ಮೈಸೂರು ಪ್ರಾಂತ್ಯದಲ್ಲಿ ಬಸವತತ್ವಕ್ಕೆ ದುಡಿದ ಚಿದಾನಂದ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗುರುವಾರ ಬಯಲಾದ ಹೊಸಮಠದ ಪೂಜ್ಯ ಚಿದಾನಂದ ಸ್ವಾಮೀಜಿ ಅವರನ್ನು ಪೂಜ್ಯರು, ಗಣ್ಯರು ಸ್ಮರಿಸಿಕೊಂಡಿದ್ದಾರೆ.

ಮೈಸೂರು

ಬಸವ ಜಯಂತಿ ಅದ್ದೂರಿಯಾಗಿ ಮಾಡಿದರು

ಪೂಜ್ಯ ಚಿದಾನಂದ ಮಹಾಸ್ವಾಮೀಜಿ ಲಿಂಗೈಕೈರಾಗಿರುವುದು ಧಾರ್ಮಿಕ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

ಬಸವ ಬಳಗ ಒಕ್ಕೂಟದ ಮೂಲಕ ಬಸವ ಜಯಂತಿಯನ್ನು ಮೈಸೂರಿನಲ್ಲಿ ಅದ್ದೂರಿಯಾಗಿ ಮಾಡಿದ ಕೀರ್ತಿ ಚಿದಾನಂದ ಸ್ವಾಮೀಜಿಯವರಿಗೆ ಸಲ್ಲುತ್ತದೆ.

ಆಡಂಬರದ ಪೂಜೆಯಿಂದ ಹೊರಗಿದ್ದು ಸರಳತೆಯನ್ನು ಅಳವಡಿಸಿಕೊಂದ್ದಿದ್ದರು.ಬಸವಾದಿ ಶರಣರ ಚಿಂತನೆ ಮತ್ತು ಸಮಾವೇಶಗಳಿಗೆ ತಮ್ಮ ಮಠದಲ್ಲಿ ಅವಕಾಶ ಕೊಟ್ಟು ಪ್ರೇರಣಾ ಶಕ್ತಿಯಾದ ಚಿದಾನಂದ ಮಹಾಸ್ವಾಮೀಜಿಯವರಿಗೆ ಅಂತಿಮ ಶರಣಾಂಜಲಿಗಳು

  • – ಸೋಮಹಳ್ಳಿ ಮಠದ ನಿಯೋಜಿತ ಪೂಜ್ಯರಾದ ಬಸವಯೋಗಿಪ್ರಭು ಸ್ವಾಮೀಜಿ

ಬಸವತತ್ವಕ್ಕೆ ದುಡಿದರು

ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಸವ ತತ್ವ ಉಳಿಯಲು ಚಿದಾನಂದ ಸ್ವಾಮೀಜಿ ಕಾರಣ. ಬಸವ ಜಯಂತಿ ರೂಪುರೇಷೆ ಮೂಡಿಸಿ, ಶರಣರ ಸಂದೇಶ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗಿ ಶಿಕ್ಷಣ ಒದಗಿಸಿ, ಮೌಢ್ಯಗಳನ್ನು ಧಿಕ್ಕರಿಸಿ ಉತ್ತಮ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

–ಗೌರಿಶಂಕರ ಸ್ವಾಮೀಜಿ,ಮದ್ಗಾರ ಲಿಂಗಯ್ಯನ ಹುಂಡಿ ಮಠ

ನಾಡಿಗೆ ಬೆಳಕಾಗಿದ್ದರು.

ಮೈಸೂರು ಹೊಸಮಠದ ಚಿದಾನಂದ ಶ್ರೀಗಳು ಈ ನಾಡಿಗೆ ಬೆಳಕಾಗಿದ್ದರು. ಮಾನವೀಯತೆ ಹಾಗೂ ಸಮಾಜಸೇವೆಯ ಮೂಲಕ ಅನೇಕರ ಬದುಕಿಗೆ ಬೆಳಕಾದವರು. ಬಸವ ತತ್ವ ನಿಷ್ಠರಾಗಿದ್ದ ಅವರು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸರಳತೆ, ಸಾತ್ವಿಕತೆ, ಕರುಣೆ ಮತ್ತು ಮಾರ್ಗದರ್ಶನ ಸದಾ ಸ್ಮರಣೀಯ.

ಅಪಾರ ಭಕ್ತ ವೃಂದ ಹೊಂದಿದ್ದ ಅವರು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಹಿಂದುಳಿದ ಮಕ್ಕಳಿಗೆ ಅವಕಾಶ ಕಲ್ಪಿಸಿ, ವಿದ್ಯಾಭ್ಯಾಸಕ್ಕೆ ಶ್ರಮಿಸಿದ್ದಾರೆ. ಸ್ವಾಮೀಜಿ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಚಿಂತನೆ ಉಳಿಸಿಕೊಂಡು ಹೋಗಬೇಕಿದೆ

ಹೊಸಮಠವನ್ನು ಕಷ್ಟದಿಂದ ಕಟ್ಟಿ ಬೆಳೆಸಿದರು. ಮಠದ ಅಭಿವೃದ್ಧಿಯಲ್ಲಿ ಕೊಡುಗೆ ಅಸಾಮಾನ್ಯ. ರಾಜೇಂದ್ರ ಸ್ವಾಮೀಜಿ ಒಡನಾಡಿಯಾಗಿ ಮೈಸೂರು ಪ್ರಾಂತ್ಯದ ಎಲ್ಲ ಸ್ವಾಮೀಜಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸರಳ ಸಜ್ಜನಿಕೆಯ ವಿಶಾಲ ಹೃದಯಿಗಳು. ಹಿರಿಯ, ಕಿರಿಯ ಎಂಬ ಯಾವುದೇ ಭೇದಭಾವ ಇರಲಿಲ್ಲ. ಎಲ್ಲರನ್ನೂ ಸರಿಸಮಾನರಾಗಿ ಕಂಡವರು. ಅವರ ಅನುಪಸ್ಥಿತಿಯಲ್ಲಿ ಮಠದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು

ಈಶ್ವರ ಖಂಡ್ರೆ
ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

ಭೇದಭಾವ ಇರಲಿಲ್ಲ

ಚಿದಾನಂದ ಸ್ವಾಮೀಜಿ ಅವರಲ್ಲಿ ಜಾತಿ, ಮತದ ಭೇದಭಾವ ಇರಲಿಲ್ಲ. ಶರಣರ ತತ್ವ ಅನುಸರಿಸಿಕೊಂಡು ಆಡಂಬರವಿಲ್ಲದೆ ಸರಳವಾಗಿ ಬದುಕು ನಡೆಸಿದರು. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ವಿದ್ಯೆಗಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದು ನಂಬಿದ್ದರು. ಅವರ ಆಶಯದಂತೆ ಎಲ್ಲರೂ ನಡೆಯಬೇಕು

  • ನಡಪ್ಪನಹಳ್ಳಿ ಎಸ್‌.ಎಸ್‌.ವೀರಪ್ಪ, (ಸ್ವಾಮೀಜಿ ಪೂರ್ವಾಶ್ರಮದ ಮಿತ್ರ), ಕೆ.ಆರ್.ನಗರ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *