ಬಸವಕಲ್ಯಾಣ:
ಇಲ್ಲಿನ ಅನುಭವಮಂಟಪದಲ್ಲಿ ತಿಂಗಳ ಅನುಭವಮಂಟಪ 19 ಕಾರ್ಯಕ್ರಮ ಹಾಗೂ ‘ತಾನೇ ದೇವ’ ಗ್ರಂಥ ಲೋಕಾರ್ಪಣೆ ಸಮಾರಂಭ ಶುಕ್ರವಾರ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಯಿತು.
ಪೂಜ್ಯ ಶಿವಾನಂದ ಸ್ವಾಮಿಗಳು, ಸಂಚಾಲಕರು, ಅನುಭವಮಂಟಪ, ಪೂಜ್ಯ ಮಾತೆ ಸುಗುಣಾದೇವಿತಾಯಿ, ಅನುಭವಮಂಟಪ ಅವರು ಸಮ್ಮುಖ ವಹಿಸಿದ್ದರು.
ಪೂಜ್ಯ ಶಂಕರಲಿಂಗ ಸ್ವಾಮಿಗಳು ದುಮ್ಮನಸೂರು, ಪೂಜ್ಯ ಅನೀಲ ಮಹಾರಾಜರು ಉಪಸ್ಥಿತರಿದ್ದರು.
ಬೆಳಗಾವಿಯ ಶಿವಯೋಗ ಸಾಧಕರಾದ ಶ್ರೀಧರ ಮುರಾಳೆ ಅನುಭಾವ ನೀಡುತ್ತ, ಚೆನ್ನಬಸವಣ್ಣನವರ ಸ್ವರವಚನಗಳು ಆಧ್ಯಾತ್ಮಿಕ ಆಳ, ವಿಶಿಷ್ಟ ಅನುಭಾವ ಹಾಗೂ ಕಠಿಣ ಶೈಲಿಗೆ ಹೆಸರುವಾಸಿಯಾಗಿದ್ದು, ಇವು ಶರಣ ಸಾಹಿತ್ಯದಲ್ಲಿ ಜ್ಞಾನದೀವಿಗೆಯಂತಿವೆ.

ಬಸವಣ್ಣನವರ ಸೋದರಳಿಯನಾದ ಚೆನ್ನಬಸವಣ್ಣನವರು ತಮ್ಮ ಕಿರಿಯ ವಯಸ್ಸಿನಲ್ಲಿಯೇ ಲಿಂಗಾಯತ ಧರ್ಮದ ತತ್ವಗಳನ್ನು ಆಳವಾಗಿ ಪ್ರತಿಪಾದಿಸಿದ್ದಾರೆ. ಇವರ ವಚನಗಳ ಅಂಕಿತನಾಮ ಕೂಡಲಚೆನ್ನಸಂಗಮದೇವ ಎಂದಿದೆ.
ಕೇವಲ ಭಕ್ತಿಗೆ ಸೀಮಿತವಾಗದೆ, ಅರಿವು ಮತ್ತು ಆಚಾರಗಳ ಸಮ್ಮಿಲನವನ್ನು ಇವರ ಸ್ವರ ವಚನಗಳು ಎತ್ತಿ ತೋರಿಸುತ್ತವೆ. ಇವರ ವಚನಗಳಲ್ಲಿ ಬರುವ ತಾಂತ್ರಿಕ ಹಾಗೂ ಆಧ್ಯಾತ್ಮಿಕ ಪರಿಭಾಷೆಗಳು ಓದುಗರಿಗೆ ಒಂದು ವಿಶಿಷ್ಟ ಅನುಭಾವವನ್ನು ನೀಡುತ್ತವೆ.
ಜಾತಿ-ಭೇದಗಳನ್ನು ವಿರೋಧಿಸಿ, ಮಾನವೀಯ ಮೌಲ್ಯ ಹಾಗೂ ಲಿಂಗದ ನಿಜವಾದ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಇವರ ವಚನಗಳು ಸಫಲವಾಗಿದೆ ಎಂದು ತಮ್ಮ ಅನುಭಾವವನ್ನು ಮುರಾಳೆ ಹಂಚಿಕೊಂಡರು.
ಶರಣ ರಾಹುಲ ಇಜಾರೆ, ಸೋಮನಾಥ ಯಾಳವಾರ, ಕರುಣಾ ಸಲಗರ, ಬಸವರಾಜ ರುದ್ರವಾಡಿ, ಸಿದ್ದಣ್ಣ ಬುಮಾ, ಶೋಭಾ ಔರಾದೆ, ಸುನೀತಾ ಪಾಟೀಲ, ಸಹನಾ ಮೂಲಗೆ, ಚನ್ನಬಸಪ್ಪ ವಡ್ಡನಕೇರಿ, ಮಲ್ಲಿಕಾರ್ಜುನ ಸಂಗಮಕರ, ಶರಣಬಸಪ್ಪ ಪಾರಾ, ಮಲ್ಲಕಾರ್ಜುನ ರಟಕಲ್ಲ ಉಪಸ್ಥಿತರಿದ್ದರು.
ಆಶೋಕ ಕುಂಬಾರ ಸ್ವಾಗತಿಸಿದರು. ವಿಶ್ವನಾಥ ಮುಕ್ತಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶೋಭಾ ಔರಾದ ಅವರು ರಚಿಸಿದ ತಾನೇ ದೇವ ಗ್ರಂಥ ಶ್ರೀಧರ ಮುರಾಳೆ ಅವರು ಲೋಕಾರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
