ಬೀದರ್
ಬಸವಕಲ್ಯಾಣದಲ್ಲಿ ಇಂದು ನಡೆಯಲಿರುವ ಹಿಂದೂ ಸಮಾವೇಶಕ್ಕೆ ಲಿಂಗಾಯತ, ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮದ ವಿವಿಧ ಒಳಪಂಗಡಗಳ ಮಠಾಧೀಶರು ಹಾಗೂ ಸದಸ್ಯರು ಹೋಗಬಾರದು ಎಂದು ಲಿಂಗಾಯತ ಮುಖಂಡರು ಮತ್ತು ಧಾರ್ಮಿಕ ಗಣ್ಯರು ಪ್ರಕಟನೆ ಮೂಲಕ ಮನವಿ ಮಾಡಿದ್ದಾರೆ.
ಸಮಾವೇಶವು ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಬಿಗಿ ಭದ್ರತೆಯ ನಡುವೆ ನಡೆಯಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ರಿಸರ್ವ್ ಪೊಲೀಸ್ ಮತ್ತು ಸಶಸ್ತ್ರಪಡೆಗಳನ್ನು ನಿಯೋಜಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದ ಆಯೋಜಕರಿಗೆ ನ್ಯಾಯಾಲಯದ ನಿರ್ದೇಶನದಂತೆ ಅತಿಥಿಗಳು, ಭಾಗವಹಿಸುವವರ ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ಹೇಳಲಾಗಿದೆ.
ಕಾರ್ಯಕ್ರಮಕ್ಕೆ ಅನುಮತಿ ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಮಾವೇಶವು ಲಿಂಗಾಯತ ಅಥವಾ ವೀರಶೈವ ಸಮುದಾಯದ ಸಮಾವೇಶವಲ್ಲ ಸಮುದಾಯದ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಲಿಂಗಾಯತ ಸಮುದಾಯದವರು ಹಾಗೂ ಬಸವ ಅಭಿಮಾನಿಗಳು ಸಮಾವೇಶಕ್ಕೆ ತೆರಳದಂತೆ ಮನವಿ ಮಾಡಲಾಗಿದೆ.
ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ, ಪೂಜ್ಯ ಸಿದ್ಧರಾಮ ಶರಣರು ಬೆಲ್ದಾಳ, ಪೂಜ್ಯ ಸತ್ಯಾದೇವಿ ಮಾತಾಜಿ, ಲಿಂಗಾಯತ ಸಮನ್ವಯ ಸಮಿತಿಯ ಶ್ರೀಕಾಂತ್ ಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ್ ಬುಳ್ಳಾ ಹಾಗೂ ವಿಶ್ವಕ್ರಾಂತಿ ದಿವ್ಯ ಪೀಠದ ಓಂಪ್ರಕಾಶ್ ರೊಟ್ಟಿ ಅವರು ಪ್ರಕಟನೆಯಲ್ಲಿ ಸಹಿ ಹಾಕಿದ್ದಾರೆ.

ಈ ಸಮಾವೇಶವು ಬಸವಾದಿ ಪ್ರಮಥರ ವಿರೋಧಿ ಸಮಾವೇಶ,ಕನೇರಿಯ ಹೊಲಸು 😛 ಯ ಸಮಾವೇಶ,ಲಿಂಗಾಯತ ಧರ್ಮದ ಅಪ್ಪಟ ವಿರೋಧಿಗಳು ಹಮ್ಮಿಕೊಂಡಿರುವ ಸಮಾವೇಶ, ಇದಕ್ಕೆ ನಮ್ಮ ಬಸವ ಭಕ್ತರ ವಿರೋಧವಿದೆ.ಅದಕ್ಕೆ ನಿಜವಾದ ಬಸವಾಭಿಮಾನಿ ಹೋಗಲೇ ಬಾರದು.