ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಸವಶಕ್ತಿ ಶಿಬಿರಗಳ ಕಾರ್ಯಸೂಚಿ ಪರಿಗಣಿಸಿ ರಾಜ್ಯವ್ಯಾಪಿ ಸಂಘಟಿಸಲು ನಿರ್ಣಯಿಸಲಾಯಿತು
ಬೆಳಗಾವಿ:
ಜಾಗತಿಕ ಲಿಂಗಾಯತ ಮಹಾಸಭಾದ 2026-27ನೇ ಸಾಲಿನ ಮೊದಲನೇ ಕೇಂದ್ರ ಕಾರ್ಯಕಾರಿ ಸಮಿತಿ ಜುಲೈ 17 ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕರಾದ ಎಸ್.ಎನ್. ಕೆಂಪಗೌಡರ ವಹಿಸಿಕೊಂಡಿದ್ದರು.

ವಚನ ಪ್ರಾರ್ಥನೆ ಬಳಿಕ ಬಸವ ಭಾವಪೂಜೆ ಹಾಗೂ ದೀಪ ಬೆಳೆಗಿಸುವುದರೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.
ಸಭೆಯ ಸುತ್ತೋಲೆ ಕಾರ್ಯಸೂಚಿಯ ಪ್ರಕಾರ ಕಾರ್ಯಕ್ರಮವನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ ಅವರು ನಡೆಸಿಕೊಟ್ಟರು.

ಸಭೆಯಲ್ಲಿ ಕೈಗೊಂಡ ಮುಖ್ಯ ನಿರ್ಣಯಗಳು:
ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಘಟಕಗಳನ್ನು ಪ್ರಾರಂಭಿಸಿ ಕೇಂದ್ರ ಕಚೇರಿಗೆ ಮಾಹಿತಿ ಸಲ್ಲಿಸಲು ಸೂಚಿಸಲಾಯಿತು.
ಬಸವ ಮಿಡಿಯಾ ಟ್ರಸ್ಟಿನಿಂದ ರಾಜ್ಯವ್ಯಾಪಿ ಬಸವಶಕ್ತಿ ಶಿಬಿರಗಳನ್ನು ಏರ್ಪಡಿಸುವ ಕುರಿತು ಚರ್ಚಿಸಲಾಯಿತು. ಶಿಬಿರದ ವಿಷಯ ಹಾಗೂ ಕಾರ್ಯಸೂಚಿಗಳನ್ನು ಪರಿಗಣಿಸಿ ಬೆಂಬಲಿಸಲು ಹಾಗೂ ಶಿಬಿರಗಳನ್ನು ಏರ್ಪಡಿಸಲು ನಿರ್ಧರಿಸಲಾಯಿತು.

ಮಹಾರಾಷ್ಟ್ರ ರಾಜ್ಯದ ಏಳು ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳಿದ್ದು ಉಳಿದ ಜಿಲ್ಲೆಗಳಲ್ಲಿ ಘಟಕಗಳನ್ನು ಪ್ರಾರಂಭಿಸಿ ಪದಾಧಿಕಾರಿಗಳ ಯಾದಿಯನ್ನು ಕೇಂದ್ರ ಕಚೇರಿಗೆ ಕಳಿಸಲು ಸೂಚಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಆದಷ್ಟು ಬೇಗ ತ್ರೈಮಾಸಿಕ / ಮಾಸಿಕ ಪತ್ರಿಕೆ ಪ್ರಕಟಿಸಲು ನಿರ್ಧರಿಸಲಾಯಿತು.

