್ದಿ ಬುದ್ಧಿಯ ಮಹಾಂತ ಮಠದ ನೀಲವಿಜಯ ಮಹಾಂತಮ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಚಿತ್ರಕಲಾವಿದ ಮಹದೇವ ಕವಿಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಈರಣ್ಣಾ ಗುಣಕಿ, ಬಸವರಾಜ ತೇರಣಿ, ಚಿದಾನಂದ ಸೊಲ್ಲಾಪುರ, ಶಂಕರ ಅರಬಳ್ಳಿ, ಬಸವರಾಜ ದುಂಬಾಳಿ, ಮೃತ್ಯುಂಜಯ ರಾಮದುರ್ಗ, ಉಮದಿ, ಜತ್ತಿ, ಮಹಾದೇವಿ ಗುದಗೆಪ್ಪನವರ, ಮುಂಡಗನೂರ, ಗುಣಕಿ ಸೇರಿದಂತೆ ಹಲವಾರು ಶರಣ ಶರಣೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *