ಬಸವಕಲ್ಯಾಣ:
ನಗರದ ಅನುಭವ ಮಂಟಪದಲ್ಲಿ ಶ್ರಾವಣ ಮಾಸದಲ್ಲಿ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮಿಗಳು ನಡೆಸಿಕೊಡುತ್ತಿರುವ ಅಜ್ಞಾತ ಅಮರಗಣಂಗಳ ಆತ್ಮಚರಿತ್ರೆ ಪ್ರವಚನದ ಕರಪತ್ರ ಬಿಡುಗಡೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಶ್ರಾವಣ ಮಾಸದಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಕೇಳುವ ಮೂಲಕ ನಾವು ನಮ್ಮ ಜೀವನ ಶರಣ ಮಾರ್ಗದಲ್ಲಿ ಸಾಗಿಸಬೇಕು. ಶ್ರಾವಣ ಎಂದರೆ ಶ್ರವಣ ಮಾಡುವುದು ಅಂದರೆ ಕೇಳುವುದು. ನಾವು ಒಂದು ತಿಂಗಳು ಶರಣರ ವಿಚಾರಗಳನ್ನ ಕೇಳಿ ಹನ್ನೊಂದು ತಿಂಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
12ನೇ ಶತಮಾನದಲ್ಲಿ ದೇಶದ ಮೂಲೆ ಮೂಲೆಗಳಿಂದ ಶರಣರು ಕಲ್ಯಾಣಕ್ಕೆ ಅನುಭಾವ ಗೋಷ್ಠಿ ಕೇಳಲಿಕ್ಕೆ ಆಗಮಿಸುತ್ತಿದ್ದರು, ಶರಣರು ಅನುಭಾವಕ್ಕೆ ಬಹಳ ಮಹತ್ವ ನೀಡಿದ್ದಾರೆ ಎಂದರು.
ಪೂಜ್ಯ ಶಿವಾನಂದ ಸ್ವಾಮಿಗಳು ಅಧ್ಯಯನಶೀಲರು, ಲಿಂಗಯೋಗಿಗಳು, ಆಗಿದ್ದಾರೆ. ಅವರಿಂದ ಅಜ್ಞಾತ ಅಮರಂಗಣಂಗಳ ಆತ್ಮಚರಿತ್ರೆ ಪ್ರವಚನ ಕೇಳುವುದು ಒಂದು ಸಂಭ್ರಮ, ಎಂದು ಹೇಳಿದರು.
ತಿಂಗಳ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಸಿದ್ದಣ್ಣ ಭೂಮಾ ಮಾತನಾಡಿ, ಶ್ರಾವಣ ಮಾಸದ ನಿಮಿತ್ಯ ಅನುಭವ ಮಂಟಪದಲ್ಲಿ ಆಗಸ್ಟ್ 13 ರಿಂದ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರವಚನ ನೀಡಲಿದ್ದಾರೆ. ನಗರದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನ ಆಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಮಾತೆ ಸುಗುಣಾತಾಯಿ, ಪೂಜ್ಯ ಹಾಲಮ್ಮ ತಾಯಿ, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಬಸವದೇವರು, ಮಹಾದೇವಪ್ಪ ಇಜಾರೆ, ಪ್ರಮೋದ ಶರ್ಮಾ, ಶಿವಪುತ್ರಪ್ಪ ಅವಸೆ, ಜಗನ್ನಾಥ ಪತಂಗೆ, ವೀರೇಶ ಕುಂಬಾರ, ರಾಜಕುಮಾರ ರಟಕಲ್ಲೆ, ರವೀಂದ್ರ ಕೋಳಕೂರ, ಶಂಕರ ಮದರಗೈ, ಶ್ರೀಶೈಲ ಬಿರಾದಾರ, ಪ್ರಭುಶೆಟ್ಟಿ ಜ್ಯಾಂತಿ, ಗಂಗಾಧರ ಬಿರಾದಾರ, ಶಿವಶಂಕರ ಕುಂಬಾರ, ಸರಸ್ವತಿ ಪಾಟೀಲ, ಪ್ರಭಾವತಿ ಅವಸೆ, ಶರಣಮ್ಮ ಮದರಗೈ ಮತ್ತಿತರರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