ಸ್ವತಂತ್ರ ಧರ್ಮದ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.
ಸಂಘಟನೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು, ಬಸವಾದಿ ಶರಣರ ಕುರಿತು ವಚನ ಸಾಹಿತ್ಯವನ್ನು ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡಲು ಎಲ್ಲ ಘಟಕಗಳ ಅಧ್ಯಕ್ಷರುಗಳಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ಕೆಂಪಗೌಡರ ಅವರು ಸಂಪಾದಿಸಿದ “ಲಿಂಗಾಯತ ಸ್ವತಂತ್ರ ಧರ್ಮವಲ್ಲವೇ?” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ರಾಷ್ಟ್ರೀಯ ಉಪಾಧ್ಯಕರುಗಳಾದ ಮೈಸೂರಿನ ಮಹಾದೇವಪ್ಪ, ಬೀದರಿನ ಬಸವರಾಜ ಬುಳ್ಳಾ, ಬೆಂಗಳೂರಿನ ಜಿ.ಬಿ. ಪಾಟೀಲ, ಬೀದರಿನ ಬಸವರಾಜ ಧನ್ನೂರ, ಮಹಾರಾಷ್ಟ ರಾಜ್ಯದ ಜೆಎಲ್ ಎಂ ಅಧ್ಯಕ್ಷರಾದ ರಾಜಶೇಖರ ತಂಬಾಕೆ, ಪ್ರಧಾನ ಕಾರ್ಯದರ್ಶಿ ಬಸವರಾಜ ಕನಜೆ, ಮಹಾರಾಷ್ಟ್ರ ಮಹಿಳಾ ಘಟಕದ ಅಧ್ಯಕ್ಷೆ ಸರಳಾತಾಯಿ ಪಾಟೀಲ, ಕೊಲ್ಲಾಪೂರ ಘಟಕದ ಮಹಿಳಾ ಘಟಕದ ಅಧ್ಯಕ್ಷೆ ರಜನೀತಾಯಿ ಮಗದುಂ, ತೆಲಂಗಾಣದ ಕೆ. ಪರಮೇಶ್ವರಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಧಾರವಾಡದ ಪ್ರಭಣ್ಣ ನಡಕಟ್ಟಿ, ಜಿ.ಬಿ ಹಲ್ಯಾಳ, ಬೆಂಗಳೂರಿನ ಎ.ಪಿ. ಬಸವರಾಜ, ವಿಜಯಪುರದ ಡಾ. ಜೆ. ಎಸ್.ಪಾಟೀಲ ವೇದಿಕೆಯ ಮೇಲಿದ್ದರು.
ಯಶ್ ಅಂಬೋಳೆ, ವಿಜಯ ಪಾಟೀಲ ಭಾಷಾ ಅನುವಾದಕರಾಗಿ ಕಾರ್ಯನಿರ್ವಹಿಸಿದರು.

ಪುಷ್ಪ ಲಿಂಗದಳ್ಳಿ, ಸವಿತಕ್ಕ ನಡಕಟ್ಟಿ, ಆರ್. ಶೈಲಜಾ, ಜಿ.ಬಿ. ನಾಗಭೂಷಣ, ಕೆ.ಎಸ್. ಚಟ್ಟಿ, ಆರ್.ಜಿ. ಶಟಗಾರ, ಗಂಗಾಧರಪ್ಪ ಶಿವಪುರ, ಬಸವರಾಜ ಎಂ., ಶಿವಯೋಗಿ ಎಂ. ಪಟ್ಟಣಶೆಟ್ಟಿ, ಸಿ.ಜಿ. ಪಾಟೀಲ, ಜಗನ್ನಾಥ ಪನ್ಸಾಳೆ, ನಿಜಗುಣಮೂರ್ತಿ, ಅಶೋಕ ಮಳಗಲಿ, ಸಿ.ಎಂ. ಬೂದಿಹಾಳ, ಪ್ರವೀಣ ಕುಮಾರ ಚಿಕಲಿ, ರತ್ನಾ ಬೆಣಚನಮರಡಿ, ಸುಜಾತ ಮತ್ತಿಕಟ್ಟಿ, ಗೌರಕ್ಕ ಬಡಿಗಣ್ಣವರ, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

This is excellent move. Best wishes for Basava Media team for hosting Basava Shakti Shibira in all the districts. Lingayat community should become politically sound and understand the impact of choosing the right electoral candidate in their constituency. Being apolitical is not an option for anyone. We must get involved and participate in the change we want to see in our society, state and nation at large. Om Guru Basava Lingaiah Namah 🙏