ಕೊಪ್ಪಳ :
ಗಂಗಾವತಿಯಲ್ಲಿ ನಡೆಯುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸಲು ಒತ್ತಾಯಿಸಿ ಜಿಲ್ಲೆಯ ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿವೆ.
ಶುಕ್ರವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಮಹಾರಾಷ್ಟ್ರದ ಕನ್ನೇರಿಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಬಸವತತ್ವ ದ್ರೋಹಿಗಳು ಆಗಿದ್ದಾರೆ. ಈ ಹಿಂದೆ ನಡೆದ ಬಸವ ಸಂಸ್ಕೃತಿ ಅಭಿಯಾನಕ್ಕೆ ಮತ್ತು ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ ಮತ್ತು ಅಸಂವಿಧಾನಿಕ ಭಾಷೆಯನ್ನು ಬಳಸಿ ಅಪಮಾನ ಮಾಡಿದ್ದಾನೆ.
ಈತನಿಗೆ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ನೀನು ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿವೆ.
ಈ ಸ್ವಾಮಿಯು ೦೩-೧೧-೨೦೨೬ ರಂದು ಜಿಲ್ಲೆಯ ಗಂಗಾವತಿ ನಗರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಹೆಸರಿನ ಮುಖಾಂತರ ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸುವುದು ಮತ್ತು ಬಸವಾದಿ ಶರಣರ ವಚನಗಳನ್ನು ತಿರುಚುವ, ಅಪಪ್ರಚಾರ ಮಾಡುವ ಕೆಲಸವನ್ನು ಮಾಡಲು ಬರುತ್ತಿದ್ದಾನೆ.

ಈ ಸ್ವಾಮೀಜಿಗೆ ವಿಜಯಪುರ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ಪ್ರವೇಶವನ್ನು ಈ ಹಿಂದೆ ನಿರ್ಬಂಧಿಸಲಾಗಿತ್ತು. ಶಾಂತಿಭಂಗ ಮಾಡುವ, ಕೋಮುಗಲಭೆ ಎಬ್ಬಿಸುವ, ಜನರ ಮದ್ಯೆ ಕೋಮು ವಿಷಬೀಜ ಬಿತ್ತುವ ಈ ಸ್ವಾಮೀಜಿ ನಡೆಸುವ ಗಂಗಾವತಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಮತ್ತು ಕೊಪ್ಪಳ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ವಿವಿಧ ಬಸವಪರ ಸಂಘಟನೆಗಳಿಂದ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಸಂಗಮೇಶ ಕಲಹಾಳ, ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಜೇಶ ಸಸಿಮಠ, ತಾಲೂಕ ಕಾರ್ಯದರ್ಶಿ ಶರಣಬಸವನಗೌಡ ಪಾಟೀಲ, ವಿಶ್ವಗುರು ಬಸವೇಶ್ವರ ಟ್ರಸ್ಟಿನ ಉಪಾಧ್ಯಕ್ಷ ಗಾಳೆಪ್ಪ ಕಡೆಮನಿ, ಪ್ರಧಾನ ಕಾರ್ಯದರ್ಶಿ ಬಾಪುಗೌಡ ಪಾಟೀಲ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶಿವಬಸಯ್ಯ ವೀರಾಪೂರ, ಯಲಬುರ್ಗಾ ತಾಲೂಕಾ ಕಾರ್ಯದರ್ಶಿ ಯಮನೂರಪ್ಪ ಹಳ್ಳೇರ, ಜೆ.ಎಲ್.ಎಂ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅರ್ಚನಾ ಸಸಿಮಠ, ಬಸವ ಸಂಘಟನೆಯ ಮುಖ್ಯಸ್ಥರಾದ ಶಿವಸಂಗಪ್ಪ ವಣಗೇರಿ, ಮುತ್ತಣ್ಣ ಬೀರಲದಿನ್ನಿ, ಶೇಖರ ಇಂಗಳದಾಳ ಮತ್ತಿತರರು ಭಾಗವಹಿಸಿದ್ದರು.

ಒಳ್ಳೆಯ ವಿಚಾರ ಬಸವಣ್ಣನವರ ಅನುಯಾಯಿಗಳು ಕನ್ನೇರಿ ಸ್ವಾಮಿಗೆ ಪ್ರಭಲಾವಾಗಿಪ್ರತಿಭಟಸ ಬೇಕು
ಬಸವಣ್ಣ ಆದರೆ ಸಾಲದು, ಗಣಾಚಾರಿ ಆಗಬೇಕು.
ಪಾದ ಪೂಜೆ ಬಿಟ್ಟು, ಪಾದರಕ್ಷೆಯಲ್ಲಿ ಪೂಜೆ ಮಾಡಬೇಕು. ಅಂದರೆ ಇದಕ್ಕೊಂದು ಅಂತ್ಯ ಸಾಧ್ಯ ಇದೆ.
ಇಲ್ಲದೆ ಹೋದರೆ, ಕೈಯಲ್ಲಿ ಆಗದವ ಮೈಯೆಲ್ಲ ಪರಚಿ ಕೊಂಡಂತೆ ಈ ಎಲ್ಲಾ ಮನವಿಗಳು.