ಶ್ರಾವಣ ಮಾಸ: ಹಾವೇರಿಯಲ್ಲಿ 13ರಿಂದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ:

ಬರುವ ಶ್ರಾವಣ ಮಾಸದ ನಿಮಿತ್ತ ಬಸವ ಬಳಗದ ವತಿಯಿಂದ ಒಂದು ತಿಂಗಳ ಅವಧಿ ನಿರಂತರವಾಗಿ ನಗರದ ಮನೆಗಳಲ್ಲಿ ಬಸವಾದಿ ಶಿವಶರಣರ ತತ್ವಾದಶ೯ ಹಾಗೂ ವಚನ ಸಾಹಿತ್ಯವನ್ನು ಮನೆ- ಮನಕ್ಕೆ ಮುಟ್ಟಿಸುವ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಉದ್ಘಾಟನೆ ಕಾರ್ಯಕ್ರಮ  

13ರಂದು ಸಂಜೆ 6 ಗಂಟೆಗೆ ಜಯದೇವನಗರದ ಹೊಂಡದಮಠದ ಎದುರಿನ ಶ್ರೀ ಶಾರದಾ ಮಾತಾ ಸಭಾಂಗಣದಲ್ಲಿ ನಡೆಯುತ್ತದೆ.

ನೇತೃತ್ವವನ್ನು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅವರು ವಹಿಸಲಿದ್ದು, ಉದ್ಘಾಟನೆಯನ್ನು ಶೋಭಾ ತಾಯಿ ಮಾಗಾವಿ ಅಧ್ಯಕ್ಷರು ದಾನಮ್ಮದೇವಿ ದೇವಸ್ಥಾನ ಕಮಿಟಿ ಇವರು ಮಾಡಲಿದ್ದು, ಬಸವ ಬಳಗದ ಅಧ್ಯಕ್ಷ ವಿ.ಜಿ ಯಳಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಜನಪದ ವಿದ್ವಾಂಸ ಶಂಭು ಬಳಿಗಾರ ಅವರು ಶರಣರು ಹಾಗೂ ಶರಣ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಚನ್ನಬಸವಣ್ಣ ರೊಡ್ಡಣ್ಣವರ ಅವರ ದಾಸೋಹ ಸೇವೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *