ಶಿಗ್ಗಾವಿ:
‘ಮೌಢ್ಯಾಚರಣೆಗಳನ್ನು ಬದಿಗಿಟ್ಟು ಹಬ್ಬಗಳ ಮೂಲ ಅಸ್ತಿತ್ವಗಳತ್ತ ಗಮನಹರಿಸಬೇಕು’. ಹಬ್ಬಗಳ ಆಚರಣೆಯ ಹಿಂದಿನ ನಿಜಾರ್ಥವನ್ನು ಅರಿತು ಆಚರಿಸಬೇಕು,’ ಎಂದು ಬಂಕಾಪುರ ಪಟ್ಟಣದ ದೇಸಾಯಿಮಠದ ಪೂಜ್ಯ ಮಹಾಂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿಮಠದಲ್ಲಿ ಭಾನುವಾರ ಬಸವ ಪಂಚಮಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.
ಮೂಢನಂಬಿಕೆ ಮತ್ತು ಕಂದಾಚಾರಗಳು ಹಬ್ಬಹರಿದಿನಗಳಿಂದ ದೂರಾಗಬೇಕು ಎಂಬ ಸಂದೇಶದೊಂದಿಗೆ ಮಕ್ಕಳಿಗೆ ಹಾಲು ನೀಡಬೇಕಾಗಿದೆ. ಇಂದು ಕಲ್ಲು, ಮಣ್ಣಿನ ಮೂರ್ತಿಗಳಿಗೆ ಹಾಲೆರೆದು ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶದ ಹಾಲು ನಾಶಮಾಡುತ್ತಿದ್ದಾರೆ.

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿರಿ. ರೈತರು ಹೆಚ್ಚಾಗಿ ಹೈನುಗಾರಿಕೆ ಮಾಡುವ ಜತೆಗೆ ಮಕ್ಕಳಿಗೆ ಹಾಲು ಕುಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಬಂಕಾಪುರ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ, ಹುಚ್ಚಯ್ಯನವರು ಹುಚ್ಚಯ್ಯನಮಠ, ಗಿರಿರಾಜ ದೇಸಾಯಿ, ರೈತ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹಳವಳ್ಳಿ, ಮಾಲತೇಶ ಸಕ್ರಿ, ಶಂಭಣ್ಣ ಕುರಗೋಡಿ, ವಿರೂಪಾಕ್ಷಪ್ಪ ರಾಣೋಜಿ ಸೇರಿದಂತೆ ರೈತ ಸಂಘದ ಅನೇಕ ಮುಖಂಡರು ಮತ್ತು ವಿವಿಧ ಸಮಾಜಗಳ ಮುಖಂಡರು ಇದ್ದರು.

ಬಂಕಾಪುರದ ಪೂಜ್ಯ ಶ್ರೀ ಮನಿಪ್ರ ಮಹಾಂತ ಸ್ವಾಮಿಗಳವರಿಗೂ ಮತ್ತು ಗ್ರಾಮದ ಎಲ್ಲ ಹಿರಿಯರಿಗೂ ಭಕ್ತಿಯ ಶರಣು ಶರಣಾರ್ಥಿಗಳು .
ನಾಡಿನ ನಾಗರ ಪಂಚಮಿ ಹಬ್ಬವು, ನಮಗೆ ಬಸವ ಪಂಚಮಿ ಹಬ್ಬವಾಗಬೇಕು. ಹಾಲು ಆಪ್ಯಾಯನ ಪ್ರಸಾದ ಮತ್ತು ಪೌಷ್ಟಿಕವಾದದ್ದು . ಹಾವು ಹಾಲು ಕುಡಿಯುವುದಿಲ್ಲ. ಅದರ ಮುಖ್ಯ ಆಹಾರ ವಾಯು ಮತ್ತು ಹುಳ ಹುಪ್ಪಡಿ. ವಾಯು ಗುಣವ ಸರ್ಪ ಬಲ್ಲುದು, ಮಧುರ ಗುಣವ ಇರುವೆ ಬಲ್ಲುದು, ಗೋತ್ರದ ಗುಣವ ಕಾಗೆ ಬಲ್ಲುದೆ ಎಂಬ ವಚನವಿದೆ.
ಕಲ್ಲು ಮಣ್ಣುಗಳ ಹಾವಿನ ಹೆಡೆ ಮಾಡಿ ಅಮೃತ ಸಮಾನವಾದ ಹಾಲನ್ನು ಅವುಗಳ ಮೇಲೆ ಸುರಿದರೇನು ಫಲ ? ಅಪ್ಪ ಬಸವಣ್ಣನವರ ವಚನ:- ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು; ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ! ಉಂಬ ಜಂಗಮ ಬಂದಡೆ ನಡೆಯೆಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ .
ಈ ತತ್ವವನ್ನು ಆಚರಣೆಯಲ್ಲಿ ತಂದ ಬಂಕಾಪುರದ ಪೂಜ್ಯ ಶ್ರೀಗಳವರಿಗೆ ಮತ್ತು ಗುರು ಹಿರಿಯರಿಗೂ ಮತ್ತೊಮ್ಮೆ ಮಗದೊಮ್ಮೆ ಶರಣು ಶರಣಾರ್ಥಿಗಳು.
ಈ ಹಬ್ಬವನ್ನು ಹಾಲು ಕುಡಿಯುವ ಹಬ್ಬವಾಗಿ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇಲಕಲ್ಲ ಚಿತ್ತರಗಿ ಸಂಸ್ಥಾನ ವಿಜಯ ಮಹಾಂತೇಶ್ ಮಠದ ಪರಮ ಪೂಜ್ಯ ಶ್ರೀ ಮನಿಪ್ರ ಮಹಾಂತ ಶಿವಯೋಗಿಗಳು ಸವದಿ ವಾಸ್ತವ್ಯದಲ್ಲಿ . 🌹🌹🌹🌹🌹🌹🙏🙏🙏🙏🙏🙏….