ಹುಕ್ಕೇರಿಯಲ್ಲಿ ಮಹಾದೇವ ಕುಂಬಾರ ಅವರಿಗೆ ನುಡಿ ನಮನ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಹುಕ್ಕೇರಿ:

ಲಿಂಗೈಕ್ಯ ಶರಣ ಮಹಾದೇವ ಕುಂಬಾರ ಅವರಿಗೆ ನುಡಿ ನಮನ ಕಾರ್ಯಕ್ರಮ ರವಿವಾರ ರವದಿ ಫಾರ್ಮ್ ಹೌಸ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಸನ್ನಿಧಾನವನ್ನು ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ವಹಿಸಿಕೊಂಡಿದ್ದರು.

ನೇತೃತ್ವವನ್ನು ಇಲ್ಲಿನ ವಿರಕ್ತಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು, ಪೂಜ್ಯ ಮೃತ್ಯುಂಜಯ ಶರಣರು ವಹಿಸಿದ್ದರು.

ಅಧ್ಯಕ್ಷತೆಯನ್ನು ಶರಣ ವಿಚಾರ ವಾಹಿನಿ, ಹಾರೂಗೇರಿಯ ಆಯ್.ಆರ್. ಮಠಪತಿ ಅವರು ವಹಿಸಿಕೊಂಡಿದ್ದರು.

ಷಟಸ್ಥಲ ಧ್ವಜಾರೋಹಣವನ್ನು ಬಸವತತ್ವ ಪ್ರಸಾರಕರು, ನಿವೃತ್ತ ಪ್ರಾಧ್ಯಾಪಕರಾದ ಸಿದ್ದಣ್ಣ ಲಂಗೋಟಿ ಹಾಗೂ ಡಾ. ಕಲ್ಯಾಣಮ್ಮ ಲಂಗೋಟಿ ಅವರುಗಳು ನೆರೆವೇರಿಸಿದರು.

ಮುಖ್ಯ ಅತಿಥಿಗಳಾಗಿ ಬೈಲಹೊಂಗಲದ ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ  ಡಾ. ಮಹಾಂತೇಶ ರಾಮಣ್ಣವರ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಬಸವರಾಜ ಜಿರಳಿ ಬಾಬಾ ಆಶ್ರಮ ಹುಕ್ಕೇರಿ, ಶಂಕರ ಶಿವಲಿಂಗ ಕುಂಬಾರ ಬಸವ ಯೋಗಾಶ್ರಮ ಕಬ್ಬೂರ, ಶ್ರೀಶೈಲ ಕಲ್ಲಪ್ಪ ಕುಂಬಾರ ಚಿಕ್ಕೋಡಿ, ದಿಲೀಪ ಹುಗ್ಗಿ ಜಯನಗರ ಹುಕ್ಕೇರಿ, ಡಾ. ರಾಜಶೇಖರ ಇಚ್ಚಂಗಿ ಹಿರಿಯ ಸಾಹಿತಿ, ಗಂಗಾಧರ ಪಾಟೀಲ ನಿಪ್ಪಾಣಿ, ರೇವತಿ ಪ್ರಕಾಶ ಹಿರೇಮಠ ದಂಪತಿಗಳು, ಸಿ. ಜಿ. ಪಾಟೀಲ ನಿವೃತ್ತ ಉಪನ್ಯಾಸಕರು, ಎಸ್.ಆರ್. ನಾವಲಗಿ ನಿವೃತ್ತ ಶಿಕ್ಷಕರು, ಪಿ.ಜಿ. ಕೊನ್ನೂರಿ ಉಪನ್ಯಾಸಕರು, ರಾಯಪ್ಪ ನೇರ್ಲಿ ಉಪನ್ಯಾಸಕರು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಾ. ಮಹಾಂತೇಶ ರಾಮಣ್ಣನವರ ಅವರು ದೇಹದಾನದ ಬಗ್ಗೆ ಹಾಗೂ ಮಾನವ ಅಂಗಗಳ ಬಗ್ಗೆ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು.

ಡಾ. ಸಿದ್ದಣ್ಣ ಲಂಗೋಟಿ, ಮಹಾದೇವ ಕುಂಬಾರ ಕಬ್ಬೂರ, ಗೀತಾ ಬಸ್ತವಾಡೆ ಅವರು ಲಿಂಗೈಕ್ಯ ಶರಣರ ಕುರಿತು ತಮ್ಮ ಒಡನಾಟದ ಹಾಗೂ ಅವರ ಜೀವನದ ಕುರಿತು ಸಾಂದರ್ಭಿಕವಾಗಿ ಮಾತನಾಡಿ ನುಡಿ ನಮನವನ್ನು ಸಲ್ಲಿಸಿದರು.

ನೇತೃತ್ವ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ತಮ್ಮ ಆಶೀರ್ವಚನದಲ್ಲಿ, ಕುಂಬಾರ ಶರಣರ ಹಾಗೂ ಭಾಲ್ಕಿ ಹಿರೇಮಠದ ಭಕ್ತಿ ಸಂಬಂಧಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ನುಡಿ ನಮನಗಳನ್ನು ಸಲ್ಲಿಸಿದರು.

ಸನ್ನಿಧಾನ ವಹಿಸಿದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಕೂಡ ಲಿಂಗೈಕ್ಯ ಮಹಾದೇವ ಕುಂಬಾರ ಹಾಗೂ ಭಾಲ್ಕಿ ಶ್ರೀಮಠಕ್ಕೆ ಶರಣರು ಸಲ್ಲಿಸಿದ ಸೇವೆಯ ಬಗ್ಗೆ ತಮ್ಮ ಮಾತುಗಳನ್ನಾಡಿ ನಮನ ಸಲ್ಲಿಸಿದರು.

ಲಿಂಗೈಕ್ಯ ಶರಣ ಮಹಾದೇವ ಕುಂಬಾರ ಅವರ ಪುತ್ರಿ ಶಿವಮಂಗಲಾ ಅಶೋಕ ಕುಂಬಾರ ಅವರು, ಅನುಭವ ಮಂಟಪ ಬಸವ ಕಲ್ಯಾಣ ಬಗ್ಗೆ ತಮ್ಮ ಕವನ ನಮನ ಸಲ್ಲಿಸಿದರು.

ಕುಂಬಾರ ಅವರ ಧಮ೯ಪತ್ನಿ ಮಹಾದೇವಿ ಕುಂಬಾರ ಉಪಸ್ಥಿತರಿದ್ದರು.

 ಸತೀಶ ಕಲ್ಲಪ್ಪ ಕುಂಬಾರ ವಚನ ಪ್ರಾರ್ಥನೆ ನಡೆಸಿಕೂಟ್ಟರು. ಶ್ರೀಪಾದ ಶಿವಲಿಂಗ ಕುಂಬಾರ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಸುನೀಲ ಕಾಜಗಾರ ನಿರೂಪಿಸಿದರು. ಶಿವಪ್ರಕಾಶ ಮಹಾದೇವ ಕುಂಬಾರ ಕವನ ನಮನ ಹಾಗೂ ಶರಣು ಸಮರ್ಪಣೆ ಸಲ್ಲಿಸಿದರು.

ಕೊನೆಯಲ್ಲಿ ಸತೀಶ ಕಲ್ಲಪ್ಪ ಕುಂಬಾರ ಹಾಗೂ ಶಂಕರ ಕೋಳಿ, ಸಂಗಯ್ಯ ಮಠಪತಿ ಅವರ ಬಸವ ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *