ಬಸವಕಲ್ಯಾಣ: ಜೂನ್ 28 ರಾಷ್ಟ್ರೀಯ ಬಸವದಳದ ಮಹತ್ವದ ಸಭೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಜೂನ್ 28 ಬಸವಕಲ್ಯಾಣದಲ್ಲಿ ಮಹತ್ವದ ಸಮಾಲೋಚನೆ ಸಭೆಯನ್ನು ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಕರೆದಿದ್ದಾರೆ.

ಬಸವ ಧರ್ಮಪೀಠದ ಮಹಾಮನೆಯ ಸಭಾಭವನದಲ್ಲಿ
ನಡೆಯಲಿರುವ ಸಭೆಗೆ ಬರುವಂತೆ ಎಲ್ಲಾ ಬಸವಪರ ಸಂಘಟನೆಗಳ ಮುಖಂಡರಿಗೆ ಅಹ್ವಾನ ನೀಡಲಾಗಿದೆ, ಎಂದು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನೇರಿ ಸ್ವಾಮಿಯವರಿಗೆ ಬಸವಕಲ್ಯಾಣದಲ್ಲಿ ಬಸವತತ್ವದ ವಿರುದ್ಧ ಮಾತನಾಡದಂತೆ ಸೂಕ್ತ ಕಡಿವಾಣ ಹಾಕಿರುವ ಉಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸಿ, ರಾಷ್ಟ್ರೀಯ ಬಸವದಳವು ಯಾವುದೇ ರೀತಿಯ ಪ್ರತಿಭಟನೆ ನಡೆಸದಿರಲು ನಿರ್ಧರಿಸಿದೆ.

ಆದರೂ ಸಭೆಯಲ್ಲಿ ಮುಂದಿನ ನಡೆ ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು ಗಂಭೀರವಾಗಿ ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *