ಮನೆ ಮನೆಗಳಿಗೆ ಬಸವ: ಹೊಸಪೇಟೆಯಲ್ಲಿ ಶ್ರಾವಣ ಕಾರ್ಯಕ್ರಮ

ಹೊಸಪೇಟೆ:

ಶ್ರಾವಣ ಮಾಸದ ಅಂಗವಾಗಿ ಬಸವ ಬಳಗದ ವತಿಯಿಂದ ಹಮ್ಮಿಕೊಂಡಿರುವ ”ಮನೆ ಮನೆಗಳಿಗೆ ಬಸವ” ಎಂಬ ಐದನೇ ದಿನದ ಕಾರ್ಯಕ್ರಮವು, ಸೋಮವಾರ ಸಂಜೆ ಗೊಗ್ಗ ಚನ್ನಬಸವರಾಜ ಅವರ ನಿವಾಸದಲ್ಲಿ ನೆರವೇರಿತು.

ಕಾರ್ಯಕ್ರಮವು ಗುರುಬಸವ ಪೂಜೆಯೊಂದಿಗೆ ಪ್ರಾರಂಭಗೊಂಡು, ನಂತರ ಮಕ್ಕಳೊಂದಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಟಿ. ಹೆಚ್. ಬಸವರಾಜ ನಡೆಸಿಕೊಟ್ಟರು.

ಅತ್ಯಂತ ಕಡಿಮೆ ಸಮಯದಲ್ಲಿ ಯಾವುದೇ ಖರ್ಚು ವೆಚ್ಚವಿಲ್ಲದೆ, ಯಾವುದೇ ಆಡಂಬರವಿಲ್ಲದೆ, ಅತ್ಯಂತ ಸರಳವಾಗಿ ಪ್ರತಿಯೊಬ್ಬರು ಹೇಗೆ ಇಷ್ಟಲಿಂಗ ಪೂಜೆಯನ್ನು ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಿ, ಇಷ್ಟಲಿಂಗ ಪೂಜೆಯಿಂದಾಗುವ ವೈಜ್ಞಾನಿಕ ಪರಿಣಾಮಗಳನ್ನು ವಿವರಿಸಿದರು.

ಬಸವ ಬಳಗದ ಅನ್ನಪೂರ್ಣ ಅಕ್ಕನವರು ವಚನಾನುಭವ ನೀಡಿ, ಲಿಂಗಾಯತರ ಸಂಪ್ರದಾಯಗಳು ಹೇಗಿರಬೇಕು ಎನ್ನುವುದನ್ನು ವಿವರಿಸಿದರು. ಲಿಂಗಾಯತ ಕುಟುಂಬಗಳು ಮೌಢ್ಯತೆಯ ಆಚರಣೆಗಳಿಂದ ಹೊರಬರಬೇಕು ಹಾಗೂ ಲಿಂಗಾಯತ ನಿಜಾಚರಣೆಗಳನ್ನು ಅನುಸರಿಸಿ ಆಚರಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಮನೆ ಮನೆಗೆ ಬಸವ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮ ನಡೆಸಿಕೊಟ್ಟ ಕುಟುಂಬ ಹಾಗೂ ಸಮಾಜದ ಹಿರಿಯರಾದ ಗೊಗ್ಗ ಚನ್ನಬಸವರಾಜ ಅಣ್ಣನವರು ಮಾತನಾಡಿ, ಬಸವ ಬಳಗದವರು ಹೊಸಪೇಟೆಯಲ್ಲಿ ತುಂಬಾ ಉತ್ತಮ ಕಾರ್ಯಕ್ರಮ ಮಾಡುತ್ತಿದ್ದು, ಈ ಕಾರ್ಯ ಹೀಗೆ ನಿರಂತರ ನಡೆಯಲಿ ಎಂದು ಆಶಿಸಿದರು.

ಬಸವ ಬಳಗದ ಬಸವರಾಜ ಎಸ್. ಮಾವಿನಹಳ್ಳಿ, ಮಧುರಚೆನ್ನ ಶಾಸ್ತ್ರಿ, ರವಿಶಂಕರ, ಲೋಕೇಶ ಅವರಾದಿ, ಎಲ್. ಬಸವರಾಜ, ಶಾಂತಲಿಂಗಪ್ಪ, ನಾಡಗೌಡ, ಸಾಲಿ ಬಸವರಾಜ, ಜಾಲಿ ಪ್ರಕಾಶ, ಕೋರಿಶೆಟ್ಟರ ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕುಟುಂಬದ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕಾರ್ಯಕ್ರಮ ಬಸವ ಭಜನೆಯೊಂದಿಗೆ ಮಂಗಳಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *