ಶಿವಮೊಗ್ಗ ಬಸವಕೇಂದ್ರದಲ್ಲಿ ‘ಶಿವಾನುಭವ ಸಪ್ತಾಹ’

ಬಸವ ಮೀಡಿಯಾ
ಬಸವ ಮೀಡಿಯಾ

ಡಾ. ಪ್ರಭುಶಂಕರರ ‘ಬೆರಗು’ ವಾಚಿಕಾಭಿನಯ ಪ್ರಸ್ತುತಿ

ಶಿವಮೊಗ್ಗ:

ಶಿವಮೊಗ್ಗದ ಬಸವ ಕೇಂದ್ರದಲ್ಲಿ ‘ಶಿವಾನುಭವ ಸಪ್ತಾಹ’ ಅಂಗವಾಗಿ ಕುವೆಂಪು ಅವರ ಶಿಷ್ಯ ಡಾ. ಪ್ರಭುಶಂಕರ ಅವರ ʻಬೆರಗು’ ಕೃತಿಯ ವಾಚಿಕಾಭಿನಯ ಆಯೋಜನೆ ಮಾಡಲಾಗಿದೆ.

ಕಾರ್ಯ್ರಮ ಆಗಸ್ಟ್ 14 ರಿಂದ 20, 2026 ರವರೆಗೆ ಪ್ರತಿದಿನ ಸಂಜೆ 6:30 ಕ್ಕೆ ಆರಂಭಗೊಳ್ಳಲಿದೆ.

ಚಿಕ್ಕಮಗಳೂರು ಬಸವ ತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನೇಟಿವ್ ಥಿಯೇಟರ್ ಪ್ರಸ್ತುತಪಡಿಸುತ್ತಿರುವ ಈ ನಾಟಕಕ್ಕೆ ಹಾಲಸ್ವಾಮಿ ಆರ್.ಎಸ್. ಅವರು ನಿರ್ದೇಶನ ಮಾಡಿದ್ದಾರೆ.

ಈ ವಾಚಿಕಾಭಿನಯದಲ್ಲಿ ರಂಗದ ಮೇಲೆ ಡಾ.ಹೆಚ್.ಎಸ್. ನಾಗಭೂಷಣ, ಡಾ. ಭಾರತಿದೇವಿ ಪಿ., ಎನ್.ಎಸ್. ಸುಧೀಂದ್ರರಾವ್, ಡಾ. ಬಸವರಾಜಪ್ಪ ಎಂ., ಚನ್ನಯ್ಯ ಮಾವಳ್ಳಿ, ಭಾಗ್ಯ ಎಂ.ಟಿ., ತರುವನೂರು ಮಲ್ಲಿಕಾರ್ಜುನ, ಹನಿ ಕುರುವರಿ, ಕೀರ್ತನಾ ವ್ಯಾಸ ಹಾಗೂ ಆಕಾಶ ಆರ್.ಎಸ್. ಅಭಿನಯಿಸಲಿದ್ದಾರೆ.

ಹಾಗೆಯೇ ರಂಗದ ಹಿಂದೆ ರಾಘವೇಂದ್ರ ಪ್ರಭು ಸಂಗೀತ, ಶ್ರೀಪಾದ ತೀರ್ಥಹಳ್ಳಿ ವಚನ ಗಾಯನ ಸಂಯೋಜನೆ, ಡಾ. ಭಾರತಿದೇವಿ ಪಿ., ಕೀರ್ತನಾ ವ್ಯಾಸ್ ಮತ್ತು ಭಾಗ್ಯ ಎಂ.ಟಿ. ಅವರಿಂದ ವಚನ ಗಾಯನವಿರಲಿದೆ. ರಂಗ ಸಜ್ಜೆ ಮತ್ತು ಬೆಳಕಿನ ವ್ಯವಸ್ಥೆಯನ್ನು ಶಂಕರ್ ಬೆಳಲಕಟ್ಟಿ ಹಾಗೂ ದಿನೇಶ್ ನಾಯ್ಕ್ ಜಿ. ನಿರ್ವಹಿಸಲಿದ್ದು, ನಿರ್ಮಾಣ ನಿರ್ವಹಣೆಯನ್ನು ನದಿ ಹೆಚ್.ಪಿ. ನೋಡಿಕೊಳ್ಳಲಿದ್ದಾರೆ.

ಏಳು ದಿನಗಳ ಕಾಲ ಪ್ರತಿದಿನ ಸಂಜೆ ನಡೆಯಲಿರುವ ಈ ವಿಶಿಷ್ಟ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *